ಅಣೆಕಟ್ಟುಗಳು ರಾಜ್ಯದ, ದೇಶದ ಆಸ್ತಿ. ಅದಕ್ಕಿಂತ ಹೆಚ್ಚಾಗಿ ಆಯಾ ಪ್ರದೇಶದ ರೈತರ ಜೀವನಾಡಿ. ದೇಶದಲ್ಲಿ ಅದೆಷ್ಟೋ ಡ್ಯಾಂಗಳು ದೇಶದ ರೈತರ ಹಾಗೂ ಜನರ ಜೀವನ ಕಟ್ಟಿಕೊಟ್ಟಿದೆ. ಆದರೆ ಇದೇ ಅಣೆಕಟ್ಟುಗಳು ಒಂದಷ್ಟು ಜನರನ್ನು ವಸತಿ ರಹಿತವಾಗಿಯೂ ಮಾಡಿವೆ. ಹಾಗೆ ಅದರ ಸುತ್ತ ಮುತ್ತ ಬದುಕುವವರು ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕ ಬೇಕಾಗುತ್ತದೆ. ಕೆಲವು ಅಣೆಕಟ್ಟುಗಳು ಶಿಥಿಲಾವಸ್ಥೆಗೆ ಬಂದಿವೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ.
ಇದೇ ತಿಂಗಳ ಆರಂಭದಲ್ಲಿ ಸಂಭವಿಸಿದ ಲಿಬಿಯಾದ ಎರಡು ಅಣೆಕಟ್ಟುಗಳ ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ 5,300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅಲ್ಲದೇ 11 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಭೀಕರ ಮಳೆಯಿಂದ ಕುಸಿತಕ್ಕೊಳಗಾದ ಡ್ಯಾಂಗಳ ವಿಚಾರವಾಗಿ ವಿಶ್ವಸಂಸ್ಥೆಈ ಹಿಂದೆ ಹಲವು ಬಾರಿ ಎಚ್ಚರಿಸಿದ್ದರೂ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರ ಪರಿಣಾಮ ಈ ಭೀಕರ ದುರಂತಕ್ಕೆ ಲಿಬಿಯಾ ಸಾಕ್ಷಿಯಾಗಿದೆ. ಇದೇ ರೀತಿ ವಿಶ್ವದ ನಾನಾ ಭಾಗಗಳ ಹಲವಾರು ಅಣೆಕಟ್ಟುಗಳು ತಮ್ಮ ಆಯಸ್ಸನ್ನು ಮುಗಿಸುತ್ತ ಬಂದಿದ್ದು ಲಿಬಿಯಾ ದುರಂತದಿಂದ ಎಚ್ಚೆತ್ತುಕೊಳ್ಳುವಂತೆ ಕೂಗಿ ಹೇಳುತ್ತಿವೆ.
ಕೆಲವೇ ದಿನಗಳಲ್ಲಿ ಭಾರತದ 1000 ಡ್ಯಾಂಗಳು 50 ವರ್ಷ ಪೂರೈಸಲಿವೆ : ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ. ಈ ವಿಚಾರದಲ್ಲಿ ಅಣೆಕಟ್ಟುಗಳ ಸುತ್ತಲಿನ ಪ್ರದೇಶಗಳಲ್ಲಿನ ಜನರ ಜೀವದ ಬಗ್ಗೆ ಯೋಚಿಸಲೇ ಬೇಕಾದ ಅನಿವಾರ್ಯ ಕೂಡ ಇದೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.
1930 ರಿಂದ 1970ರ ನಡುವೆ ವಿಶ್ವಾದ್ಯಂತ 58,700 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಅವುಗಳ ಕಾಲಾವಧಿಯನ್ನು 50 ರಿಂದ 100 ವರ್ಷಗಳು ಎಂದು ವಿನ್ಯಾಸ ತಜ್ಞರು ಮತ್ತು ಸಿವಿಲ್ ಇಂಜಿನಿಯರ್‌ಗಳು ನಿರ್ಧರಿಸಿದ್ದಾರೆ. ಅದರಂತೆ 2025ಕ್ಕೆ ಭಾರತವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡ್ಯಾಂಗಳ ನಿರ್ಮಾಣಗೊಂಡು 50 ವರ್ಷಗಳ ಅವಧಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಅವುಗಳು ಶಿಥಿಲಗೊಳ್ಳುತ್ತಾ ಹೋಗುತ್ತವೆ ಎಂದು ವಿಶ್ವಸಂಸ್ಥೆ ಅಧ್ಯಯನ ವರದಿಯಲ್ಲಿ ಕೂಡ ತಿಳಿಸಿತ್ತು.
2050ರ ಹೊತ್ತಿಗೆ ಬಹುತೇಕ ಡ್ಯಾಂಗಳ ಕುಸಿತ : ಸದ್ಯ 50 ವರ್ಷ ದಾಟಿರುವ ಮತ್ತು ಅದಕ್ಕೂ ಹಳೆಯದಾದ ಡ್ಯಾಂಗಳು 2050ರ ಹೊತ್ತಿಗೆ ತೀವ್ರ ಶಿಥಿಲಗೊಂಡು ಕುಸಿಯಲು ಆರಂಭಗೊಳ್ಳಲಿವೆ. ಇಲ್ಲವೇ ಸರ್ಕಾರವೇ ಡ್ಯಾಂಗಳನ್ನು ಕೆಡವಲು ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಸಿದ್ಧಪಡಿಸಲು ಅಮೆರಿಕ, ಕೆನಡಾ, ಫ್ರಾನ್ಸ್, ಭಾರತ, ಜಪಾನ್, ಜ್ಯಾಂಬಿಯಾ ಹಾಗೂ ಜಿಂಬಾಬ್ವೆಗಳಲ್ಲಿನ ದೊಡ್ಡ ಅಣೆಕಟ್ಟುಗಳ ಅಧ್ಯಯನವನ್ನೂ ಮಾಡಲಾಗಿದೆ.
ಏಷ್ಯಾ ಒಂದರಲ್ಲೇ ವಿಶ್ವದ 55% ಬೃಹತ್ ಡ್ಯಾಂಗಳು : ವಿಶ್ವದಲ್ಲಿರುವ ಡ್ಯಾಂಗಳ ಪ್ರಮಾಣದ 55%ರಷ್ಟು ಏಷ್ಯಾದ ನಾಲ್ಕೇ ರಾಷ್ಟ್ರಗಳಲ್ಲಿ ನಿರ್ಮಿಸಲಾಗಿದೆ. ಅಂದರೆ ಭಾರತ (India), ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ 32,716 ಬೃಹತ್ ಗಾತ್ರದ ಅಣೆಕಟ್ಟುಗಳಿವೆ. ಇದರಲ್ಲಿ ಬಹುತೇಕ ಡ್ಯಾಂಗಳು ಮುಂದಿನ ಎರಡು ವರ್ಷಗಳಲ್ಲಿ 50 ವರ್ಷಗಳನ್ನು ಪೂರೈಸಲಿವೆ.
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…
ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…