ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೃಷಿ ಯಂತ್ರೋಪಕರಣಗಳನ್ನು ಸಾಗಾಟ ಮಾಡಲು ರೈಲ್ವೇ ಇಲಾಖೆ ಸಹಕಾರ ನೀಡಿದೆ.
Advertisement
ಗಂಗಾವತಿ ರೈಲು ನಿಲ್ದಾಣದಲ್ಲಿ ನೂರಾರು ಭತ್ತ ಕೊಯ್ಲು ಯಂತ್ರಗಳನ್ನು ರೈಲ್ವೆ ಬೋಗಿಗಳ ಮೂಲಕ ಸಾಗಾಟ ಮಾಡಲಾಯಿತು. ಗಂಗಾವತಿ ಭಾಗಕ್ಕೆ ರೈಲು ಸೇವೆ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಯಂತ್ರಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲಾಗುತ್ತಿದೆ. ನೂರಾರು ಭತ್ತದ ಕೊಯ್ಲು ಯಂತ್ರಗಳು ಜಿಲ್ಲೆಯಿಂದ ರೈಲು ಮೂಲಕ ತಮಿಳುನಾಡಿಗೆ ವಲಸೆ ಶುರು ಮಾಡಿವೆ. ಈ ಬಗ್ಗೆ ಹುಬ್ಬಳ್ಳಿಯ ಡೆಪ್ಯೂಟಿ ರೈಲ್ವೆ ಮ್ಯಾನೇಜರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯಂತ್ರಗಳ ಸಾಗಣೆಯನ್ನು ಉಲ್ಲೇಖಿಸಿದ್ದಾರೆ.
Advertisement
ಸಾರ್ವಜನಿಕರಿಗೆ ಉತ್ತಮ ಸಾರಿಗೆ ಹಾಗೂ ಸರಕು ಸಾಗಾಣಿಕೆಯ ಸೇವೆಯನ್ನು ನೀಡುತ್ತಿರುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಇಂದು ಕೃಷಿ ಉತ್ತೇಜನಕ್ಕೆ ಸಹ ಸಾಕ್ಷಿಯಾಗಿ ನಿಂತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement