ಹೆಚ್ಚಳಗೊಂಡ ರಬ್ಬರ್‌ ಬಳಕೆ | ನಿಧಾನಗತಿಯಲ್ಲಿ ಏರಿಕೆಯಾಗುತ್ತಿರುವ ರಬ್ಬರ್‌ ಮಾರುಕಟ್ಟೆ | 10 ವರ್ಷಗಳ ಬಳಿಕ ಏರಿಕೆ ಕಂಡ ರಬ್ಬರ್‌ ಧಾರಣೆ |

March 14, 2024
11:15 AM
ರಬ್ಬರ್‌ ಧಾರಣೆ ಏರಿಕೆಯಾಗುತ್ತಿದೆ. ದೇಶೀಯ ರಬ್ಬರ್‌ ಉತ್ಪಾದನೆ ಕುಂಠಿತವಾಗಿದ್ದು ಬೇಡಿಕೆ ಹೆಚ್ಚಳವಾಗಿದೆ. ಈ ನಡುವೆ ರಫ್ತು ಕೂಡಾ ಹೆಚ್ಚಳವಾಗುತ್ತಿದೆ.

ರಬ್ಬರ್‌ (Rubber) ಬೆಳೆಗಾರರಿಗೆ ಮತ್ತೆ ನಿರೀಕ್ಷೆ ಹುಟ್ಟಿಸಿದೆ. ರಬ್ಬರ್‌ ಧಾರಣೆ ನಿಧಾನವಾಗಿ ಏರಿಕೆ ಕಾಣುತ್ತಿದೆ. ರಬ್ಬರ್‌ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗಿದೆ  ಕಳೆದ 10 ವರ್ಷಗಳಿಂದ ಭಾರತದಲ್ಲಿ ರಬ್ಬರ್ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳನ್ನು ಮೀರಿ ಏರಿಕೆ ಕಂಡಿದೆ.ರಬ್ಬರ್‌ ಉತ್ಪಾದನೆಯು ಶೇ.2 ಹೆಚ್ಚಾಗಿದ್ದರೆ ಬಳಕೆ ಶೇ.5.4 ರಷ್ಟು ಏರಿಕೆಯಾಗಿದೆ.

ಭಾರತೀಯ ರಬ್ಬರ್ ಬೆಲೆ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗಿಂತ ಕಡಿಮೆ ಇತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಉತ್ಪಾದನೆಯು ಏಪ್ರಿಲ್-ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಉತ್ಪಾದನೆಯನ್ನು ಮೀರಿಸಿದೆ. ಧಾರಣೆಯೂ ಏರಿಕೆ ಕಂಡಿದೆ.  ಈ ವರ್ಷ ಭಾರತವು ಶೇಕಡಾ 11.2 ರಷ್ಟು ಕಡಿಮೆ ನೈಸರ್ಗಿಕ ರಬ್ಬರ್  ಆಮದು ಮಾಡಿಕೊಂಡಿದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಸಂತೇಶನ್ ಹೇಳಿದ್ದಾರೆ.

2022-23ರ ಏಪ್ರಿಲ್-ಜನವರಿ ಅವಧಿಯಲ್ಲಿ ದೇಶದಲ್ಲಿ ರಬ್ಬರ್ ಉತ್ಪಾದನೆ 7,25,000 ಮೆಟ್ರಿಕ್ ಟನ್ ಆಗಿತ್ತು ಮತ್ತು 2023-24ರಲ್ಲಿ ಇದು 7,39,000 ಮೆಟ್ರಿಕ್ ಟನ್​ಗೆ ಏರಿದೆ. 2023-24ರ ಏಪ್ರಿಲ್-ಜನವರಿ ಅವಧಿಯಲ್ಲಿ ರಬ್ಬರ್ ಬಳಕೆ ಶೇಕಡಾ 5.4 ರಷ್ಟು ಏರಿಕೆಯಾಗಿ 1,17,900 ಮೆಟ್ರಿಕ್ ಟನ್ ತಲುಪಿದೆ.2023-24ರ ಏಪ್ರಿಲ್​​ನಿಂದ ಜನವರಿವರೆಗೆ ಭಾರತವು 4,10,770 ಮೆಟ್ರಿಕ್ ಟನ್ ರಬ್ಬರ್ ಅನ್ನು ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 11.2 ರಷ್ಟು ಕಡಿಮೆಯಾಗಿದೆ.

ಬೆಲೆಗಳು ಸ್ಪರ್ಧಾತ್ಮಕವಾಗಿಲ್ಲದ ಕಾರಣದಿಂದ ಕಳೆದ ಕೆಲ ವರ್ಷಗಳಿಂದ ಭಾರತದ ರಬ್ಬರ್ ರಫ್ತು ಪ್ರಮಾಣ ನಗಣ್ಯವಾಗಿದೆ.  ಮಾರುಕಟ್ಟೆ ಅವಕಾಶವನ್ನು ಅನ್ವೇಷಿಸಲು, ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಸಂತೇಶನ್ ಅವರು ಮಾರ್ಚ್ 15 ರಂದು ಕೊಟ್ಟಾಯಂ (ಕೇರಳ) ನಲ್ಲಿರುವ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಹೈಬ್ರಿಡ್ ಮೋಡ್ ಕುರಿತು ರಬ್ಬರ್ ರಫ್ತುದಾರರು ಮತ್ತು ರಬ್ಬರ್ ಮಂಡಳಿ ಕಂಪನಿಗಳ ಸಭೆ ನಡೆಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅನೇಕ ಸಮಯಗಳ ನಂತರ, ಭಾರತೀಯ ರಬ್ಬರ್ ಬೆಲೆ ಏರಿಕೆಯಾಗಿದೆ ಮತ್ತು ಜನವರಿ 2024 ರಲ್ಲಿ ಬ್ಯಾಂಕಾಕ್ ಬೆಲೆಗಳಿಗಿಂತ ಹೆಚ್ಚಳವಾಗಿತ್ತು.  ಆಗ್ನೇಯ ಏಷ್ಯಾದ ದೇಶಗಳಲ್ಲಿ ಚಳಿಗಾಲ ಮತ್ತು ನವೆಂಬರ್-ಡಿಸೆಂಬರ್ ಅವಧಿಯಲ್ಲಿನ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಉತ್ಪಾದನೆಯು 2023-24ರ ಅವಧಿಯಲ್ಲಿ 7,39,000 ಟನ್‌ಗಳಿಗೆ ಏರಿಕೆಯಾಗಿದೆ.

Advertisement

ಸದ್ಯ ಶೀಟ್ ರಬ್ಬರ್ ರಫ್ತಿಗೆ, ಭಾರತ ಸರ್ಕಾರವು  ಪ್ರೋತ್ಸಾಹವನ್ನು ನೀಡುತ್ತಿದೆ. ರಬ್ಬರ್ ಬೋರ್ಡ್ ‘ಇಂಡಿಯನ್ ನ್ಯಾಚುರಲ್ ರಬ್ಬರ್’ ಬ್ರಾಂಡ್ ಅಡಿಯಲ್ಲಿ ಭಾರತೀಯ ರಬ್ಬರ್  ಉತ್ತೇಜಿಸುತ್ತಿದೆ.

A senior Rubber Board official said that 11.2 per cent less natural rubber was imported by India this year. He said that India’s rubber production during the current fiscal surpassed the previous year’s production in the April-January period.During April-January 2022-23, rubber production in the country was 7,25,000 metric tons and it increased to 7,39,000 metric tonnes during 2023-24.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?
December 16, 2025
1:47 PM
by: ಸಾಯಿಶೇಖರ್ ಕರಿಕಳ
ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ
December 16, 2025
7:22 AM
by: ರೂರಲ್‌ ಮಿರರ್ ಸುದ್ದಿಜಾಲ
ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ
December 16, 2025
7:20 AM
by: ರೂರಲ್‌ ಮಿರರ್ ಸುದ್ದಿಜಾಲ
ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ
December 16, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror