ಸುಳ್ಯದಲ್ಲಿ ಮಡಪ್ಪಾಡಿಯಲ್ಲಿ ಕೃಷಿಕರಿಗೆ ತಾಳೆ, ರೇಷ್ಮೆ ಹಾಗೂ ಗೇರುಕೃಷಿ ಕುರಿತು ಮಾಹಿತಿಯನ್ನು ನೀಡಲಾಯಿತು.
ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಡಪ್ಪಾಡಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) ಕೇಂದ್ರ ವಿಟ್ಲ ಹಾಗೂ 3F ಆಯಿಲ್ ಪಾಮ್ ಪ್ರೈ. ಲಿ., ದ. ಕ., ಉಡುಪಿ ಸಹಯೋಗ ದಲ್ಲಿ ಯುವಕ ಮಂಡಲ ಸಭಾಭವನದಲ್ಲಿ ಒಕ್ಕೂಟದ ಮಾಸಿಕ ಸಭೆ ಹಾಗೂ ಕೃಷಿಕರಿಗೆ ಕೃಷಿ ಮಾಹಿತಿ ನೀಡಲಾಯಿತು.
ತಾಳೆ ಕೃಷಿಯ ವಿಧಾನ, ಪೋಷಣೆ, ಕಂಪನಿ ನೀಡುವ ಸಹಕಾರ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯ ಗಳ ಕುರಿತು ಮಾಹಿತಿ ನೀಡಲಾಯಿತು. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ರೇಷ್ಮೆ ಹಾಗೂ ಗೇರುಕೃಷಿಯ ಕುರಿತು ಪ್ರಾಥಮಿಕ ಮಾಹಿತಿ ನೀಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೃಷಿಕರಿಗೆ ಸಿಗುವ ಸಬ್ಸಿಡಿ ಹಾಗೂ ಸೌಲಭ್ಯಗಳ ವಿಷಯ ತಿಳಿಸಲಾಯಿತು.
ಶ್ವೇತಾ ಅವರು ಸಂಜೀವಿನಿ ಯೋಜನೆಯ ಮೂಲಕ ಸ್ವ ಉದ್ಯೋಗ ಹಾಗೂ ತರಬೇತಿ ಅವಕಾಶ ಗಳ ಬಗ್ಗೆ ಮಾತನಾಡಿ, ಅಗತ್ಯವಿದ್ದರೆ ಬೇಡಿಕೆ ಸಲ್ಲಿಸಲು ಹೇಳಿದರು. ಲೋಕೋಸ್ ಐಡಿ ಪ್ರಾಮುಖ್ಯತೆ ಹಾಗೂ ಸಂಜೀವಿನಿ ಸಂಘದ ಸದಸ್ಯತ್ವದ ಮೂಲಕ ಸಿಗುವ ಹಲವಾರು ಸೌಲಭ್ಯಗಳ ಜೊತೆಗೆ 3 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲ ಪಡೆಯಬಹುದೆಂದು ಹೇಳಿದರು.
ಇದೇ ವೇಳೆ MSME, FSSAI ಮತ್ತು ಸ್ವ ಸಹಾಯ ಸಂಘ ಸದಸ್ಯೆಯರಿಗೆ ಸಂಜೀವಿನಿ ಮೂಲಕ ಸಿಗುವ ಉತ್ತೇಜನಗಳ ವಿಷಯ ತಿಳಿಸಲಾಯಿತು. ಯಾವುದೇ ಕೃಷಿ ಸಂಬಂಧಿತ ಮಾಹಿತಿ ಅಥವಾ ತರಬೇತಿ ಅಗತ್ಯವಿದ್ದಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಅವಕಾಶವಿದೆ ಎಂದು ತಿಳಿಸಲಾಯಿತು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಾಣಿ ಎಂ.ಸಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ ಹೆಚ್, ಎನ್.ಆರ್.ಎಲ್.ಎಂ. ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ತಾಳೆ ಕೃಷಿ ಕ್ಲಸ್ಟರ್ ಸೂಪರ್ವೈಸರ್ ರವಿಶಂಕರ, ಕೃಷ್ಣ ವೈ.ಟಿ (ಉಡುಪಿ, ದ.ಕ. ಏರಿಯಾ ಮ್ಯಾನೇಜರ್ – 3F ಆಯಿಲ್ ಪಾಮ್ ಪ್ರೈ. ಲಿ.) ಹಾಗೂ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ), ತಾಳೆ ಕೃಷಿಕೆ ಚಂದ್ರಮತಿ ಪಿ. ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರು ಅವಿನಾಶ್, ಬ್ಲಾಕ್ ಮ್ಯಾನೇಜರ್ ಮೇರಿ, ಎಂ.ಬಿ.ಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶುಸಖಿ, ಬಿ.ಸಿ ಸಖಿ, ಪದಾಧಿಕಾರಿಗಳು, ಸದಸ್ಯೆಯರು, ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


