ಮಣ್ಣಿನ ಆರೋಗ್ಯ ಕುಸಿತ : ಭಾರತದ ಕೃಷಿಗೆ ಗಂಭೀರ ಎಚ್ಚರಿಕೆ

January 19, 2026
7:00 AM
ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮತ್ತು ಏಕಬೆಳೆ ಕೃಷಿಯಿಂದ ಭಾರತದ ಮಣ್ಣಿನ ಆರೋಗ್ಯ ಗಂಭೀರವಾಗಿ ಕುಸಿಯುತ್ತಿದ್ದು, ಇದು ಕೃಷಿ ಉತ್ಪಾದನೆ ಮತ್ತು ಆಹಾರ ಭದ್ರತೆಗೆ ಎಚ್ಚರಿಕೆಯ ಸಂಕೇತವಾಗಿದೆ. ವಿಶ್ಲೇಷಣೆಯ ಪ್ರಕಾರ, ಸಮಗ್ರ ಪೋಷಕಾಂಶ ನಿರ್ವಹಣೆ ಮಾತ್ರ ಮಣ್ಣಿನ ಫಲವತ್ತತೆ ಪುನಶ್ಚೇತನಗೊಳಿಸಿ ರೈತರಿಗೆ ದೀರ್ಘಕಾಲಿಕ ಲಾಭ ನೀಡುವ ಮಾರ್ಗವಾಗಿದೆ.

ಭಾರತದ ಮಣ್ಣಿನ ಆರೋಗ್ಯ ಗಂಭೀರ ಕುಸಿತದ ಹಂತಕ್ಕೆ ತಲುಪುತ್ತಿದ್ದು, ಇದು ಕೃಷಿ ಉತ್ಪಾದನೆ ಮಾತ್ರವಲ್ಲದೆ ದೇಶದ ಆಹಾರ ಭದ್ರತೆಯ ಮೇಲೂ ಎಚ್ಚರಿಕೆಯ ಸಂಕೇತವಾಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ, ಏಕಬೆಳೆ ಕೃಷಿ ಮತ್ತು ಜೈವಿಕ ಪೋಷಕಾಂಶಗಳ ನಿರ್ಲಕ್ಷ್ಯದಿಂದ ಮಣ್ಣಿನ ಫಲವತ್ತತೆ ದಿನೇದಿನೇ ಕುಗ್ಗುತ್ತಿದೆ ಎಂದು  ಜಿಕೆ ಟುಡೇ ಪ್ರಕಟಿಸಿದ ವಿಶ್ಲೇಷಣೆ ಎಚ್ಚರಿಸಿದೆ.

ವಿಶ್ಲೇಷಣೆ ಪ್ರಕಾರ, ಭಾರತದ ಬಹುತೇಕ ಕೃಷಿಭೂಮಿಗಳು ನೈಟ್ರೋಜನ್–ಫಾಸ್ಫರಸ್–ಪೊಟಾಶ್ (NPK) ಮೇಲಿನ ಅತಿಯಾದ ಅವಲಂಬನೆಯಿಂದ ಸೂಕ್ಷ್ಮ ಪೋಷಕಾಂಶಗಳಾದ ಜಿಂಕ್, ಸಲ್ಫರ್, ಬೋರಾನ್ ಮುಂತಾದವುಗಳ ಕೊರತೆಯನ್ನು ಎದುರಿಸುತ್ತಿವೆ. ಇದರ ಪರಿಣಾಮವಾಗಿ ಮಣ್ಣಿನ ಜೀವಂತಿಕೆ, ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹಾಗೂ ಬೆಳೆಗಳ ರೋಗ ನಿರೋಧಕ ಸಾಮರ್ಥ್ಯ ಕುಂಠಿತವಾಗುತ್ತಿದೆ.

ಸಮಗ್ರ ಪೋಷಕಾಂಶ ನಿರ್ವಹಣೆ (INM) ಏನು? :  ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ( Integrated Nutrient Management (INM)) ಪದ್ಧತಿಯನ್ನು ಲೇಖನ ಮುಂದಿಟ್ಟಿದೆ. ಸಮಗ್ರ ಪೋಷಕಾಂಶಗಳ ನಿರ್ವಹಣೆ ಅಂದರೆ ರಾಸಾಯನಿಕ ಗೊಬ್ಬರಗಳನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ; ಅವುಗಳನ್ನು ಜೈವಿಕ ಗೊಬ್ಬರಗಳು, ಬಯೋ–ಫರ್ಟಿಲೈಸರ್‌ಗಳು ಮತ್ತು ಬೆಳೆ ಅವಶೇಷಗಳೊಂದಿಗೆ ಸಮತೋಲನದಲ್ಲಿ ಬಳಸುವುದು.

ಸಮಗ್ರ ಪೋಷಕಾಂಶಗಳ ನಿರ್ವಹಣೆ ಪ್ರಮುಖ ಅಂಶಗಳು: ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ಹಸುಗೊಬ್ಬರ, ಕಂಪೋಸ್ಟ್, ವರ್ಮಿಕಂಪೋಸ್ಟ್ ಬಳಕೆ, ಬಯೋ–ಫರ್ಟಿಲೈಸರ್‌ಗಳ ಬಳಕೆ,  ಬೆಳೆ ಅವಶೇಷಗಳ ಮಣ್ಣಿಗೆ ಮರಳಿಸುವಿಕೆ. ಈ ವಿಧಾನ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಪುನಶ್ಚೇತನಗೊಳಿಸುತ್ತದೆ.

ರೈತರಿಗೆ ಲಾಭವೇನು? : ಸಮಗ್ರ ಪೋಷಕಾಂಶಗಳ ನಿರ್ವಹಣೆ ರೈತರಿಗೆ ಗೊಬ್ಬರ ವೆಚ್ಚದಲ್ಲಿ ಉಳಿತಾಯ, ದೀರ್ಘಕಾಲಿಕ ಮಣ್ಣಿನ ಫಲವತ್ತತೆ, ನೀರಿನ ಉತ್ತಮ ಬಳಕೆ, ಬೆಳೆ ಗುಣಮಟ್ಟ ಹಾಗೂ ಇಳುವರಿ ಸ್ಥಿರತೆ , ವಿಶೇಷವಾಗಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುತ್ತಿರುವ ಸಣ್ಣ ಹಾಗೂ ಮಧ್ಯಮ ರೈತರಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಂತ ಸಹಾಯಕವಾಗಬಹುದು ಎಂದು ಲೇಖನ ತಿಳಿಸಿದೆ.

ರಾಷ್ಟ್ರೀಯ ಮಟ್ಟದ ಮಹತ್ವ : ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿ ಮಣ್ಣು ಮಾತ್ರವಲ್ಲದೆ, ನೀರು ಮತ್ತು ಪರಿಸರ ಮಾಲಿನ್ಯವನ್ನು ತಗ್ಗಿಸುವಲ್ಲಿ ಸಹಕಾರಿ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಉಂಟಾಗುವ ಜಲಮಾಲಿನ್ಯ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಈ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತದ ಮಣ್ಣು ಈಗ ಸ್ಪಷ್ಟ ಸಂದೇಶ ನೀಡುತ್ತಿದೆ  “ಸಮತೋಲನ ಇಲ್ಲದ ಕೃಷಿ ದೀರ್ಘಕಾಲ ಉಳಿಯದು”. ಸಮಗ್ರ ಪೋಷಕಾಂಶಗಳ ನಿರ್ವಹಣೆಯೇ ಮಣ್ಣಿನ ಆರೋಗ್ಯ, ರೈತರ ಆದಾಯ ಮತ್ತು ದೇಶದ ಆಹಾರ ಭದ್ರತೆಯನ್ನು ಕಾಪಾಡುವ ಮುಂದಿನ ದಾರಿ ಎಂಬುದು ಈ ವಿಶ್ಲೇಷಣೆಯಲ್ಲಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror