ಸರ್ಕಾರಿ ನೌಕರಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ

October 10, 2020
4:26 PM

ಸರ್ಕಾರಿ ಹುದ್ದೆಗಳಿಗೆ ಹೋಗಲು ಇಚ್ಚಿಸುವವರಿಗೆ ಕೇಂದ್ರ ಸರಕಾರ ಸಿಹಿಸುದ್ದಿಯನ್ನು ನೀಡಿದೆ. ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಪರೀಕ್ಷಾ ತಯಾರಿಯ ಹಾದಿಯನ್ನು ಸುಲಭಗೊಳಿಸಿದೆ. ಸರಕಾರಿ ನೌಕರಿಗಳಿಗೆ ಇರುವ ಪ್ರವೇಶ ಪರೀಕ್ಷೆಗಳನ್ನು ಸಾರ್ವತ್ರಿಕ ಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನ ಸ್ಥಾಪಿಸಲು ನಿರ್ಧರಿಸಿದೆ.

Advertisement
Advertisement

ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಹೊಸದಾಗಿ ರಚಿಸಲಾದ ಸಂಸ್ಥೆಯು ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯಡಿ, ಸ್ಟಾಫ್ ಸೆಲೆಕ್ಶನ್ ಕಮಿಷನ್ (ಎಸ್ ಎಸ್ ಸಿ) ಮತ್ತು ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಮತ್ತು ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗಳನ್ನ ನಡೆಸಲಿದೆ. ಹೊಸ ನೇಮಕಾತಿ ಏಜೆನ್ಸಿಯನ್ನ ರಚಿಸಲು ಕೇಂದ್ರ ಸರ್ಕಾರ ₹1,517.57 ಕೋಟಿ ಮಂಜೂರು ಮಾಡಿದೆ.

ಕೇಂದ್ರ ಸರ್ಕಾರ ನೀಡಿರುವ ಮಾಹಿತಿಗಳ ಪ್ರಕಾರ, ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಿವಿಧ ಸಮಾನ ನೇಮಕಾತಿಯ ಜೊತೆಗೆ ಸರ್ಕಾರದ ಗ್ರೂಪ್-ಬಿ (ಗೆಜೆಟೆಡ್ ಅಲ್ಲದ), ಗ್ರೂಪ್-ಸಿ (ತಾಂತ್ರಿಕೇತರ) ಮತ್ತು ಕ್ಲರಿಕಲ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುತ್ತದೆ.

ಪದವಿ, ಹೈಯರ್ ಸೆಕೆಂಡರಿ (12ನೇ ಪಾಸ್) ಮತ್ತು ಮೆಟ್ರಿಕ್ಯುಲೇಟ್ (10ನೇ ಪಾಸ್) ಅಭ್ಯರ್ಥಿಗಳಿಗೆ ತಲಾ ಒಂದು ಪ್ರತ್ಯೇಕ ಸಿಇಟಿ ಇರುತ್ತದೆ. ‘ಈ ಪರೀಕ್ಷೆಯ ಪಠ್ಯಕ್ರಮ ವು ಸಾಮಾನ್ಯವಾಗಿರುತ್ತದೆ. ಪ್ರಸ್ತುತ ಪ್ರತಿ ಪರೀಕ್ಷೆಗೂ ಪ್ರತ್ಯೇಕವಾಗಿ ಸಿದ್ಧತೆ ನಡೆಸಲು ಅಗತ್ಯವಿರುವ ಅಭ್ಯರ್ಥಿಗಳ ಹೊರೆಯನ್ನ ಇದು ಕಡಿಮೆ ಮಾಡಲಿದೆ’ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅದರೊಂದಿಗೆ ಸಿಇಟಿ ಅಂಕ ಮಟ್ಟದಲ್ಲಿ ಮಾಡಿದ ಸ್ಕ್ರೀನಿಂಗ್ ಆಧಾರದ ಮೇಲೆ, ಆಯಾ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಯ ಪ್ರತ್ಯೇಕ ವಿಶೇಷ ಹಂತಗಳ (II, III ಇತ್ಯಾದಿ) ಮೂಲಕ ನೇಮಕಾತಿಗೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಹಾಗೂ ಸಿಇಟಿಯ ಅಂಕವು ಮೂರು ವರ್ಷಗಳ ಕಾಲ ಸಿಂಧುವಾಗಿರುತ್ತದೆ. ವಯೋಮಿತಿಯ ಮಿತಿಗೆ ಒಳಪಟ್ಟು ಸಿಇಟಿಯಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿ ಎಷ್ಟು ಪ್ರಯತ್ನ ಮಾಡಬೇಕು ಎಂಬ ಬಗ್ಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಪ್ರವೇಶ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹೆಚ್ಚು ಪ್ರಯಾಣ ಮಾಡುವ ಅಥವಾ ಪ್ರಯಾಸ ಪಡುವ ಅಗತ್ಯವಿರುವುದಿಲ್ಲ. ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಪರೀಕ್ಷೆಗಳನ್ನು ಆಯೋಜಿಸುವ ಯೋಜನೆಯನ್ನು ತರುವ ಆಲೋಚನೆ ಕೇಂದ್ರ ಸರ್ಕಾರದಾಗಿದೆ. ಅದರಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ವ್ಯಯಮಾಡುವ ಸಮಯ ಹಾಗೂ ಹಣ ಉಳಿಯುತ್ತದೆ. ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಕೇಂದ್ರಗಳನ್ನ ಆಯ್ಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಲಭ್ಯತೆ ಆಧರಿಸಿ ಅವರಿಗೆ ಕೇಂದ್ರ ಹಂಚಿಕೆ ಮಾಡಲಾಗುವುದು. ಇದರಿಂದ ಪ್ರತಿ ವರ್ಷ ಪರೀಕ್ಷೆ ಬರೆಯಲು ಸಾಕಷ್ಟು ಸಮಯ, ಹಣ, ಶ್ರಮ ವ್ಯಯಿಸುತ್ತ, ಅಭ್ಯರ್ಥಿಗಳ ಕಷ್ಟವನ್ನು ದೂರ ಮಾಡಲು ಸಾಧ್ಯವಾಗುತ್ತೆ ಎಂದು ಸಚಿವರು ತಿಳಿಸಿದರು.

Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |
June 28, 2025
7:14 AM
by: The Rural Mirror ಸುದ್ದಿಜಾಲ
ಕೃಷಿ ಮತ್ತು ಆಹಾರೋತ್ಪನ್ನ ವಲಯದಲ್ಲಿ ಹೂಡಿಕೆಗೆ ಅವಕಾಶ
June 27, 2025
6:26 AM
by: The Rural Mirror ಸುದ್ದಿಜಾಲ
ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು
June 26, 2025
9:54 PM
by: The Rural Mirror ಸುದ್ದಿಜಾಲ
41 ವರ್ಷಗಳ ಬಳಿಕ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳ ಅಂತರಿಕ್ಷ ಯಾನ
June 25, 2025
6:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group