ವಿಶೇಷ ಗ್ರೋಬ್ಯಾಕ್‌ ತಯಾರಿಸಿದ ಕೃಷಿಕ | ಇಲ್ಲಿ ಸಸ್ಯಗಳಿಗೆ ನೀರುಣಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ..!

June 19, 2024
2:38 PM
ಕೇರಳದ ಕೊಟ್ಟಾಯಂನ ಇಯೋ ಕುರಿಯಾಕೋಸ್ ಅವರು ಸಮಗ್ರ ಹನಿ ನೀರಾವರಿ ವ್ಯವಸ್ಥೆಯೊಂದಿಗೆ ದೀರ್ಘ ಬಾಳ್ವಿಕೆ ಬರುವ ಗ್ರೋ ಬ್ಯಾಗ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.ಇದಕ್ಕೆ ಪೇಟೆಂಟ್‌ ಕೂಡಾ ಅವರು ಪಡೆದಿದ್ದಾರೆ.

ಕೇರಳದ ಕೊಟ್ಟಾಯಂ ಪ್ರದೇಶದ ಇಯೋ ಕುರಿಯಕೋಸ್‌ ಎಂಬವರು ಸಮಗ್ರ ಹನಿ ನೀರಾವರಿಯ ವಿಶೇಷ ಗ್ರೋ ಬ್ಯಾಗ್‌ ಸಿದ್ಧಪಡಿಸಿದ್ದಾರೆ. ಈ ಮೂಲಕ ಗಿಡಗಳಿಗೆ ನೀರುಣಿಸುವ ಚಿಂತೆಯಿಂದ ಹೊರಬಂದಿದ್ದಾರೆ. ಈ ವಿಶೇಷ ಗ್ರೋಬ್ಯಾಗ್‌ಗೆ ಪೇಟೆಂಟೆ ಪಡೆದಿರುವ ಅವರು ಸಾವಯವ ತರಕಾರಿ ಕೃಷಿಗೆ ಈ ಬ್ಯಾಗ್‌ ಬಳಕೆ ಮಾಡುತ್ತಿದ್ದಾರೆ.

Advertisement
Advertisement

ಸುಮಾರು 78 ವರ್ಷ ವಯಸ್ಸಿನ ಕುರಿಯಕೋಸ್‌  ಅವರು ಕಾಫಿ, ಕೋಕೋ ಮತ್ತು ರಬ್ಬರ್ ಕೃಷಿಯನ್ನು ಮಾಡುತ್ತಿದ್ದಾರೆ. ಕೃಷಿ ಅವರ ಆಸಕ್ತಿಯ ವಿಷಯ. ತಮ್ಮ ಪಿತ್ರಾರ್ಜಿತವಾಗಿ ಬಂದಿರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕುರಿಯಕೋಸ್‌ ಅವರು ತನ್ನ ತಂದೆ-ಅಜ್ಜನೊಂದಿಗೆ ಕೃಷಿಯಲ್ಲಿ ಕಳೆದಿದ್ದರು. ತರಕಾರಿ ಕೃಷಿ ಕೂಡಾ ಅವರ ಆಸಕ್ತಿಯ ಬೆಳೆಯಾಗಿತ್ತು. ಅದಕ್ಕಾಗಿ ಸಮಗ್ರ ಹನಿ ನೀರಾವರಿ ವ್ಯವಸ್ಥೆಯೊಂದಿಗೆ ವಿಶೇಷ ಗ್ರೋಬ್ಯಾಕ್‌ ರಚಿಸಿ ಅದಕ್ಕೆ ಪೇಟೆಂಟ್ ಪಡೆದಿದ್ದಾರೆ. ಹೆಚ್ಚಿನ ಬಾಳಿಕೆ ಬರುವ ಗ್ರೋ ಬ್ಯಾಗ್ ಇದಾಗಿದ್ದು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಇದು ಮಣ್ಣಿನ ಗುಣಮಟ್ಟದಲ್ಲಿನ ಬದಲಾವಣೆಗಳು ಮತ್ತು ಕೀಟಗಳನ್ನು ನಿಯಂತ್ರಣ ಮಾಡಬಲ್ಲುದು.‌

Advertisement

ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಚೀಲಗಳಿಗೆ ಸಸ್ಯಗಳನ್ನು ಪರಿಣಾಮಕಾರಿಯಾಗಿ ಪೋಷಿಸಲು ಕೇವಲ ಎರಡು ಲೀಟರ್ ನೀರು ಬೇಕಾಗುತ್ತದೆ.ನೀರಿನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಬೆಳೆಯುವ ಗಿಡದ ಆರೋಗ್ಯ, ಆಯಸ್ಸು ಹೆಚ್ಚಿಸುವ ಮೂಲಕ, ಈ ಚೀಲಗಳು ತರಕಾರಿ ಕೃಷಿಯಲ್ಲಿನ ಕೆಲವು ನಿರಂತರ ಸವಾಲುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

Advertisement

ಗ್ರೋ ಬ್ಯಾಗ್‌ಗಳನ್ನು ಸಾಮಾನ್ಯವಾಗಿ ಒಳಾಂಗಣ ಕೃಷಿಗಾಗಿ ಬಳಸಲಾಗುತ್ತಿರುವಾಗ, ಇವುಗಳನ್ನು ಹೊರಾಂಗಣದಲ್ಲಿ ಇರಿಸಲು ಪ್ರಯತ್ನಿಸಲು ನಿರ್ಧರಿಸಿದರು. ಸಾಂಪ್ರದಾಯಿಕ ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳೊಂದಿಗಿನ ಅವರ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿಲ್ಲ. ಅದೇ ಸಮಯದಲ್ಲಿ, ಪ್ಲಾಸ್ಟಿಕ್ ಬಾಟಲಿಗಳ ವಿಲೇವಾರಿ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.

ಆರಂಭದಲ್ಲಿ ಸಾಂಪ್ರದಾಯಿಕ ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳನ್ನು ಮಾರ್ಪಡಿಸುವ ಮೂಲಕ ಪ್ರಯೋಗ  ಪ್ರಾರಂಭಿಸಿದರು, ನೀರುಣಿಸಲು ರಂಧ್ರಗಳನ್ನು ಮಾಡಿದರು. ಈ ಚೀಲಗಳಲ್ಲಿ ನೀರು ಹೆಚ್ಚು ಕಾಲ ಉಳಿಯಲಿಲ್ಲ. ತಿಂಗಳ ಪ್ರಯೋಗಗಳ ನಂತರ, ಅವರು ತಮ್ಮ ಪ್ರಯೋಗವನ್ನು ಸಿಲ್ಪಾಲಿನ್‌ ನಲ್ಲಿ ಮಾಡಿದರು.  ಅದು ಯಶಸ್ವಿಯಾಯಿತು.

Advertisement

ಆಯತಾಕಾರ ಮಾಡುವ ಈ ಸಿಲ್ಪಾಲಿನ್‌ ಗ್ರೋಬ್ಯಾಗ್‌ಗೆ ನೀರುಣಿಸಲು ಪ್ಲಾಸ್ಟಿಕ್ ಬಾಟಲಿಗಳಿಗೆ ಮೇಲ್ಭಾಗದಲ್ಲಿ ಎರಡು ದೊಡ್ಡ ರಂಧ್ರಗಳನ್ನು ಮಾಡಿ ಇರಿಸಲಾಗುತ್ತದೆ. ಹೆಚ್ಚುವರಿ ನೀರು ಹೋಗಲು ಕೂಡಾ ವ್ಯವಸ್ಥೆ ಮಾಡಲಾಗಿದೆ. ಗಿಡಗಳು ನೀರು ಅಗತ್ಯವಿದ್ದಷ್ಟು ಪಡೆಯುತ್ತದೆ. ಇದು ನೀರಿನ ವ್ಯಯವನ್ನು ಕಡಿಮೆ ಮಾಡುತ್ತದೆ ಮತ್ತು ಸಸ್ಯದ ಬೇರುಗಳಿಗೆ ತೇವಾಂಶದ ಸ್ಥಿರತೆಯನ್ನು ಪೂರೈಕೆ ಮಾಡುತ್ತದೆ. ಸಾಮಾನ್ಯವಾಗಿ ಒಂದು ಲೀಟರ್ ಬಾಟಲಿ ನೀರು ಕನಿಷ್ಠ ಒಂದು ವಾರದವರೆಗೆ ಸಾಕಾಗುತ್ತದೆ ಎಂದು ಹೇಳುತ್ತಾರೆ ಕುರಿಯಕೋಸ್.

Source : Better India

Advertisement

Eyo Kuriakos,  from Kottayam, Kerala, has revolutionized gardening with his innovative long-lasting grow bag. His dedication and passion for sustainable gardening have led him to create a product that not only benefits the environment but also makes gardening easier and more accessible for everyone. Eyo’s determination to make a positive impact on the world is truly inspirational, and his grow bag is a testament to his commitment to creating a greener future. With his invention, Eyo is not only changing the way we garden but also setting an example for others to follow in his footsteps.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12-07-2024 | ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆ ನಿರೀಕ್ಷೆ | ರಾಜ್ಯದ ವಿವಿದೆಡೆ ಸಾಮಾನ್ಯ ಮಳೆ |
July 12, 2024
2:21 PM
by: ಸಾಯಿಶೇಖರ್ ಕರಿಕಳ
ತಮಿಳುನಾಡಿನಿಂದ ಮತ್ತೆ ‘ಕಾವೇರಿ’ ಕಾಟ : ನಿತ್ಯ 1 ಟಿಎಂಸಿ ನೀರು ಹರಿಸಿ : ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ
July 12, 2024
10:57 AM
by: The Rural Mirror ಸುದ್ದಿಜಾಲ
ಮಳೆಯ ನೀರನ್ನು ವಿಭಜಿಸುವ ಕರ್ನಾಟಕದ ಅದ್ಬುತ ಸ್ಥಳ
July 12, 2024
10:33 AM
by: The Rural Mirror ಸುದ್ದಿಜಾಲ
ಕಣ್ಮರೆಯಾದ ಅಚ್ಚ ಕನ್ನಡದ ಮಾತಿನ ಮಲ್ಲಿ ಅಪರ್ಣಾ | ಕ್ಯಾನ್ಸರ್‌ಗೆ ಬಲಿಯಾದ ಅಪರ್ಣಾ |
July 12, 2024
9:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror