ನಮ್ಮ ಹೆಮ್ಮೆಯ ನಂದಿನಿ #NandiniMilk ಉತ್ಪನ್ನಗಳನ್ನು ವಿವಿಧ ಸರಕಾರಿ ಸಂಘಗಳು, ಸಭೆ ಸಮಾರಂಭ, ಎಪಿಎಂಸಿ, ಮಳಿಗೆಗಳಲ್ಲಿ ಮಾರಾಟ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಇದೀಗ ಸಿದ್ದರಾಮಯ್ಯ ಈಗ ಮತ್ತೊಮ್ಮೆ ಸಿಎಂ ಆಗಿದ್ದು ತಮ್ಮ ಕನಸಿನ ಕೂಸಿನ ಯೋಜನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಇಂದಿರಾ ಕ್ಯಾಂಟೀನ್ #IndiraCanteen ನಲ್ಲಿ ವಿವಿಧ ಬಗೆಯ ಅಡುಗೆ ಮಾಡಲು ಸಿದ್ಧತೆ ಮಾಡಲಾಗಿದ್ದು ಇದೀಗ ಬೆಂಗಳೂರಿನ ಇಂದಿರಾ ಕ್ಯಾಂಟೀನ್ನಲ್ಲಿ ನಂದಿನಿ ಉತ್ಪನ್ನಗಳನ್ನೂ ನೀಡಲು ಚಿಂತನೆ ನಡೆದಿದೆ.
ಇಂದಿರಾ ಕ್ಯಾಂಟೀನ್ ಇನ್ನು ಮುಂದೆ ಇನ್ನಷ್ಟು ಗುಣಮಟ್ಟದ ಆಹಾರದಿಂದ ಕೂಡಿರಲಿದೆ. ಇದಕ್ಕಾಗಿಯೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ರುಚಿಕರವಾದ ಹೊಸ ಮೆನುವನ್ನು ಬಿಡುಗಡೆ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್ಗಳು ಹೈಟೆಕ್ ರೂಪ ಪಡೆಯಲ್ಲಿವೆ.ಅದರ ಜೊತೆಗೇ ಊಟದ ಜೊತೆ ನಂದಿನಿ ಐಸ್ ಕ್ರೀಮ್, ಚಾಕಲೇಟ್, ಬಿಸ್ಕೇಟ್, ಹಾಲು, ಮೊಸರು, ತುಪ್ಪಾ ಕೂಡಾ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಹೈನುಗಾರರಿಗೂ ಪ್ರೋತ್ಸಾಹ ನೀಡುವ ಯೋಜನೆ ಸಿದ್ಧವಾಗಿದೆ.
ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗೆ ಹೋದರೆ ಊಟದ ಜೊತೆ ನಂದಿನಿ ಐಸ್ ಕ್ರೀಮ್, ಚಾಕಲೇಟ್, ಬಿಸ್ಕೇಟ್, ಹಾಲು, ಮೊಸರು, ತುಪ್ಪಾ ಕೂಡಾ ಸಿಗುತ್ತೆ. ಈ ಬಗ್ಗೆ ಹಾಗೂ ರಾಜ್ಯ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿದ್ದ 198 ಇಂದಿರಾ ಕ್ಯಾಂಟೀನ್ಗಳ ಸಂಖ್ಯೆಯನ್ನ 250ಕ್ಕೆ ಏರಿಕೆ ಮಾಡಲು ಸಿಎಂ ಮುಂದಾಗಿದ್ದು ಇದರ ಜೊತೆ ನಂದಿನಿ ವ್ಯಾಪಾರ ವಹಿವಾಟು ಹೆಚ್ಚಿಸಲು ಇಂದಿರಾ ಕ್ಯಾಂಟೀನ್ಗಳಲ್ಲಿಯೇ ಸರ್ಕಾರ ಹಾಗೂ ಸಹಯೋಗದಲ್ಲಿ ನಂದಿನಿ ಮಳಿಗೆ ತೆರಯಲು ಚಿಂತನೆ ನಡೆದಿದೆ. ನಂದಿನಿ ಬೊಕ್ಕಸ ತುಂಬಲು ಸರ್ಕಾರ ಹಾಗೂ ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಸ್ಟರ್ ಪ್ಲಾನ್ ಮಾಡಿದ್ದು ನಂದಿನಿ ಬ್ಯಾಂಡ್ ಹೆಚ್ಚಿಸಲು ಮುಂದಾಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel