ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ#ISRO scientists ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ#Tirupati Venkatachalapathy Temple ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿತು. ಚಂದ್ರಯಾನ 3 ಉಡಾವಣೆಯ ಮುನ್ನಾ ದಿನವಾದ ಇಂದು ಮುಂಜಾನೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.
ಚಂದ್ರಯಾನ-3 ರ ನೇರ ಉಡಾವಣೆಯನ್ನು ವೀಕ್ಷಿಸಲು ಇಸ್ರೋ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರಕ್ಕೆ ನೂರಾರು ಕನ್ನಡಿಗರು ಆಗಮಿಸಿದ್ದಾರೆ. ಲಡಾಖ್ ಸೈನ್ಸ್ ಫೌಂಡೇಶನ್ (LSF) ಚಂದ್ರಯಾನ 3 ವೀಕ್ಷಣೆಗೆ ಬೆಂಗಳೂರಿನಿಂದ 130 ಜನರನ್ನು ಕರೆದೊಯ್ಯುತ್ತಿದ್ದು, 100 ಕ್ಕೂ ಹೆಚ್ಚು ಕನ್ನಡಿಗರು ಈ ಗುಂಪಿನಲ್ಲಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ನೋಡಿದ ಇಸ್ರೋ ಸುಮಾರು 10,000 ಜನರಿಗೆ ಅವಕಾಶ ಕಲ್ಪಿಸುವ ‘ಲಾಂಚ್ ವ್ಯೂಯಿಂಗ್ ಗ್ಯಾಲರಿ’ ನಿರ್ಮಿಸಿದೆ.
ಬೆಂಗಳೂರು ನಗರದ ನೆಹರೂ ತಾರಾಲಯದಲ್ಲಿ ಚಂದ್ರಯಾನದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವಿಜ್ಞಾನಿ ಗುರುಪ್ರಸಾದ್ ಅವರು ಕನ್ನಡದಲ್ಲಿ ಮಾಹಿತಿ ನೀಡಲಿದ್ದಾರೆ. ಶುಕ್ರವಾರ 1:30 ರಿಂದ 3:30 ರವರೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.
-ಅಂತರ್ಜಾಲ ಸಂಗ್ರಹ