ಸಿಂಧು ಜಲ ಒಪ್ಪಂದದ ಅಮಾನತ್ತಿನಿಂದ ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗದಲ್ಲಿನ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರೊಂದಿಗೆ ದೆಹಲಿಯಲ್ಲಿ ನಿನ್ನೆ ಸಂವಾದ ನಡೆಸಿದ ಸಚಿವರು, ಸಿಂಧು ನದಿಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸಂಬಂಧ ಸಮಗ್ರ ಕಾರ್ಯತಂತ್ರ ರೂಪಿಸಿದರೆ ಭವಿಷ್ಯದಲ್ಲಿ ರೈತರೂ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.ಸಿಂಧು ಜಲ ಒಪ್ಪಂದ ಅಮಾನತ್ತಿನಲ್ಲಿಟ್ಟಿರುವುದು ಒಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಸಚಿವರು ತಿಳಿಸಿದರು.ಈ ನದಿಯಿಂದ ಪಾಕಿಸ್ತಾನಕ್ಕೆ ನೀರು ಒದಗಿಸಿದರೆ, ಭಾರತದ ರೈತರಿಗೆ ಅನ್ಯಾಯವಾಗಲಿದೆ ಎಂದೂ ಅವರು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಸಚಿವರು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರಲ್ಲದೆ, ಸಿಂಧು ಜಲ ಒಪ್ಪಂದ ಕುರಿತಂತೆ ಅವರ ಸಲಹೆ, ಸೂಚನೆಗಳನ್ನು ಆಲಿಸಿದರು.