ಹಳಸಿದ ಆಹಾರ ಕೊಟ್ರಿ ಜೋಕೆ – ಈ ಸಾಧನ ಕಂಡು ಹಿಡಿಯುತ್ತೆ ಆಹಾರ ಫ್ರೆಶ್ ಇದಿಯಾ ಇಲ್ವಾ ಅಂತ : ಭಾರತೀಯ ವಿಜ್ಞಾನಿಗಳ ಸಾಧನೆ

March 21, 2023
7:50 PM

ಹೋಟೆಲ್ ನವರು ಇನ್ನು ಮುಂದೆ ಹಳಸಿದ ಆಹಾರ ನಿಮ್ಮ ಗ್ರಾಹಕರಿಗೆ ನೀಡಿದ್ರಿ ನಿಮ್ಮ ನಸೀಬು ಕೆಟ್ಟಂಗೆ. ಇಲ್ಲೊಂದು ಸಾಧನ ನೀವು ಕೊಟ್ಟ ಆಹಾರ ಕೆಟ್ಟಿದ್ಯಾ..? ಇಲ್ಲಾ ಫ್ರೆಶ್ ಇದಿಯಾ ಅಂತ ಕಂಡು ಹಿಡಿಯುತ್ತೆ. ಅಮೇರಿಕಾದಲ್ಲಿ ಭಾರತೀಯ ಸಂಶೋಧಕರೊಬ್ಬರು ಸಣ್ಣ ಹಾಗೂ ಕಡಿಮೆ ಖರ್ಚಿನ ಅಸಿಡಿಟಿ ಸೆನ್ಸರ್ ನ್ನು ಅಭಿವೃದ್ಧಿಪಡಿಸಿದ್ದು, ಇದು ಆಹಾರ ಹಳಸಿದಾಗ ಅದರ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.

Advertisement
Advertisement
Advertisement

ಇದು ಹೊಟೇಲ್ ಹೋದಾಗಲು ನಮಗೆ ಸಹಾಯ ಾಗಬಹುದು. ಆದರೆ ಇದರ ುಪಯೋಗ ುನ್ನತಮಟ್ಟದ್ದಾಗಿದೆ. ಕೇವಲ 2 ಎಂಎಂ ಗಳಷ್ಟು ಉದ್ದ, 10 ಮಿಲಿಮೀಟರ್ ಅಗಲವಿರುವ ಫ್ಲೆಕ್ಸಿಬಲ್ ಪಿಹೆಚ್ ಸೆನ್ಸರ್ plastic wrapping ಸೇರಿದಂತೆ ಆಹಾರ ಪ್ಯಾಕಿಂಗ್ ವಿಧಾನಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Advertisement

ಪಿಹೆಚ್ ಮಟ್ಟವನ್ನು ಅಳೆಯುವುದಕ್ಕೆ ಅಥವಾ ಆಹಾರ ಎಷ್ಟು ಪ್ರಮಾಣದಲ್ಲಿದೆ? ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಾಗಿ ದೊಡ್ಡ ಮೀಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಯಾವುದು ಪ್ಯಾಕೇಜ್ ಗೆ ಸೂಕ್ತವಲ್ಲ ಎಂಬುದನ್ನು ನಿರ್ಧರಿಸಲಾಗುತ್ತದೆ.

ನಾವು ಅಭಿವೃದ್ಧಿಪಡಿಸಿರುವ ಪಿಹೆಚ್ ಸೆನ್ಸರ್ ಗಳು ಸಣ್ಣ ನಿಸ್ತಂತು ರೇಡಿಯೋ-ಫ್ರೀಕ್ವೆನ್ಸಿ ಗುರುತಿನ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಇದು ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಒಳಗೆ ಏನಿದೆ ಎಂಬುದನ್ನು ಪತ್ತೆ ಮಾಡಲು ಬಳಸುವ ವಿಧಾನವನ್ನು ಹೋಲುತ್ತದೆ ಎಂದು ಸಾಧನವನ್ನು ಅಭಿವೃದ್ಧಿಪಡಿಸಿರುವ ಟೆಕ್ಸಾಸ್ ನಲ್ಲಿರುವ ಪಿಹೆಚ್ ಡಿ ವಿದ್ಯಾರ್ಥಿ ಖೆಂಗ್ಡುಲಿಯು ಚವಾಂಗ್ ಹೇಳಿದ್ದಾರೆ.

Advertisement

ಶಿಪ್ಪಿಂಗ್ ಲಾಜಿಸ್ಟಿಕ್ಸ್ ಕೇಂದ್ರಗಳು, ಬಂದರುಗಳು, ಗೇಟ್‌ಗಳು ಅಥವಾ ಸೂಪರ್‌ಮಾರ್ಕೆಟ್‌ಗಳ ಪ್ರವೇಶದ್ವಾರಗಳು ಫುಡ್ ಪ್ಯಾಕೇಜ್ ನಮ್ಮ ಸಾಧನದ ಮೂಲಕ ಚೆಕ್ ಪಾಯಿಂಟ್ ನ್ನು ಹಾದುಹೋದಾಗ ಸ್ಕ್ಯಾನ್ ಮಾಡಿ ಆ ಡೇಟಾವನ್ನು ಅವುಗಳ ಪಿಹೆಚ್ ಮಟ್ಟವನ್ನು ತಿಳಿಯುವುದಕ್ಕೆ ಸರ್ವರ್ ಗಳಿಗೆ ಕಳಿಸಲಾಗುತ್ತದೆ ಎಂದು ಚವಾಂಗ್ ಹೇಳಿದ್ದಾರೆ.

Advertisement

ಈ ರೀತಿಯ ಸಂರಚನೆ ನಿರಂತರ pH ಮಟ್ಟವನ್ನು ತಿಳಿಯುವುದಕ್ಕೆ ಅವಕಾಶ ನೀಡುತ್ತದೆ ಮತ್ತು ತೋಟಗಳಿಂದ ಗ್ರಾಹಕರ ಮನೆಗಳವರೆಗೆ ತಾಜಾತನದ ಮಟ್ಟವನ್ನು ನಿಖರವಾಗಿ ಪತ್ತೆ ಮಾಡುತ್ತದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಸುಮಾರು 1.3 ಶತಕೋಟಿ ಮೆಟ್ರಿಕ್ ಟನ್ ಆಹಾರವು ಪ್ರತಿ ವರ್ಷ ವ್ಯರ್ಥವಾಗುತ್ತದೆ. ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ನಾಗಾಲ್ಯಾಂಡ್ ಮೂಲದವರಾದ ಚವಾಂಗ್ ಅವರು ವೈಯಕ್ತಿಕ ಆಸಕ್ತಿ ವಹಿಸಿ ಈ ಸಾಧನ ಅಭಿವೃದ್ಧಿಪಡಿಸಿದ್ದಾರೆ.

Advertisement

ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (IEEE) ಬಿಗ್ ಐಡಿಯಾಸ್ ಸ್ಪರ್ಧೆಯಲ್ಲಿ 2022 IEEE ಸಂವೇದಕಗಳ ಸಮ್ಮೇಳನದಲ್ಲಿ ಚಾವಾಂಗ್ ಅವರನ್ನು ಈ  ಆವಿಷ್ಕಾರಕ್ಕಾಗಿ ಗೌರವಿಸಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror