ವಯನಾಡ್ ಭೂಕುಸಿತ | ಭೂಕುಸಿತ ಪ್ರದೇಶಕ್ಕೆ ಸೇನೆಯ ಸೇತುವೆ | 24 ಗಂಟೆಯಲ್ಲಿ ನಿರ್ಮಾಣವಾದ ಲೋಹದ ಸೇತುವೆ |

August 1, 2024
3:11 PM
ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಪ್ರದೇಶದಲ್ಲಿ  ಹೆಚ್ಚು ಹಾನಿಗೊಳಗಾದ ಪ್ರದೇಶವನ್ನು ಸಂಪರ್ಕಿಸಲು ಭಾರತೀಯ ಸೈನಿಕರು ಲೋಹದ ಸೇತುವೆಯನ್ನು ನಿರ್ಮಿಸಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಪ್ರದೇಶದಲ್ಲಿ  ಹೆಚ್ಚು ಹಾನಿಗೊಳಗಾದ ಪ್ರದೇಶವನ್ನು ಸಂಪರ್ಕಿಸಲು ಭಾರತೀಯ ಸೈನಿಕರು ಲೋಹದ ಸೇತುವೆಯನ್ನು ನಿರ್ಮಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಹಗಲು ರಾತ್ರಿ ಎನ್ನದೆ ನಡೆದ ಕಾರ್ಯದಲ್ಲಿ ಈ ಸೇತುವೆ ಕಾರ್ಯ ನಡೆದಿದೆ. ಸೇತುವೆ ನಿರ್ಮಾಣದ ಬೆನ್ನಿಗೇ ಬದುಕುಳಿದವರು ಮತ್ತು ಮೃತದೇಹಗಳ ಹುಡುಕಾಟವು ಮೂರನೇ ದಿನಕ್ಕೆ ಕಾಲಿಟ್ಟಿದೆ. ……….ಮುಂದೆ ಓದಿ……..

Advertisement
Advertisement
Advertisement

ಭಾರೀ ಮಳೆಯ ನಡುವೆ ಮಂಗಳವಾರ ಮುಂಜಾನೆ ವಯನಾಡ್ ಜಿಲ್ಲೆಯ ಮುಂಡಕ್ಕೈ ಆಸುಪಾಸಿನ ಪ್ರದೇಶದಲ್ಲಿ  ಗುಡ್ಡ ಕುಸಿತ ನಡೆಯಿತು. ಕುಸಿತದ ಕಾರಣದಿಂದ ಮಣ್ಣು, ನೀರು , ಬಂಡೆ , ಮರಗಳು ಕೊಚ್ಚಿ ಬಂದು ಇಡೀ ಗ್ರಾಮದವೇ ನಾಶವಾಯಿತು.  ರಾತ್ರಿ ವೇಳೆ ನಡೆದ ಈ ದುರ್ಘಟನೆಗೆ 200 ಕ್ಕೂ ಹೆಚ್ಚು ಮಂದಿ ಬಲಿಯಾದರು. ನೀರಿನ ರಭಸಕ್ಕೆ ಸ್ಥಳೀಯ ನದಿ ಎಲ್ಲೆಂದರಲ್ಲಿ ಹರಿಯಿತು, ಸೇತುವೆಗಳೂ ಕೊಚ್ಚಿ ಹೋದವು. ಕೆಲವು ಪ್ರದೇಶದ ಸಂಪರ್ಕವೇ ಕಡಿತಗೊಂಡಿತು. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು. ಇದಕ್ಕಾಗಿ ಸುಮಾರು  190 ಅಡಿಯ  ಸೇತುವೆಯನ್ನು ನಿರ್ಮಿಸಲು ಸೇನಾ ಎಂಜಿನಿಯರ್‌ಗಳು ಹರಸಾಹಸ ಪಟ್ಟು , ಯಶಸ್ವಿಯಾದರು. 24 ಗಂಟೆಯಲ್ಲಿ ಈ ಕಾರ್ಯವನ್ನು ಪೂರ್ತಿಗೊಳಿಸಿದರು.……….ಮುಂದೆ ಓದಿ……..

Advertisement

Advertisement

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ನದಿಯ ನೀರಿನ ಮಟ್ಟ ಹೆಚ್ಚುತ್ತಿರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸವಾಲುಗಳ ನಡುವೆ ಭಾರತೀಯ ಸೇನೆ ಕೆಲಸ ಮಾಡಿದೆ. ಲೋಹದ ಸೇತುವೆಯ ನಿರ್ಮಾಣ ಪೂರ್ಣಗೊಂಡ ನಂತರ ಮತ್ತು ಅಧಿಕಾರಿಗಳು ಶೋಧ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

Advertisement

Advertisement

Indian soldiers rushed to complete construction of a metal bridge on Thursday to connect the worst affected area in the Kerala landslides as the search for survivors and bodies entered the third day in a disaster that has killed at least 200 people.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror