Advertisement
Opinion

ಮುಜಂಟಿ ಜೇನಿನ ಬಗ್ಗೆ ಒಂದಷ್ಟು ಮಾಹಿತಿ | ಶೂನ್ಯ ಬಂಡವಾಳದಲ್ಲಿ ಜೇನು ಸಾಕಾಣಿಕೆ ಸಾಧ್ಯ…!

Share

ಮುಜಂಟಿ ಜೇನನ್ನು(stingless bee) ಮಿಸಿರಿ ಜೇನು, ಮಸರು ಜೇನು, ರಾಳ ಜೇನು, ಮೂಲಿ ಜೇನು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಟ್ರೈಗೋನ ಇರಿಡಿಪೆನ್ನಿಸ್ (Trigona irridipennis). ಮುಜಂಟಿ ಜೇನು ಹುಳಗಳು(Honey bee) ಗಾತ್ರದಲ್ಲಿ ತುಂಬಾ ಸಣ್ಣದಿರುವುದರಿಂದ ಎಲ್ಲಾ ತರಹದ ಸಣ್ಣ ಪುಟ್ಟ ಹೂವುಗಳಿಂದಲೂ ಮಕರಂದ(Nectar) ಸಂಗ್ರಹಿಸುತ್ತವೆ. ಈ ಜೇನು ಹುಳಗಳು ತೆಂಗು(Coconut), ಅಡಿಕೆ(Areca nut), ಕಾಫಿ(Coffee) ಹಾಗೂ ಇಕ್ಸೋರ ಹೂಗಳಿಂದಲೂ ಮಕರಂದ ಸಂಗ್ರಹಿಸುವುದರಿಂದ ಕೃಷಿಗೂ ಇದು ಪೂರಕ.

ಮುಜಂಟಿ ಜೇನು ಗಲಾಟೆ ಇಲ್ಲದೇ ಶಾಂತಿಯಿಂದ ಬದುಕುವ ಕೀಟಗಳು. ತಮ್ಮ ಗೂಡನ್ನು ಮೇಣದಿಂದ ಮುಚ್ಚಿ ಎಲ್ಲಿಯೂ ಬೆಳಕು ಗಾಳಿ ಬರದಂತೆ ಕತ್ತಲೆ ಕೋಣೆಯಲ್ಲಿ ಜೀವನ ಮಾಡುತ್ತವೆ. ಕೇವಲ ಒಳ ಹೊರಗೆ ಓಡಾಡುವುದಕ್ಕೆ ಸಣ್ಣ ರಂಧ್ರ ಮಾಡಿಕೊಂಡಿರುತ್ತವೆ. ಮನುಷ್ಯ ಹತ್ತಿರ ಹೋದಲ್ಲಿ ತಲೆ ಕೂದಲು ರೋಮಗಳಿಗೆ ಅಂಟಿಕೊಳ್ಳುತ್ತವೆ. ತಮ್ಮ ಗೂಡಿನಲ್ಲಿ ದ್ರಾಕ್ಷಿ ಗೊಂಚಲಿನಂಥ ಗೂಡುಗಳಲ್ಲಿ ಜೇನು, ಮೊಟ್ಟೆ, ಮರಿಗಳನ್ನು ಹಾಗೂ ಪರಾಗವನ್ನು ಸಹ ಸಂಗ್ರಹಿಸಿಕೊಳ್ಳುತ್ತವೆ. ಜೇನು ತೆಗೆದ ನಂತರ ಮೊಟ್ಟೆ ಮರಿಗಳ ಗೂಡುಗಳ ಸಮೇತ ಸ್ವಲ್ಪ ಹುಳುಗಳನ್ನು ತೆಗೆದುಕೊಂಡು ಬೇರೆ ಗೂಡುಗಳಲ್ಲಿ ಹೊಸ ಕುಟುಂಬವನ್ನಾಗಿ ಸಾಕಬಹುದು.

ಹವ್ಯಾಸವಾಗಿ ಇದರ ಸಾಕಾಣಿಕೆ ಮಾಡುವವರು ತಮ್ಮ ಮನೆಯ ಸುತ್ತಲೂ ಎಲ್ಲಿಯಾದರೂ ಮುಜಂಟಿ ಜೇನಿನ ಗೂಡನ್ನು ಕಂಡಲ್ಲಿ ಬಹಳ ಸೂಕ್ಷ್ಮವಾಗಿ ಅವುಗಳ ಮೊಟ್ಟೆ ಮತ್ತು ಮರಿ ಹುಳುಗಳು ಇರುವ ಅರಿಯನ್ನು ಕತ್ತರಿಸಿ ಸ್ವಲ್ಪ ಜೇನು ಹುಳುಗಳ ಜೊತೆ ಬಿದಿರಿನ ಬೊಂಬುಗಳಲ್ಲಿ ಅಥವಾ ಮರದ ಸಣ್ಣ ಪೆಟ್ಟಿಗೆಗಳಲ್ಲಿ ಸೇರಿಸಿ ಮನೆಯ ಮಾಡಿನಲ್ಲಿ ನೇತು ಹಾಕಿಕೊಳ್ಳಬಹುದು. ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಿನಲ್ಲಿ ಸಾಮಾನ್ಯವಾಗಿ ಗೂಡಿನಿಂದ ಜೇನು ತುಪ್ಪ ತೆಗೆಯಬಹುದಾಗಿದೆ.

ಹಿಂದೆಲ್ಲ ಮುಜಂಟಿ ಜೇನಿನ ತುಪ್ಪವನ್ನು ಯಾರೂ ತಿನ್ನಲು ಬಳಸುತ್ತಿರಲಿಲ್ಲ. ಅದರ ಬಳಕೆ ಔಷಧೀಯ ಉದ್ದೇಶಕ್ಕೆ ಸೀಮಿತವಾಗಿತ್ತು. ಆದ್ದರಿಂದ ಒಮ್ಮೆ ತೆಗೆದ ಜೇನು ಬಾಟಲಿಯಲ್ಲಿ ಅನೇಕ ವರ್ಷಗಳವರೆಗೆ ಉಳಿಯುತ್ತಿತ್ತು. ಜೇನುಕುಟುಂಬವೂ ಗೂಡಿನಲ್ಲಿ ತನ್ನ ನೆಲೆ ಭದ್ರಹಡಿಸಿಕೊಂಡು ಹಲವು ವರ್ಷ ಹಾಗೆಯೇ ಇರುತ್ತಿತ್ತು. ಮುಟ್ಟಹೋದವರಿಗೆ ಇವು ಕಚ್ಚುವುದಿಲ್ಲ. ಗೂಡಿನಿಂದ ರಪರಪನೆ ಹೊರಬಂದು ಮೈಮೇಲೆಲ್ಲ ದಾಳಿ ನಡೆಸಿ ತಲೆಗೂದಲಿಗೆ ಅಂಟಿಕೊಂಡು ರೇಜಿಗೆ ಹುಟ್ಟಿಸುತ್ತವೆ. ಹಾಗಾಗಿ ಯಾರೂ ಅವುಗಳ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅವುಗಳನ್ನು ಔಷಧೀಯ ಉಪಯೋಗದ ಜತೆಗೆ ತಿನ್ನುವುದಕ್ಕೂ ಬಳಸುತ್ತಿದ್ದಾರೆ. ಹಾಗಾಗಿ ಕೆಲವರು ಅದರ ವ್ಯಾಪಾರ ಆರಂಭಿಸಿದ್ದಾರೆ. ಮೊನ್ನೆಮೊನ್ನೆಯ ವರೆಗೂ ಮಣ್ಣಿನ ಗೋಡೆಗಳ ಸಂದುಗಳಲ್ಲೋ, ಮರದ ದಿಮ್ಮಿ-ಬಿದಿರ ಮೆಳೆಗಳಲ್ಲೋ, ವಿದ್ಯುತ್ ಮೀಟರ್ ಬಾಕ್ಸಿನೊಳಗೋ ಅವಿತಿರುತ್ತಿದ್ದ ಈ ಕಚ್ಚದ ಜೇನ್ನೊಣಗಳಿಗಾಗಿ ಈಗ ವ್ಯವಸ್ಥಿತ ಗೂಡುಗಳು ಅವತರಿಸಿವೆ. ಐವತ್ತು-ನೂರರಿಂದ ಹಿಡಿದು ಸಾವಿರಕ್ಕೂ ಮಿಕ್ಕಿ ಮುಜಂಟಿ ಜೇನುಕುಟುಂಬಗಳನ್ನಿಟ್ಟು ಶಾಸ್ತ್ರೀಯವಾಗಿ ಸಾಕಣೆ ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ.

ಕೇರಳದಲ್ಲಿ ಕ್ರಾಂತಿ: ಕಳೆದೊಂದು ದಶಕದಿಂದ ಕೇರಳದಲ್ಲಂತೂ ಮುಜಂಟಿ ಸಾಕಣೆಯಲ್ಲಿ ಒಂದು ಕ್ರಾಂತಿಯೇ ಆಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಗೂಡುಗಳನ್ನಿಟ್ಟು ವೈಜ್ಞಾನಿಕ ರೀತಿಯಲ್ಲಿ ಪೋಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ‘ಮನೆಗೊಂದು ಮುಜಂಟಿ ಗೂಡು’ ಆ ರಾಜ್ಯದಲ್ಲಿ ಒಂದು ಅಭಿಯಾನದ ರೂಪ ಪಡೆದಿದೆ. ಕರ್ನಾಟಕದಲ್ಲೂ ಅಲ್ಲಲ್ಲಿ ಇದನ್ನು ಸಾಕಣೆ ಮಾಡುವವರಿದ್ದಾರೆ.

Source : Digital Media ಸಂಗ್ರಹ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

10 hours ago

ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ

ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…

11 hours ago

ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ

ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…

15 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

24 hours ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

1 day ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

1 day ago