ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

September 26, 2026
7:36 PM
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ ಪಾರಂಪರಿಕ ಆಹಾರ ಪದ್ಧತಿಯ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿಪಾದಿಸಿದರು.

ದೇಶಿ ಗೋವಿನ ಹಾಲು ಮತ್ತು ತುಪ್ಪದ ಮಹತ್ವವನ್ನು ಪ್ರತಿಪಾದಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಮಿಶ್ರ ತಳಿ ಹಸುವಿನ ಹಾಲು ಅಹಿತ ಎಂಬುದಾಗಿ ಇಂದಿನ ವಿಜ್ಞಾನವೂ ಒಪ್ಪಿದೆ. ಆದರೆ ದುಡ್ಡಿನ ಹಿಂದೆ ಜಗತ್ತು ಓಡುತ್ತಿರುವುದರಿಂದ ಅದನ್ನು ಒಪ್ಪಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Advertisement

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿದ್ದ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ಪ್ರವಚನ ನೀಡಿದ ಅವರು, ದೇಶಿ ಗೋವಿನ ಹಾಲು ಮತ್ತು ತುಪ್ಪದ ಪಾರಂಪರಿಕ ಮಹತ್ವವನ್ನು ವಿವರಿಸಿದರು.

ದೇಶಿ ಗೋವು ಹಾಗೂ ಮಿಶ್ರತಳಿ ಹಸುಗಳ ಹಾಲು ಮತ್ತು ತುಪ್ಪಗಳ ಗುಣಗಳ ಕುರಿತು ಆಧುನಿಕ ವಿಜ್ಞಾನದಲ್ಲಿ ಅಧ್ಯಯನಗಳು ನಡೆದಿವೆ ಎಂದು ಹೇಳಿದ ಶ್ರೀಗಳು, ದೇಶಿ ಗೋವಿನ ಎ2 ಹಾಲು ಮತ್ತು ತುಪ್ಪ ಶ್ರೇಷ್ಠ ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು. ದೇಶಿ ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾಗುತ್ತವೆ ಎಂದು ಪಾರಂಪರಿಕ ಜ್ಞಾನ ಹೇಳುತ್ತದೆ. ಇದೇ ವಿಚಾರವನ್ನು ಆಯುರ್ವೇದವು ‘ಅಗ್ನಿದೀಪಕ’, ‘ಲಘು’, ‘ಪಾಚನ’ ಮೊದಲಾದ ಪರಿಕಲ್ಪನೆಗಳ ಮೂಲಕ ವಿವರಿಸಿದೆ ಎಂದು ಹೇಳಿದರು.

ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುವ ತುಪ್ಪದ ಗುಣಮಟ್ಟದ ಬಗ್ಗೆಯೂ ಅವರು ಗಮನ ಸೆಳೆದರು. ಮಿಶ್ರತಳಿ ಹಸುವಿನ ತುಪ್ಪ ಬಳಕೆಯಿಂದ ಕೆಲವು ಔಷಧಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಔಷಧ ತಯಾರಿಕೆಯಲ್ಲಿ ‘ಯೋಗವಾಹಕ’ ಗುಣ ಹೊಂದಿರುವ ದೇಶಿ ತುಪ್ಪದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.  ‘ತುಪ್ಪದ ಸಾಮರ್ಥ್ಯ ಬದುಕನ್ನು ಬಂಗಾರವಾಗಿಸಲು, ಜೀವವನ್ನು ದೇವರನ್ನಾಗಿಸಲು ಸಾಕು’ ಎಂದು ದೇಶಿ ತುಪ್ಪದ ಮಹತ್ವವನ್ನು ಅವರು ಪ್ರತಿಪಾದಿಸಿದರು.

ಕಳೆದ ಎರಡು ತಿಂಗಳಿನಿಂದ ಕೈಗೊಂಡಿದ್ದ ಚಾತುರ್ಮಾಸ್ಯ ವ್ರತವನ್ನು ಶ್ರೀಗಳು ಸೀಮೋಲ್ಲಂಘನದ ಮೂಲಕ ಸಂಪನ್ನಗೊಳಿಸಿದರು. ಗಂಗಾವಳಿ ನದಿಗೆ ಫಲ ಸಮರ್ಪಿಸಿದ ಅವರು, ತೊರ್ಕೆಯ ಕೆಂಗಾಳ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸಿದರು.

23 ಸಮಾಜಗಳಿಂದ ಸ್ವರ್ಣಪಾದುಕಾ ಪೂಜೆ :  ಶ್ರೀರಾಮಚಂದ್ರಾಪುರ ಮಠದೊಂದಿಗೆ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ವಿವಿಧ ಭಕ್ತ ಸಮಾಜಗಳವರು ಚಾತುರ್ಮಾಸ್ಯದಲ್ಲಿ ಪಾಲ್ಗೊಂಡರು. ಒಟ್ಟು 23 ವಿವಿಧ ಸಮಾಜಗಳು ಸ್ವರ್ಣಪಾದುಕಾ ಪೂಜೆ ಸಮರ್ಪಿಸಿ ತಮ್ಮ ಪರಂಪರಾಗತ ಗುರುಭಕ್ತಿಯನ್ನು ವ್ಯಕ್ತಪಡಿಸಿದವು.

60 ದಿನಗಳ ಕಾಲ ಪಾರಂಪರಿಕ ಆಹಾರದ ಸಂದೇಶ : ಈ ಬಾರಿಯ ಚಾತುರ್ಮಾಸ್ಯದ ಪ್ರಮುಖ ವಿಶೇಷತೆಯಾಗಿ ಆಹಾರ ಪದ್ಧತಿಯ ವಿಚಾರವೂ ಗಮನ ಸೆಳೆಯಿತು. ಆಹಾರದ ಕುರಿತು ಪೀಠಾಧಿಪತಿಯೊಬ್ಬರು ಸುದೀರ್ಘವಾಗಿ ಪ್ರವಚನದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿರುವುದು ಇದೇ ಮೊದಲು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

60 ದಿನಗಳ ಕಾಲ ನಡೆದ ಪ್ರವಚನಗಳಲ್ಲಿ ಆಹಾರದ ಆಯ್ಕೆ, ಸರಿ-ತಪ್ಪು ಹಾಗೂ ಪಾರಂಪರಿಕ ಆಹಾರ ಪದ್ಧತಿಯ ಮಹತ್ವದ ಕುರಿತು ಶ್ರೀಗಳು ಮಾತನಾಡಿದರು. ಇದೇ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡಿನ ಪಾರಂಪರಿಕ ಆಹಾರ ಪದಾರ್ಥಗಳು ಚಾತುರ್ಮಾಸ್ಯದ ವಿಶೇಷವಾಗಿದ್ದವು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

During the concluding session of the ‘Annam Brahma’ series at the Annabrahma Chaturmasya programme in Gokarna, Sri Sri Raghaveshwara Bharati Mahaswamiji highlighted the traditional importance of indigenous cattle, milk, ghee and regional food practices. He expressed the view that indigenous cow products are superior in terms of digestion and emphasised the traditional knowledge associated with Ayurveda and the sages. The Chaturmasya also featured 60 days of discourses on food and traditional coastal and Malnad cuisine, with devotees from 23 communities participating in Swarna Paduka Puja.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ
September 26, 2026
7:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
September 26, 2026
1:35 PM
by: ಸಾಯಿಶೇಖರ್ ಕರಿಕಳ
ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ
September 26, 2026
9:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror