ವೈದ್ಯಕೀಯ ಜರ್ನಲ್ ಭಾರತೀಯರಲ್ಲಿ ಸ್ಥೂಲಕಾಯದ ಅಪಾಯಕಾರಿ ದರವನ್ನು ಬಹಿರಂಗಪಡಿಸಿದೆ. ಒಟ್ಟು ಜನಸಂಖ್ಯೆಯಲ್ಲಿ 8 ಕೋಟಿ ಮಂದಿ ವಯಸ್ಕರು ಹಾಗೂ 5-19 ವಯಸ್ಸಿನ 1 ಕೋಟಿ ಮಕ್ಕಳು ಬೊಜ್ಜು ಹೊಂದಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯ ಜಾಗತಿಕ ಪ್ರವೃತ್ತಿಯನ್ನು ವರದಿ ಉಲ್ಲೇಖಿಸಿದೆ. 1990 ರಿಂದ 2022 ರ ವರೆಗೆ 188 ದೇಶಗಳ ಮಹಿಳೆಯರಲ್ಲಿ ಭಾರತದ ಬೊಜ್ಜು ದರವು 94% ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿದೆ. ದಿ ಲ್ಯಾನ್ಸೆಟ್ ಪೇಪರ್ ಪ್ರಕಾರ, ಭಾರತದಲ್ಲಿ, ಬೊಜ್ಜು ದರವು 1990 ರಲ್ಲಿ 0.1% ರಿಂದ 2022 ರಲ್ಲಿ 3.1% ಗೆ ಹುಡುಗಿಯರಿಗೆ ಮತ್ತು 0.1% ರಿಂದ 3.9% ಗೆ ಹುಡುಗರಲ್ಲಿ ಹೆಚ್ಚಾಗಿದೆ. ವಯಸ್ಕರಲ್ಲಿ, ಮಹಿಳೆಯರಿಗೆ ಬೊಜ್ಜು ದರವು 1990 ರಲ್ಲಿ 1.2% ರಿಂದ 2022 ರಲ್ಲಿ 9.8% ಕ್ಕೆ ಮತ್ತು ಪುರುಷರಲ್ಲಿ 0.5% ರಿಂದ 5.4% ಕ್ಕೆ ಏರಿತು.
ವರದಿಯಲ್ಲಿ ಏನಿದೆ? : 1990 ರಲ್ಲಿ ಭಾರತದ 5-19 ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ಪ್ರಮಾಣವು 4 ಲಕ್ಷದಷ್ಟಿತ್ತು. 2022 ರ ಹೊತ್ತಿಗೆ ಅದು 1.02 ಕೋಟಿಗೆ ಏರಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ಥೂಲಕಾಯತೆಯು 1990 ರಲ್ಲಿ 20.04 ಲಕ್ಷದಷ್ಟಿತ್ತು. ಆದರೆ 2022ರ ವೇಳೆಗೆ 4.04 ಕೋಟಿಗಿಂತಲೂ ಹೆಚ್ಚಾಗಿದೆ. 1990 ರಲ್ಲಿ ಅದೇ ವಯೋಮಾನದ 2.06 ಕೋಟಿ ಪುರುಷರು ಬೊಜ್ಜು ಹೊಂದಿದ್ದರು. 2022 ರಲ್ಲಿ ಮಹಿಳೆಯರಲ್ಲಿ ಸ್ಥೂಲಕಾಯತೆಗಾಗಿ 197 ದೇಶಗಳ ಪೈಕಿ ಭಾರತವು 182 ನೇ ಸ್ಥಾನದಲ್ಲಿದೆ. ಪುರುಷರ ಅಂಕಿಅಂಶಕ್ಕೆ ಬಂದಾಗ ಜಾಗತಿಕವಾಗಿ 180ನೇ ಸ್ಥಾನದಲ್ಲಿದೆ. ಇನ್ನು ಯುವಜನರ ವರ್ಗದಲ್ಲಿ 174ನೇ ಸ್ಥಾನದಲ್ಲಿ ಭಾರತ ಇದೆ.
ಸ್ಥೂಲಕಾಯತೆ ಎಂದರೇನು? : ದೇಹದಲ್ಲಿನ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯೇ ಬೊಜ್ಜು. ಅದು ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ತಿಳಿಸಿದೆ. 25 ಕ್ಕಿಂತ ಹೆಚ್ಚಿನ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅನ್ನು ‘ಅಧಿಕ ತೂಕ’ ಎಂದು ಪರಿಗಣಿಸಲಾಗುತ್ತದೆ. 30 ಕ್ಕಿಂತ ಹೆಚ್ಚಿನ ಬಿಎಂಐಯನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಬಿಎಂಐ ಎಂದರೆ, ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದ ಕೊಬ್ಬಿನ ಅಂಶವನ್ನು ಅಳತೆ ಮಾಡುವುದು. ಭಾರತ ಇದೀಗ ಬೊಜ್ಜು ಎಂಬ ಟೈಂಬಾಂಬ್ ಮೇಲೆ ಕುಳಿತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪುರುಷರಿಗಿಂತ ಮಹಿಳೆಯರಲ್ಲೇ ಬೊಜ್ಜು ಜಾಸ್ತಿ ಯಾಕೆ? : ಮಹಿಳೆಯರು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ. ಹೆಚ್ಚಾಗಿ ಮನೆಗೆಲಸಕ್ಕೇ ಸೀಮಿತರಾಗಿದ್ದಾರೆ. ಭಾರತದಲ್ಲಿ ಮಹಿಳೆಯರು ಆರೋಗ್ಯ ಮತ್ತು ಶಿಕ್ಷಣ ವಿಷಯದಲ್ಲಿ ಸೀಮಿತ ತಿಳುವಳಿಕೆ ಹೊಂದಿದ್ದಾರೆ. ಪೌಷ್ಟಿಕಾಂಶದ ಅಗತ್ಯತೆಗಳಿಗಾಗಿ ಅವರ ಕುಟುಂಬದ ಇತರೆ ಸದಸ್ಯರಿಗೆ ಆದ್ಯತೆ ನೀಡುತ್ತಾರೆ ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಅಧ್ಯಯನದ ಸಹ-ಲೇಖಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರದೀಪ ಗುಹಾ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಗರ್ಭಧಾರಣೆ, ಋತುಬಂಧದಂತಹ ಜೈವಿಕ ಅಂಶಗಳು ಮಹಿಳೆಯರ ತೂಕದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಪುರುಷರಲ್ಲಿ ಸಾಮಾನ್ಯವಾಗಿ ಟ್ರಂಕಲ್ ಸ್ಥೂಲಕಾಯತೆ ಇರುತ್ತದೆ. ಅದು ಹೆಚ್ಚಾಗಿ ಗೋಚರಿಸುವುದಿಲ್ಲ. ಆದರೆ ಅಪಾಯಕಾರಿ. ಇದರಿಂದ ಕೊಬ್ಬು ಕಿಬ್ಬೊಟ್ಟೆಯ ಭಾಗದಲ್ಲಿ ಸಂಗ್ರಹವಾಗುತ್ತದೆ.
ಸ್ಥೂಲಕಾಯತೆ ನಿಯಂತ್ರಣ ಹೇಗೆ? : ಉತ್ತಮ ಆಹಾರ ಪದ್ಧತಿ, ಹೃದಯ ಮತ್ತು ದೈಹಿಕ ಶಕ್ತಿ ವ್ಯಾಯಾಮಗಳು ಸ್ಥಿರವಾದ ತೂಕ ಕಾಪಾಡಿಕೊಳ್ಳಲು, ಫಿಟ್ ಆಗಿರಲು ಸಹಾಯ ಮಾಡುತ್ತವೆ. ಧೂಮಪಾನ ಕಡಿಮೆ ಮಾಡುವುದು ಅಥವಾ ತ್ಯಜಿಸುವುದು, ಮಿತ ಆಹಾರ ಪದ್ಧತಿ, ಸೋಡಾ ಹಾಗೂ ಸಿಹಿಯಾದ ಟೀ-ಕಾಫಿ, ಪಾನೀಯಗಳ ಸೇವಿಸುವುದನ್ನು ಕಡಿಮೆ ಮಾಡಬೇಕು. ಸಕ್ಕರೆ ಇರುವ ಇಂತಹ ಪಾನೀಯಾಗಳ ಸೇವನೆ ದೇಹಕ್ಕೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.
ಮಕ್ಕಳಿಗೆ ಸಲಹೆ ಏನು? : ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯು ಫಿಟ್ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಅನಾರಾಗ್ಯಕರ ಆಹಾರ ಮತ್ತು ಪಾನೀಯಗಳನ್ನು ನೀಡುವುದು ಒಳಿತಲ್ಲ. ಜಂಕ್ ಫುಡ್‌ಗಳಿಂದ ಆದಷ್ಟು ಅವರನ್ನು ದೂರ ಇಡುವುದು ಸೂಕ್ತ. ಆರೋಗ್ಯಕರ ಆಹಾರ ಆಯ್ಕೆಗೆ ಆದ್ಯತೆ ನೀಡಬೇಕು. ಮಕ್ಕಳು ಹೊರಾಂಗಣ ಆಟಗಳು ಮತ್ತು ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮಕ್ಕಳ ವೈದ್ಯರು ಸಲಹೆ ನೀಡುತ್ತಾರೆ.
Source : ಅಂತರ್ಜಾಲ
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…