ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ರಬ್ಬರ್ ಸರಕುಗಳ ಮೇಲೆ ಪ್ರಸ್ತುತ ವಿಧಿಸಲಾಗಿರುವ ಶೇ.26 ಆಮದು ಸುಂಕದ ಪರಿಣಾಮವಾಗಿ ಭಾರತೀಯ ರಬ್ಬರ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಖರೀದಿದಾರರು ಭಾರತೀಯ ರಬ್ಬರ್ ಉದ್ಯಮಗಳಿಗೆ ಸಲಹೆ ನೀಡಿದ್ದಾರೆ.…..ಮುಂದೆ ಓದಿ….
ಟ್ರಂಪ್ ಅವರ ಸುಂಕಗಳು ರಬ್ಬರ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಅಖಿಲ ಭಾರತ ರಬ್ಬರ್ ಕೈಗಾರಿಕೆಗಳ ಸಂಘವು ಕಳವಳ ವ್ಯಕ್ತಪಡಿಸಿದೆ. ಈಗಾಗಲೇ ಯುಎಸ್‌ನಲ್ಲಿರುವ ಖರೀದಿದಾರರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಮಗೆ ಸಲಹೆ ನೀಡಿದ್ದಾರೆ ಎಂದು ಕೈಗಾರಿಕಾ ಸಂಘ ಹೇಳಿದೆ. ಈಗ ಇರುವ ದಾಸ್ತಾನು ಕ್ಲಿಯರ್ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಆ ದಾಸ್ತಾನುಗಳು ಖಾಲಿಯಾದ ನಂತರವೇ ಹೊಸ ಬೇಡಿಕೆ ಬರಲಿದೆ. ಆ ಹೊತ್ತಿಗೆ ಬೆಲೆಯೂ ನಿರ್ಣಾಯಕವಾಗಬಹುದು ಎಂದು ರಬ್ಬರ್ ಉದ್ಯಮಗಳ ಪ್ರಮುಖರು ಆತಂಕ ವ್ಯಕ್ತಪಡಿಸಿದ್ದಾರೆ.
ಆಮದು ಸುಂಕದ ಪರಿಣಾಮವಾಗಿ ಟರ್ಕಿ ಮತ್ತು ವಿಯೆಟ್ನಾಂನಿಂದ ಕಡಿಮೆ ದರದಲ್ಲಿ ಆಮದುಗಳು ಯುಎಸ್ ಮಾರುಕಟ್ಟೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇದು ಭಾರತೀಯ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಬಹುದಾಗಿದೆ. ಟರ್ಕಿಗೆ ಹೋಲಿಸಿದರೆ, ಕೇವಲ ಶೇಕಡಾ 10 ರಷ್ಟು ಆಮದು ಸುಂಕವನ್ನು ವಿಧಿಸಲಾಗುತ್ತದೆ ಹಾಗೂ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಶೂನ್ಯ ಸುಂಕವನ್ನು ಹೊಂದಿರುವ ವಿಯೆಟ್ನಾಂ ಕೂಡಾ ಲಾಭವನ್ನು ಪಡೆಯಲಿದೆ ಎಂದು ಅಖಿಲ ಭಾರತ ರಬ್ಬರ್ ಕೈಗಾರಿಕೆಗಳ ಸಂಘ ಹೇಳಿದೆ.…..ಮುಂದೆ ಓದಿ….
ಭಾರತದ ರಬ್ಬರ್ ಉದ್ಯಮವು ಸಂಕಷ್ಟ ಎದುರಿಸಿದರೆ ಭಾರತದ ರಬ್ಬರ್ ಬೆಳೆಗಾರರು ಕೂಡಾ ಮತ್ತೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಸದ್ಯ ಕೆಲವು ಸಮಯಗಳಿಂದ ರಬ್ಬರ್ 180 ರೂಪಾಯಿಗಿಂತ ಅಧಿಕ ಧಾರಣೆಯನ್ನು ಹೊಂದಿದೆ. ಸುಂಕದ ಕಾರಣದಿಂದ ರಬ್ಬರ್ ಉದ್ಯಮದ ಅಸ್ಥಿರತೆಯ ಕಾರಣದಿಂದ ವಾರದ ಹಿಂದೆ ಧಾರಣೆಯಲ್ಲೂ ಏರುಪೇರು ಕಂಡು ಬಂದಿದೆ. ಸದ್ಯ ಧಾರಣೆಯ ಮೇಲೆ ಪರಿಣಾಮ ಬಿದ್ದಿಲ್ಲ, ಆದರೆ ದೀರ್ಘಾವಧಿಯಲ್ಲಿ ರಬ್ಬರ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ರಬ್ಬರ್ ಆಮದು ಮೇಲೆಯೂ ನಿಯಂತ್ರಣ ಅಗತ್ಯ ಇದೆ ಎಂದು ಬೆಳೆಗಾರರ ಒಕ್ಕೂಟ ಹೇಳಿದೆ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…