ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಅರಣ್ಯ ಹೆಚ್ಚಳ-ಗುಣಮಟ್ಟ ಕುಸಿತ |

January 8, 2025
11:00 PM
ಅರಣ್ಯ ಉಳಿಸುವ ಕೆಲಸ ಭಾರತದಲ್ಲಿ ನಡೆಯುತ್ತಿದೆ. ವರದಿಗಳ ಪ್ರಕಾರ ಭಾರತವು ಪ್ರಧಾನವಾಗಿ ನೈಸರ್ಗಿಕ ಅರಣ್ಯವನ್ನು ಕಳೆದುಕೊಳ್ಳುತ್ತಿದೆ. ಕೃತಕ ಅಥವಾ ಮರುಸೃಷ್ಟಿಯ ಅರಣ್ಯದತ್ತ ಸಾಗುತ್ತಿದೆ ಎಂದು ದಾಖಲೆ ಹೇಳುತ್ತದೆ. ನೈಸರ್ಗಿಕ ಅರಣ್ಯದ ಉಳಿವು ಅಗತ್ಯ ಇದೆ.

ಭಾರತದ ಇತ್ತೀಚಿನ ಅರಣ್ಯ ಸಮೀಕ್ಷೆ ವರದಿಯ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ದೇಶದ ಅರಣ್ಯ ಮತ್ತು ಮರಗಳ ಹೊದಿಕೆಯಲ್ಲಿ  ಹೆಚ್ಚಳವನ್ನು ಸೂಚಿಸಿದೆ. ಆದರೆ ತಜ್ಞರು ಹೇಳುವಂತೆ  ಜೀವವೈವಿಧ್ಯ-ಸಮೃದ್ಧ ಕಾಡುಗಳು ಮತ್ತು ಮ್ಯಾಂಗ್ರೋವ್‌ಗಳು ಮತ್ತು ಒಟ್ಟಾರೆ ಅರಣ್ಯ ಗುಣಮಟ್ಟದಲ್ಲಿ ಗಣನೀಯ ಕುಸಿತವನ್ನು ಕಂಡಿದೆ ಎಂದು ವರದಿ ಮಾಡಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement
Advertisement

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (ಎಫ್‌ಎಸ್‌ಐ) ಪ್ರಕಟಿಸಿದ ವರದಿಯು, 2021 ರಿಂದ ದೇಶದ ಅರಣ್ಯ ಪ್ರದೇಶವು 1,446 ಚದರ ಕಿಲೋಮೀಟರ್ ಹೆಚ್ಚಾಗಿದೆ ಎಂದು ಹೇಳಿದೆ. ಅಂದರೆ 156 ಕಿಮೀ ಅರಣ್ಯ ಹೆಚ್ಚಳವಾಗಿದೆ ಮತ್ತು ಮರದ ಹೊದಿಕೆಯು 1,289 ಕಿಮೀ ಹೆಚ್ಚಳವಾಗಿದೆ.

Advertisement

ಭಾರತದಲ್ಲಿ 18,000 ಚ.ಕಿ.ಮೀ.ನಲ್ಲಿ ನೆಡುತೋಪು ನಡೆಯುತ್ತಿದೆ. ಆದರೆ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು ಎರಡು ವರ್ಷಗಳಲ್ಲಿ ಕೇವಲ 1400 ಚ.ಕಿಮೀ  ಹೆಚ್ಚಳವಾಗಿದೆ ಎಂದು  ಕರ್ನಾಟಕ ರಾಜ್ಯದ ಅರಣ್ಯಗಳ ಮಾಜಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಹೇಳುತ್ತಾರೆ.

ವರದಿಯ ಪ್ರಕಾರ ಭಾರತವು ಪ್ರಧಾನವಾಗಿ ನೈಸರ್ಗಿಕ ಅರಣ್ಯವನ್ನು ಕಳೆದುಕೊಳ್ಳುತ್ತಿದೆ. ಕೃತಕ ಅಥವಾ ಮರುಸೃಷ್ಟಿಯ ಅರಣ್ಯದತ್ತ ಸಾಗುತ್ತಿದೆ ಎಂದು ದಾಖಲೆ ಹೇಳುತ್ತದೆ. ಉದಾಹರಣೆಗೆ, ಪಶ್ಚಿಮ ಘಟ್ಟಗಳು, ಹಿಮಾಲಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಜೀವವೈವಿಧ್ಯ-ಸಮೃದ್ಧ ಪ್ರದೇಶಗಳಲ್ಲಿ ಅರಣ್ಯ ಪ್ರದೇಶವು ಕುಸಿದಿದೆ.

Advertisement

ವರದಿಯ ಪ್ರಕಾರ, ಕೃಷಿ ಅರಣ್ಯ ಅಥವಾ ಕೃಷಿ ಭೂಮಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮರಗಳನ್ನು ಬೆಳೆಸುವ ಅಭ್ಯಾಸವು ಕಳೆದ ದಶಕದಲ್ಲಿ 20.02% ರಷ್ಟು ಬೆಳೆದಿದೆ. ಪರಿಣಾಮವಾಗಿ ಮರಗಳ ಹೊದಿಕೆಯ ಹೆಚ್ಚಳವಾಗಿರುವುದು ಉತ್ತಮ ಸಂಕೇತವಾಗಿದೆ. ಆದ್ದರಿಂದ ನಾವು ನಮ್ಮ ಅರಣ್ಯವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ, ಆದರೆ ನಾವು ಕೃಷಿ ಅರಣ್ಯವನ್ನು ಬೆಳೆಯಲು ಸಮರ್ಥರಾಗಿದ್ದೇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್ ರಾಜ್ಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗಣನೀಯವಾಗಿ ಭಾರತದ ಮ್ಯಾಂಗ್ರೋವ್ ಹೊದಿಕೆಯ ಇಳಿಕೆಯನ್ನು ವರದಿ ತೋರಿಸಿದೆ. ಅದೇ ಸಮಯದಲ್ಲಿ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮ್ಯಾಂಗ್ರೋವ್ ಹೊದಿಕೆಯು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |
February 8, 2025
7:44 PM
by: The Rural Mirror ಸುದ್ದಿಜಾಲ
ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು
February 8, 2025
7:57 AM
by: The Rural Mirror ಸುದ್ದಿಜಾಲ
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |
February 8, 2025
7:48 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ
February 8, 2025
7:38 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror