ಎರೆಹುಳಗೊಬ್ಬರ ಕುರಿತ ಮಾಹಿತಿ | ಎರೆಹುಳ ಗೊಬ್ಬರವನ್ನು ಖರೀದಿಸುವಾಗ ಎಚ್ಚರ

July 1, 2024
12:17 PM

ಎರೆಹುಳ(Earthworm) ಕೃಷಿ ಎರೆಗೊಬ್ಬರದ ಉತ್ಪನ್ನ(agricultural fertilizer product) ಅಥವಾ ಒಂದು ಪ್ರಕ್ರಿಯೆಯಲ್ಲಿ ಹುಳುಗಳನ್ನು ಬಳಸಿಕೊಂಡು ಮಿಶ್ರಗೊಬ್ಬರವನ್ನು ತಯಾರಿಸಬಹುದು. ಸಾಮಾನ್ಯವಾಗಿ ಕೆಂಪು ವಿಗ್ಲರ್, ಬಿಳಿ ಹುಳಗಳು ಮತ್ತು ಇತರ ಎರೆಹುಳುಗಳು ಕೊಳೆತ ತರಕಾರಿ(Vegetable waste) ಅಥವ ಆಹಾರ ತ್ಯಾಜ್ಯ(Food Waste), ಹಳಸಿದ ಪದಾರ್ಥಗಳು ಮತ್ತು ವರ್ಮ್ಕಾಸ್ಟ್ ಬಳಸಿ ಭಿನ್ನ ಜಾತಿಯ ಮಿಶ್ರಗೊಬ್ಬರವನ್ನು(Compost)ರಚಿಸಲು ಸಾಧ್ಯ. ವರ್ಮಿಕಾಸ್ಟನ್ನು ಹುಳು ಎರಕ, ಹುಳು ಗೊಬ್ಬರ ಅಥವಾ ವರ್ಮ್ ಹ್ಯೂಮಸ್ ಎಂದು ಕರೆಯುತ್ತಾರೆ.

Advertisement
Advertisement
Advertisement
Advertisement

ಇದು ಒಂದು ಎರೆಹುಳು ಮೂಲಕ ಅಭಿವೃದ್ಧಿ ಹೊಂದುವ ಸಾವಯವ ತ್ಯಾಜ್ಯವಾಗಿದ್ದ, ಅಂತಿಮ ಉತ್ಪನ್ನವಾಗಿದೆ. ಈ ಎರೆಹುಳು ಗೊಬ್ಬರದಲ್ಲಿ ಮಾಲಿನ್ಯ ಕಾರಕಗಳ ಮಟ್ಟ ಕಡಿಮೆಯಲ್ಲಿದ್ದು, ಮತ್ತು ಎರೆಹುಳು ಗೊಬ್ಬರ ಮಾಡುವ ಮುನ್ನ ಸಾವಯವ ವಸ್ತುಗಳಲ್ಲಿ ಇದ್ದಂತಹ, ಪೋಷಕಾಂಶಗಳ ಶುದ್ಧತ್ವ ಹೆಚ್ಚಿನ ಮಟ್ಟದಲ್ಲಿ ಹೊಂದಿರುತ್ದೆತದೆ. ನೀರಿನಲ್ಲಿ ಸುಲಭವಾಗಿ ಕರಗುವ ಪೌಷ್ಠಿಕ ದ್ರವ್ಯಗಳನ್ನು ಹೊಂದಿರುವ ಈ ಮಿಶ್ರಗೊಬ್ಬರ ಒಂದು ಅತ್ಯುತ್ತಮ ಪೊಷಕಾಂಶ ಭರಿತ ಸಾವಯವ ಗೊಬ್ಬರ ಮತ್ತು ಮಣ್ಣಿನಲ್ಲಿ ಒಳ್ಳೆ ತೇವಾಂಶವನ್ನು ಹೊಂದಿದೆ. ಈ ರೀತಿಯ ಗೊಬ್ಬರ ತಯಾರಿಕೆಯನ್ನು ಎರೆಹುಳು ಮಿಶ್ರಗೊಬ್ಬರವೆಂದು ಕರೆಯುತ್ತಾರೆ.

Advertisement

ರೆಡ್ ವಿಗ್ಲರ್ ಎಂಬ ಜಾತಿಯ ಎರೆಹುಳು ಮಿಶ್ರಗೊಬ್ಬರ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಚೀನಾ ದೇಶದಲ್ಲಿ ಅಧಿಕವಾಗಿ ಲಭ್ಯವಿರುವ ತಳಿ – ಕೆಂಪು ಎರೆಹುಳು, ಇದನ್ನು ಹೆಚ್ಚಾಗಿ ಉಪಯೋಗಿಸಲು ಸಾಧವಿಲ್ಲ. ಏಕೆಂದರೆ ಅದು ಆಳವಿಲ್ಲದ ಮಿಶ್ರಗೊಬ್ಬರದ ಡಬ್ಬಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ಯುರೋಪಿಯನ್ ನೈಟ್ ಕ್ರಾಲರ್ ಎಂಬ ತಳಿಯನ್ನೂ ಬಳಸಬಹುದು. ಉಪಯುಗಿಸುವವರು ಈ ಜಾತಿಯ ಎರೆಹುಳವನ್ನು ಅನೇಕ ಹೆಸರಿನಿಂದ – ಡೆಂಡ್ರೊ ಬೆನಸ್, ಬೆಲ್ಜಿಯನ್ ನೈಟ್ ಕ್ರಾಲರ್ಗಳೆಂದು ಗುರುತಿಸುತ್ತಾರೆ. ಈ ಎಲ್ಲಾ ತಳಿಗಳು ಬಹು ಜನಪ್ರಿಯ ಮಿಶ್ರಗೊಬ್ಬರ ತಯಾರಕರು. ಲುಂಬ್ರಿಕುಸ್ ಟೆರೆಸ್ಟಿಸ್ ಅಥವ ಸಾಮಾನ್ಯ ಎರೆಹುಳು ಹೆಚ್ಚಾಗಿ ಸಿಫಾರಸು ಮಾಡುವುದಿಲ್ಲ, ಏಕೆಂದರೆ ಅವು ಬಹಳ ಆಳವಾಗಿ ಬಿಲಗಳನ್ನು ಕೊರೆಯುತ್ತವೆ. ಇದಕ್ಕೆ ಎರೆಹುಳ ಗೊಬ್ಬರ ಮಾಡುವ ಸಾಮರ್ಥಯ ಇರೋದಿಲ್ಲ.

ಬ್ಲೂವರ್ಮ್ ಎಂಬ ಜಾತಿಯನ್ನು ಬಳಸುತ್ತಾರೆ. ಈ ಎಲ್ಲಾ ಜಾತಿಯ ತಳಿಗಳು ಸಾವಯವ ಹೆಚ್ಚಾಗಿರುವ ಮಣ್ಣಿನ ಪ್ರದೇಶಗಳಾದ ಯುರೋಪ್ ಮತ್ತು ಉತ್ತರ ಅಮೇರಿಕಾಗಳಲ್ಲಿ ಕೊಳೆಯುತ್ತಿರವ ಸಸ್ಯ ವರ್ಗದ ಮಿಶ್ರಗೊಬ್ಬರದಲ್ಲಿ ಮತ್ತು ಗೊಬ್ಬರ ರಾಶಿಗಳಲ್ಲಿ ವಾಸಿಸುತ್ತದೆ. ಕೆಲವು ಜಾಗಗಳಲ್ಲಿ ಆಕ್ರಮಣಶೀಲ ಜಾತಿಯ ತಳಿಗಳು ಕಾಣಬಹುದು. ಈ ಹುಳುಗಳು ಆಳವಿಲ್ಲದ ಜಾಗಗಳಲ್ಲಿ ವಾಸಿಸುತ್ತದೆ ಹಾಗೂ ಅಲ್ಲಿ ದೊರಕುವ ಕೊಳೆತ ಸಸ್ಯಗಳ ಪದಾರ್ಥವಿರುವ ಮಣ್ಣಿನಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆಹಾರ ಅಥವಾ ಸಸ್ಯ ತ್ಯಾಜ್ಯ ಪದಾರ್ಥಗಳ ಮೇಲೆ ಅವು ಬಹಳಷ್ಟು ಹೊಂದಿಕೊಂಡು ವರ್ಮ್ ಬಿನ್ಗಳಲ್ಲಿ ನಿರ್ಬಂಧಿತವಾಗಿರುತ್ತದೆ.

Advertisement

ಮಿಶ್ರಗೊಬ್ಬರ ಹುಳುಗಳು ಆನ್ಲೈನ್ನಲ್ಲಿ ಲಭ್ಯವಿದ್ದು ಇವುಗಳನ್ನು ನರ್ಸರಿ ಮತ್ತು  ಮಳಿಗೆಗಳಲ್ಲಿ ಎರೆಹುಳ ಎಂದು ಮಾರಾಟ ಮಾಡುತ್ತಾರೆ. ಇವುಗಳನ್ನು ಗೊಬ್ಬರದ ರಾಶಿಯಲ್ಲಿ ಅಥವಾ ಬೆರಕೆಗೊಬ್ಬರಗಳಲ್ಲಿ ಕೂಡ  ಸಂಗ್ರಹಿಸಬಹುದು. ಸಾಮಾನ್ಯ ಮಣ್ಣಿನಲ್ಲಿ ಅಥವಾ  ಮಣ್ಣು ನೀರಿನಿಂದ ಪ್ರವಾಹಕ್ಕೆ ಒಳಪಟ್ಟು, ಅದರ ಮೇಲೆ ಲಭ್ಯವಿರುವ ತಳಿಗಳು ಈ ಜಾತಿಯ ತಳಿಗಳಿಗಿಂತ ಬೇರೆಯಾಗಿದೆ. ಹಾಗಾಗಿ ರಹುಳ ಗೊಬ್ಬರವನ್ನು ಖರೀದಿಸುವಾಗ ಎಚ್ಚರವಾಗಿರಬೇಕು.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror