ಭಾರತದ ಇತ್ತೀಚಿನ ಅರಣ್ಯ ಸಮೀಕ್ಷೆ ವರದಿಯ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ದೇಶದ ಅರಣ್ಯ ಮತ್ತು ಮರಗಳ ಹೊದಿಕೆಯಲ್ಲಿ ಹೆಚ್ಚಳವನ್ನು ಸೂಚಿಸಿದೆ. ಆದರೆ ತಜ್ಞರು ಹೇಳುವಂತೆ ಜೀವವೈವಿಧ್ಯ-ಸಮೃದ್ಧ ಕಾಡುಗಳು ಮತ್ತು ಮ್ಯಾಂಗ್ರೋವ್‌ಗಳು ಮತ್ತು ಒಟ್ಟಾರೆ ಅರಣ್ಯ ಗುಣಮಟ್ಟದಲ್ಲಿ ಗಣನೀಯ ಕುಸಿತವನ್ನು ಕಂಡಿದೆ ಎಂದು ವರದಿ ಮಾಡಿದ್ದಾರೆ.…..ಮುಂದೆ ಓದಿ….
ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (ಎಫ್‌ಎಸ್‌ಐ) ಪ್ರಕಟಿಸಿದ ವರದಿಯು, 2021 ರಿಂದ ದೇಶದ ಅರಣ್ಯ ಪ್ರದೇಶವು 1,446 ಚದರ ಕಿಲೋಮೀಟರ್ ಹೆಚ್ಚಾಗಿದೆ ಎಂದು ಹೇಳಿದೆ. ಅಂದರೆ 156 ಕಿಮೀ ಅರಣ್ಯ ಹೆಚ್ಚಳವಾಗಿದೆ ಮತ್ತು ಮರದ ಹೊದಿಕೆಯು 1,289 ಕಿಮೀ ಹೆಚ್ಚಳವಾಗಿದೆ.
ಭಾರತದಲ್ಲಿ 18,000 ಚ.ಕಿ.ಮೀ.ನಲ್ಲಿ ನೆಡುತೋಪು ನಡೆಯುತ್ತಿದೆ. ಆದರೆ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು ಎರಡು ವರ್ಷಗಳಲ್ಲಿ ಕೇವಲ 1400 ಚ.ಕಿಮೀ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯದ ಅರಣ್ಯಗಳ ಮಾಜಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಹೇಳುತ್ತಾರೆ.
ವರದಿಯ ಪ್ರಕಾರ ಭಾರತವು ಪ್ರಧಾನವಾಗಿ ನೈಸರ್ಗಿಕ ಅರಣ್ಯವನ್ನು ಕಳೆದುಕೊಳ್ಳುತ್ತಿದೆ. ಕೃತಕ ಅಥವಾ ಮರುಸೃಷ್ಟಿಯ ಅರಣ್ಯದತ್ತ ಸಾಗುತ್ತಿದೆ ಎಂದು ದಾಖಲೆ ಹೇಳುತ್ತದೆ. ಉದಾಹರಣೆಗೆ, ಪಶ್ಚಿಮ ಘಟ್ಟಗಳು, ಹಿಮಾಲಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಜೀವವೈವಿಧ್ಯ-ಸಮೃದ್ಧ ಪ್ರದೇಶಗಳಲ್ಲಿ ಅರಣ್ಯ ಪ್ರದೇಶವು ಕುಸಿದಿದೆ.
ವರದಿಯ ಪ್ರಕಾರ, ಕೃಷಿ ಅರಣ್ಯ ಅಥವಾ ಕೃಷಿ ಭೂಮಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮರಗಳನ್ನು ಬೆಳೆಸುವ ಅಭ್ಯಾಸವು ಕಳೆದ ದಶಕದಲ್ಲಿ 20.02% ರಷ್ಟು ಬೆಳೆದಿದೆ. ಪರಿಣಾಮವಾಗಿ ಮರಗಳ ಹೊದಿಕೆಯ ಹೆಚ್ಚಳವಾಗಿರುವುದು ಉತ್ತಮ ಸಂಕೇತವಾಗಿದೆ. ಆದ್ದರಿಂದ ನಾವು ನಮ್ಮ ಅರಣ್ಯವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ, ಆದರೆ ನಾವು ಕೃಷಿ ಅರಣ್ಯವನ್ನು ಬೆಳೆಯಲು ಸಮರ್ಥರಾಗಿದ್ದೇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್ ರಾಜ್ಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗಣನೀಯವಾಗಿ ಭಾರತದ ಮ್ಯಾಂಗ್ರೋವ್ ಹೊದಿಕೆಯ ಇಳಿಕೆಯನ್ನು ವರದಿ ತೋರಿಸಿದೆ. ಅದೇ ಸಮಯದಲ್ಲಿ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮ್ಯಾಂಗ್ರೋವ್ ಹೊದಿಕೆಯು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಕಲಜೀವಿಗಳ ಆಡುಂಬೊಲ ನಮ್ಮೀ ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490