ಭಾರತದ ರಾಷ್ಟ್ರಗೀತೆ ನಮ್ಮ ದೇಶದ ಹೆಮ್ಮೆಯ ಪ್ರತೀಕ. ಅದಕ್ಕೆ ಅದರದೇ ಆದ ಗೌರವ ಇದೆ. ನಮ್ಮ ರಾಷ್ಟ್ರಗೀತೆ ನಮ್ಮ ದೇಶದ ಅದೆಷ್ಟು ನಾಗರೀಕರಿಗೆ ಸರಿಯಾಗಿ ಹಾಡಲು ಬರುತ್ತದೋ ಇಲ್ವೋ ಗೊತ್ತಿಲ್ಲ. ಅಮೆರಿಕಾದ ಖ್ಯಾತ ಗಾಯಕಿ, ಹಾಲಿವುಡ್ ನಟಿ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಹಾಡಿ ನಮ್ಮ ಪ್ರಧಾನಿ ಅವರ ಆಶೀರ್ವಾದ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೊನ್ನೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಫ್ರಿಕನ್ ಹಾಗೂ ಅಮೆರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್ #MaryMillben ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಸಹ ಅವರು ಹಾಡಿದರು. ಬಳಿಕ ಪ್ರಸಿದ್ಧ ಗಾಯಕಿ ಮೇರಿ ಮಿಲ್ಬೆನ್ (Mary Millben) ಪ್ರಧಾನಿ ನರೇಂದ್ರ ಮೋದಿಯವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಒಬ್ಬ ಕರುಣೆ ಉಳ್ಳಂತಹ ವ್ಯಕ್ತಿ. ನಾನು ಅವರೊಂದಿಗೆ ಇಲ್ಲಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ. ಇಷ್ಟೊಂದು ಜನರ ನಡುವೆ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವುದು ನನಗೆ ಖುಷಿ ನೀಡಿದೆ ಎಂದಿದ್ದಾರೆ. ಇದಕ್ಕೂ ಮೊದಲು ಗಾಯಕಿಯನ್ನು ಭಾರತದ 75 ನೇ ಸ್ವಾತಂತ್ರೋತ್ಸವದಲ್ಲಿ ಕಾರ್ಯಕ್ರಮ ಆಹ್ವಾನಿಸಲಾಗಿತ್ತು. ಈ ವೇಳೆ ಭಾರತಕ್ಕೆ ಭೇಟಿಕೊಟ್ಟಿದ್ದ ಅವರು ರಾಷ್ಟ್ರಗೀತೆಯನ್ನು ಹಾಡಿದ್ದರು.