ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ(Developing country). ಆದರಂತೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ದೇಶದ ಜನರ ಜೀವನ ಮಟ್ಟ(Standard of living) ಸುಧಾರಿಸಿದೆ. ಈ ವರ್ಷ ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದ್ದು ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ 7.8% ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸಿದ್ದು, 2023-24ರ ಹಣಕಾಸು ವರ್ಷದಲ್ಲಿ 8.2% ಪ್ರಗತಿ ಸಾಧಿಸಿದೆ.
2023-24ರ ಹಣಕಾಸು ವರ್ಷದಲ್ಲಿ ಆರ್ಬಿಐ (RBI) ಸೇರಿದಂತೆ ಬಹುತೇಕ ಎಲ್ಲಾ ಸಂಸ್ಥೆಗಳು ಅಂದಾಜು ಮಾಡಿದ್ದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಆರ್ಥಿಕತೆ ಬೆಳವಣಿಗೆ ಸಾಧಿಸಿದೆ. ವಿವಿಧ ಆರ್ಥಿಕ ತಜ್ಞರು, ವಿದೇಶದಲ್ಲಿರುವ ರೇಟಿಂಗ್ ಸಂಸ್ಥೆಗಳು ಜಿಡಿಪಿ ದರ 7.5% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದ್ದವು. ಐಎಂಎಫ್ 6.8% ರಷ್ಟು ಮಾತ್ರ ಜಿಡಿಪಿ ದಾಖಲಿಸಬಹುದು ಎಂದು ಅಂದಾಸಿಜಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾವಾಗಿದ್ದು ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿಯಾಗಿದೆ.
ಯಾವ ವರ್ಷ ಎಷ್ಟಿತ್ತು?
2012-13 : 5.5%
2013-14 : 6.4%
2016-17 : 8.3%
2020-21 : -5.8%
2021-22 : 9.7%
2022-23 : 7.0%
2023-24 : 8.2%