ಹವಾಮಾನ ಬದಲಾವಣೆ | ವಿದೇಶದಲ್ಲೂ ಆರಂಭವಾಗಿದೆ ಗಂಭೀರ ಚಿಂತನೆ | ಹವಾಮಾನ ಬದಲಾವಣೆಯನ್ನು ಎದುರಿಸಲು ರೈತರು ತಂತ್ರಜ್ಞಾನ ಬಳಸಿಕೊಳ್ಳುವಂತೆ ಸಲಹೆ |

February 11, 2024
11:33 AM
ಹವಾಮಾನ ಬದಲಾವಣೆಯ ಬಗ್ಗೆ ಹಾಗೂ ಇದರಿಂದಾಗಿ ಕೃಷಿಯ ಮೇಲಿನ ಹೊಡೆತದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯ ಇದೆ.

ಈಚೆಗಿನ ಕೆಲವು ವರ್ಷಗಳಲ್ಲಿ ವಿಶ್ವದೆಲ್ಲೆಡೆ ಹವಾಮಾನ ಬದಲಾವಣೆಯ ಬಗ್ಗೆ ಚಿಂತನೆಗಳು ಆರಂಭವಾಗಿದೆ. ಹವಾಮಾನ ಬದಲಾವಣೆಯ ನೇರವಾಗಿ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಗಂಭೀರ ಚಿಂತನೆ ಆರಂಭವಾಗಿದೆ. ಈಚೆಗೆ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ, ಸುಸ್ಥಿರ ವ್ಯಾಪಾರ ಮಾದರಿಗಳು, ಕೃಷಿಯನ್ನು ಹೆಚ್ಚಿಸಲು ಪಾಲುದಾರಿಕೆಗಳು ಮತ್ತು ಆಫ್ರಿಕಾದಲ್ಲಿ ಪರಿವರ್ತನೆಯನ್ನು ಉತ್ತೇಜಿಸುವ ಹೂಡಿಕೆಗಳ ಕುರಿತು ಚರ್ಚಿಸಲಾಯಿತು.

Advertisement

ಭಾರತದಲ್ಲಿ ಕೂಡಾ ಹವಾಮಾನ ಬದಲಾವಣೆಯ ಪರಿಣಾಮಗಳು ಈಚೆಗೆ ಗೋಚರಿಸಲು ಆರಂಭವಾಗಿದೆ. ವಿದೇಶಗಳಲ್ಲಿ ಕೆಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಭಾರತದಲ್ಲಿ ಕಾಲಕಾಲಕ್ಕೆ ಮಳೆ ಹಾಗೂ ಹವಾಮಾನ ಒದಗಿ ಬರುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ವಿಪರೀತ ಬಿಸಿಲು, ಮಳೆ ಹಾಗೂ ಕಡಿಮೆಯಾದ ಚಳಿಯ ವಾತಾವರಣ ಕಂಡುಬರುತ್ತಿದೆ. ಹಾಗಿದ್ದರೂ ಭಾರತದ ಕೃಷಿ ವಲಯದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಗಂಭೀರವಾದ ಚಿಂತನೆ ಆರಂಭವಾಗಿಲ್ಲ.

ಆದರೆ ವಿದೇಶದಲ್ಲಿ ಈ ಬಗ್ಗೆ ಗಂಭೀರವಾದ ಚಿಂತನೆಗಳು ಆರಂಭವಾಗಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ರೈತರು ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ಬಳಸಿಕೊಳ್ಳುವಂತೆ ಸಲಹೆಗಳನ್ನು ನೀಡಲಾಗುತ್ತಿದೆ. ಕೀನ್ಯಾ, ಸೊಮಾಲಿಯಾ ಮತ್ತು ಇಥಿಯೋಪಿಯಾ ಆಫ್ರಿಕಾದಲ್ಲಿ  ಹವಾಮಾನ ಬದಲಾವಣೆಯ ಪರಿಣಾಮಗಳಿಂದ ರೈತರು ಬಳಲುತ್ತಿರುವುದರಿಂದ, ರೈತರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಣಾಮಗಳನ್ನು ತಗ್ಗಿಸಲು ಹೊಸ ವಿಧಾನಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈ ಕ್ರಮವು  ಕೃಷಿ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಬರ-ಸಹಿಷ್ಣು ಬೆಳೆಗಳನ್ನು ಅಳವಡಿಸಿಕೊಳ್ಳುವುದು ಕೂಡಾ ಈ ತಂತ್ರಜ್ಞಾನದಲ್ಲಿ ಒಳಗೊಂಡಿದೆ.

ಸ್ವಿಟ್ಜರ್ಲೆಂಡ್‌ನ ದಾವೋಸ್-ಕ್ಲೋಸ್ಟರ್ಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ  ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಡಾ ಆಗ್ನೆಸ್ ಕಲಿಬಾಟಾ,  ಪ್ರಸ್ತುತ ಆಫ್ರಿಕನ್ ದೇಶಗಳ  ಎದುರಿಸುತ್ತಿರುವ ಹವಾಮಾನ ಮತ್ತು ಆಹಾರ ಅಭದ್ರತೆಯ ಸಮಸ್ಯೆಗಳು ಗಂಭೀರವಾಗುತ್ತಿದೆ. ಈ ಬಗ್ಗೆ ಸೂಕ್ತವಾದ ಕ್ರಮಗಳನ್ನು ರೈತರು ಅಳವಡಿಸಬೇಕು ಎಂದಿದ್ದಾರೆ. ಹಿಂದೆ ಹಸಿರು ಕ್ರಾಂತಿ ಎಂದು ಕರೆಯಲಾಗಿತ್ತು, ಈಗ ಹವಾಮಾನದ ಕಾರಣದಿಂದ ಕೃಷಿ ರೂಪಾಂತರದ ವೇಗ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲೂ ಹವಾಮಾನದ ವೈಪರೀತ್ಯ ಕಾಡುತ್ತಿದೆ. ಈಗಲೇ ಈ ಬಗ್ಗೆ ಗಂಭೀರವಾದ ಚಿಂತನೆಗಳು ಆರಂಭವಾಗಬೇಕಿದೆ. ಕೃಷಿಯೇ ಈ ದೇಶದ ಪ್ರಧಾನ ವ್ಯವಸ್ಥೆಯಾದ್ದರಿಂದ ಹವಾಮಾನ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಬೇಕಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್
ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |
April 16, 2025
7:52 AM
by: The Rural Mirror ಸುದ್ದಿಜಾಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |
April 16, 2025
7:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group