ಸಿಂಧೂ ನದಿ ಜಲಾನಯನ ಪ್ರದೇಶದ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ, ಈ ವರ್ಷದ ಆರಂಭದಲ್ಲಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ನಂತರ ಅಲ್ಲಿನ ಕೃಷಿ ಪರಿಸ್ಥಿತಿ ಹೇಗಿದೆ..? ಈ ಬಗ್ಗೆ ಸಿಡ್ನಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ & ಪೀಸ್ ಪ್ರಕಟಿಸಿದ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಸದ್ಯ ಅಲ್ಲಿ ನೀರಿನ ಕೊರತೆಯಿಂದ ಕೃಷಿ ಸಂಕಷ್ಟಕ್ಕೆ ಹೋಗುತ್ತಿದೆ.
ಈ ವರ್ಷದ ಏಪ್ರಿಲ್ ನಲ್ಲಿ ನಡೆದ ಬರ್ಬರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬೆಳವಣಿಗೆಯು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯನ್ನೂ ಸೂಚಿಸುತ್ತದೆ. ಏಕೆಂದರೆ ಅವರ ಕೃಷಿಯು ಸಿಂಧೂ ನದಿ ವ್ಯವಸ್ಥೆಯ ಮೇಲೆ ಶೇ. 80%ರಷ್ಟು ಅವಲಂಬಿತವಾಗಿದೆ. ಸದ್ಯ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಗಂಭೀರ ಪರಿಣಾಮವನ್ನು ಎದುರಿಸುತ್ತಿವೆ. ಪಾಕಿಸ್ತಾನದ ಸಂಕಟಗಳನ್ನು ಸಿಡ್ನಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ & ಪೀಸ್ “ಪರಿಸರ ಸಂಕಷ್ಟದ ವರದಿ 2025” ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ನೀರಿನ ತೀವ್ರ ಕೊರತೆಯು ಪಾಕಿಸ್ತಾನದ ಕೃಷಿ ಭೂಮಿಯನ್ನು ಮರಭೂಮಿಯನ್ನಾಗಿ ಪರಿವರ್ತಿಸುತ್ತಿದೆ ಎಂದು ಎಚ್ಚರಿಸಿದೆ.
ನಿರ್ಣಾಯಕ ಕ್ಷಣಗಳಲ್ಲಿ ಸಣ್ಣ ಅಡೆತಡೆಗಳು ಸಹ ಪಾಕಿಸ್ತಾನದ ಕೃಷಿಗೆ ಗಂಭೀರ ಹಾನಿ ತರಬಹುದು. ಏಕೆಂದರೆ ಪಾಕಿಸ್ತಾನದಲ್ಲಿ ನದಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಕಷ್ಟು ಸಂಗ್ರಹಣಾ ಸ್ಥಳವಿಲ್ಲ. ಪಾಕಿಸ್ತಾನದ ಸ್ವಂತ ಅಣೆಕಟ್ಟು ಸಾಮರ್ಥ್ಯವು ಸುಮಾರು 30 ದಿನಗಳ ಸಿಂಧೂ ಹರಿವನ್ನು ಮಾತ್ರ ಹಿಡಿದುಕೊಳ್ಳಬಲ್ಲದು. ಹೀಗಾಗಿ ಯಾವುದೇ ದೀರ್ಘಕಾಲದ ನೀರಿನ ಅಲಭ್ಯತೆ ಹಾನಿಕಾರಕವಾಗಿರುತ್ತದೆ ಎಂದು ವರದಿ ಹೇಳಿದೆ. ಭಾರತದ ಪ್ರಸ್ತುತ ಮೂಲಸೌಕರ್ಯವು ನದಿ ಹರಿವನ್ನು ನಿಲ್ಲಿಸುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ ಎಂದು ವರದಿ ಹೇಳಿದೆ, ಸಣ್ಣ ಅಡಚಣೆಗಳು ಸಹ ಪಾಕಿಸ್ತಾನದ ಕೃಷಿ ವಲಯಕ್ಕೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಅಂದರೆ ಪಾಕಿಸ್ತಾನದ ಕೃಷಿ ಚಟುವಟಿಕೆಗಳು ಹೆಚ್ಚು ಕಡಿಮೆ ಸ್ಥಗಿತಗೊಳ್ಳುವ ಹಂತವನ್ನು ತಲುಪಿದೆ.

