ದನಗಳಲ್ಲಿ(Cow) ಕೃತಕ ಗರ್ಭಧಾರಣೆ(Artificial Insemination) ಮತ್ತು ಹೋರಿಗಳನ್ನ(Bull) ಹಾರಿಸಿ ಗರ್ಭಧಾರಣೆ(pregnancy)ಆಗುವುದು, ಇದೆರಡರಲ್ಲೂ ಗರ್ಭ ಧರಿಸುವ ವಿಧಾನ ಒಂದೇ ರೀತಿ ಇರ್ತದೆ. ಎರಡರಲ್ಲೂ ವೀರ್ಯವನ್ನು(Sperm) ಸರ್ವಿಕ್ಸ್(Cervix) ಹತ್ತಿರ ಚಲ್ಲುವ ಕೆಲಸ ಅಷ್ಟೆ. ಮುಂದೆ ಗರ್ಭಕೋಶದಲ್ಲಿ ಭ್ರೂಣ(embryo) ಹೇಗೆ ಉತ್ಪತ್ತಿ ಆಗುತ್ತದೆ, ಹೇಗೆ ಬೆಳವಣಿಗೆ ಆಗುತ್ತದೆ ಎಂಬುದು ಸಾಮಾನ್ಯ ಹೈಸ್ಕೂಲ್ ಲೇವಲ್ ನಾಲೇಜ್ ಇರುವವರಿಗೆ ಎಲ್ಲರಿಗೂ ಗೊತ್ತಿರ್ತದೆ. ಅಪರೂಪಕ್ಕೆ ಒಂದು ಭ್ರೂಣ ಬೆಳವಣಿಗೆ ಅಸಹಜ (Abnormal) ಆಗಿರ್ತದೆ. ಹಿಂದೆಯೂ ಇರುತ್ತಿತ್ತು. ಉದಾಹರಣೆಗೆ ಬೆನ್ನಿನ ಮೇಲೆ ನಿಷ್ಪ್ರಯೋಜಕವಾಗಿ 2 ಚಿಕ್ಕ ಕಾಲುಗಳು ಇರುವ ದನ ಇತ್ಯಾದಿಯನ್ನು ಕೆಲವರು ನೋಡಿರಬಹುದು. ಸ್ಪಷ್ಟ ಉದಾಹರಣೆ ಹೇಳುವುದಾದರೆ ಮನುಷ್ಯರಲ್ಲಿಯೂ ಎಷ್ಟೊ ಸಯಾಮಿ ಮಗು(Siamese child) ಜನಿಸಿದ್ದು ಇದೆ.
ಅಲ್ಲಿ ಮನುಷ್ಯರಲ್ಲಿ ಯಾರೂ ಕೃತಕ ಗರ್ಭಧಾರಣೆ ಮಾಡಿದ್ದಲ್ಲ. ಆದ್ದರಿಂದ ಸೆಕ್ಸ್ ಕ್ರಿಯೆಗಳು ಭ್ರೂಣದ ಬೆಳವಣಿಗೆಯನ್ನ ಅಥವಾ ಲಿಂಗವನ್ನು ಪ್ರತಿನಿಧಿಸುವದಿಲ್ಲಾ ಅನ್ನುವುದು ಸ್ಪಷ್ಟ. ಪಶುಗಳಲ್ಲಿ ಕೃತಕ ಗರ್ಭಧಾರಣೆ ಮಾಡಿಸುವುದು…. ಅಂದರೆ ಇನ್ಸೆಮಿನೆಷನ್ ಮಾಡುವುದು ಒಂದು ಕೃತಕ ಸೆಕ್ಸ್ ಕ್ರಿಯೆ ಅಷ್ಟೆ.
ಹೋರಿಯನ್ನೇ ಹಾರಿಸುವುದಾದರೂ ಕೂಡ ಹೋರಿ ಯಾವ ತಳಿ ಆಕಳು ಅಂತ ವಿಚಾರಿಸಿ ನಿಮಗೆ ಒಪ್ಪಿಗೆಯೋ ಅಂತ ಕೇಳಿ ಹಾರುವುದಿಲ್ಲ. ಬೆದೆಗೆ ಬಂದ ಆಕಳು ಸಿಕ್ಕಿದರೆ ನೆಗಿತದೆ. ಗೀರ್ ಹೋರಿಬುಡ್ಡ ಕಾಂಕ್ರಿಜ್ ಆಕಳಿಗೂ ನೆಗಿತದೆ, ಕ್ರಾಸ್ ಬ್ರೀಡ್ ಹುಟ್ತದೆ. ಈಗ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇರುವುದರಿಂದ ಯಾವುದೋ ಪ್ರದೇಶದ ದನ ಇನ್ಯಾವುದೋ ಪ್ರದೇಶದ ಪಶುಪಾಲಕನ ಹಟ್ಟಿ ಸೇರಿದೆ.
ಇನ್ಸೆಮಿನೇಶನ್ ವಿಧಾನ ಪಶುಪಾಲಕರಿಗೆ ಒಂದು ವರದಾನ. ಮಲ್ನಾಡ್ ಗಿಡ್ಡ, ಪುಗಂನೂರು, ಗೀರ್, ಶಾಹಿವಾಲ್, ಎಚ್ ಎಫ್, ಜರ್ಸಿ ಇತ್ಯಾದಿ ಯಾವುದು ಬೇಕೋ ಆ ತಳಿಯ ಅರೋಗ್ಯವಂತ ಹೊರಿಯ ಸೆಮನ್ ಲಭ್ಯ ಇರ್ತದೆ. ಆಯ್ಕೆ ಆಕಳ ಮಾಲೀಕನದ್ದು. ಸೆಮನ್ ಸಂಗ್ರಹ ಮಾಡಬೇಕಿದ್ದರೆ ಅದಕ್ಕೆ ಯಾವುದಾದರೂ ರೋಗ ಇದೆಯೇ ಅನ್ನುವುದನ್ನೂ ಪರಿಶೀಲಿಸಲಾಗುತ್ತದೆ. ರೋಗಗಳು ಮುಂದಿನ ಪೀಳಿಗೆಗೆ ಮುಂದುವರೆಯಬಾರದು ಅನ್ನುವ ಕಾರಾಣಕ್ಕೆ. ಅಂದರೆ ಇಲ್ಲಿ ಗಂಡಿನಿಂದ ಮುಂದಿನ ಪೀಳಿಗೆಗೆ ರೋಗ ಮುಂದುವರೆಯುವದಿಲ್ಲ. ಆದ್ದರಿಂದ ಜನೆಟಿಕಲಿ ಮುಂದುವರೆಯುವ ರೋಗ ಪ್ರಮಾನವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ.
ಇನ್ನು ಇನ್ಸೆಮಿನೇಶನ್ ಮಾಡುವಾಗ ಗರ್ಭ ಕೊರಳಿಗೆ ಹಾನಿ ಆಗುವುದು ಇತ್ಯಾದಿಗಳು ಪರಿಣಿತರಲ್ಲದ, ವೈದ್ಯರಲ್ಲದ, ಆ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದೇ ಇರುವುವರನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಭವಿಸುತ್ತದೆ. ಫೇಕ್ ವೈದ್ಯ ಮಾಡಿದ ತಪ್ಪಿಗೆ ಇನ್ಸೆಮಿನೆಷನ್ ಪದ್ದತಿಯನ್ನೆ ದೂರುವುದು ಪರಮ ಮೂರ್ಖತನ. ಇನ್ನು ಇನ್ಸೆಮಿನಿಷನ್ ಮಾಡಿಯೂ ಗರ್ಭಧರಿಸಲಿಲ್ಲ, ಡಾಕ್ಟರ್ ಕೂಡಾ ಹೋರಿಯನ್ನೇ ಬಿಡಿ ಅಂತ ಹೇಳಿದ್ದಾರೆ ಅನ್ನುವವರೂ ಇದ್ದಾರೆ. ಬೆದೆಗೆ ಬಂದಾಗ ಸರಿಯಾದ ಸಮಯದಲ್ಲಿ ಡಾಕ್ಟರ್ ಗಳಿಗೆ ಬರಲು ಕಷ್ಟವಾಗುತ್ತದೆ ಹಾಗೂ ಬೇರೆ ಬೇರೆ ಊರುಗಳಿಗೆ ಬೇರೆ ಬೇರೆ ಟ್ರೀಟ್ಮೆಂಟ್ ಗಳಿಗೆ ಹೋಗುವುದರ ಜೊತೆಗೆ ಆಫೀಷಿಯಲ್ ಕೆಲಸಗಳೂ ಸಾಕಷ್ಟು ಇರುತ್ತವೆ. ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಡಾಕ್ಟರ್ ಗಳೂ ಪೋಸ್ಟಿಂಗ್ ಇಲ್ಲದೇ ಇರುವುದರಿಂದ ಇನ್ಸೆಮಿನೆಷನ್ ಮಾಡುವ ಸಲುವಾಗಿ ಸರಿಯಾದ ಸಮಯಕ್ಕೆ ವಿಸಿಟ್ ಮಾಡುವುದು ಕಷ್ಟವಾಗುವದರಿಂದ ಪಶುಪಾಲಕರಿಗೆ ಡಾಕ್ಟರ್ ಮೇಲೆ ಬೇಸರ ಆಗದೇ ಇರಲು…. ಕೆಲವು ಡಾಕ್ಟರ್ ಗಳ ಜಾಣ್ಮೆಯ ಮಾತುಗಳು ಹೊರತು ಹೋರಿ ಹಾರಿದರೆ ಮಾತ್ರ ಗರ್ಭ ದರಿಸ್ತದೆ ಇನ್ಸೆಮಿನೆಷನ್ ಮಾಡಿಸದರೆ ಗರ್ಭ ದಾರಿಸುವದಿಲ್ಲ ಅನ್ನುವುದು ಶುದ್ಧ ಸುಳ್ಳು.
ಅವಿದ್ಯಾವಂತ ಅವಿವೇಕಿ ಡಾಕ್ಟರ್ ಗಳೇ ಹೀಗೇ ಹೇಳಿದ್ದಾರೆ ಅಂತ ಖುಷಿಯಿಂದ ಹಲುಬುತ್ತಾ ತಿರುಗುತ್ತಿರುತ್ತಾನೆ. ಎಲ್ಲಿಗೆ ಡಾಕ್ಟರ್ ಕೂಡಾ ಸೇಫ್ ಜೊತೆಗೆ ಬ್ರೈನ್ ಲೆಸ್ ಮನುಷ್ಯನಂತೆ ಸ್ವ ವಿಚಾರ ರಹಿತನಾದ ಅವಿದ್ಯಾವಂತ ಅವಿವೇಕಿಗೂ ಕೂಡ ತನ್ನದೇ ಶ್ರೇಷ್ಠ ಅನ್ನುವ ಸಮಾಧಾನ ಮತ್ತು ಖುಷಿ. ಅಲ್ಲಿಗೆ ಈ ದಡ್ಡ ಶಿಖಾಮಾಣಿ ಜನರ ನಡುವೆ ಹೆಣಗಾಡುವ ಬುದ್ದಿವಂತರಾದ ಡಾಕ್ಟರ್ ಗಳು ಎಣಿಸಿದಂತೆ ಸ್ವಕಾರ್ಯ ಸ್ವಾಮಿಕಾರ್ಯ ಎರಡೂ ಆದಾಗೆ ಆಯ್ತು.!!
ಮನುಷ್ಯರಲ್ಲಿ ಯಾವುದೇ ಕೃತಕ ಗರ್ಭಧಾರಣೆ ಮಾಡದೇ ಗಂಡ ಹೆಂಡತಿ ಬೆರೆತು ಗರ್ಭಧರಿಸಿದರೂ ಕೂಡ ಕೆಲವು ಕೇಸ್ ಗಳಲ್ಲಿ ಭ್ರೂಣ ಅಸಹಜ ಇರ್ತದೆ. ಸ್ಕಾನಿಂಗ್ ಮೂಲಕ ಪರೀಕ್ಷೆಸಿದಾಗ ಗೊತ್ತಾಗ್ತದೆ. ಅಂತವುಗಳನ್ನು ಅಬಾರ್ಷನ್ ಮಾಡಿಸಲಾಗುತ್ತದೆ. ಪಶುಗಳಿಗೆ ಸ್ಕಾನಿಂಗ್ ಇತ್ಯಾದಿ ಮುಂದುವರೆದ ಚಿಕಿತ್ಸೆ ಲಭ್ಯವಿಲ್ಲ, ಮುಂದೆ ಲಭ್ಯವಾದರೂ ಸ್ಕಾoನಿಗ್ ಇತ್ಯಾದಿ ಮಾಡಿಸುವಷ್ಟು ಆರ್ಥಿಕ ಶಕ್ತಿ ಯಾವ ಪಶುಪಾಲಕಾರಿಗೂ ಇರುವುದಿಲ್ಲ. ಹಾಗಾಗಿ ವಿಶಿಷ್ಟ ಕರುಗಳು ಹುಟ್ಟುತ್ತವೆ. ಹಿಂದೆಯೂ ಹುಟ್ಟುತ್ತಿತ್ತು. ಈಗಿನ ಹಾಗೆ ಸೋಷಿಯಲ್ ಮೀಡಿಯಾ ಇಲ್ಲದೇ ಇರುವುದರಿಂದ ಅದೂ ಒಂದು ವಿಶೇಷ ವಾರ್ತೆ ಎಂಬಂತೆ ಎಲ್ಲಕಡೆ ಸುದ್ದಿ ಹಬ್ಬುತ್ತಿರಲಿಲ್ಲ ಅಷ್ಟೆ.
ಕೃಷಿಕ – 94821 88458