ಹವಾಮಾನ | ಸಮುದ್ರದ ಕೆಳಭಾಗದಲ್ಲಿ ಹೆಚ್ಚುತ್ತಿರುವ ಹೀಟ್‌ ವೇವ್‌ | ಅಧ್ಯಯನ ಮುಂದುವರಿಸಿದ ವಿಜ್ಞಾನಿಗಳು | ಭವಿಷ್ಯದ ಮೇಲೆ ಪರಿಣಾಮ ಏನು ? |

March 26, 2023
10:57 AM

ಸಮುದ್ರದ ತಳಭಾಗದಲ್ಲಿ ಹೀಟ್‌ವೇಟ್‌ ಹರಿದಾಡುವುದನ್ನು  ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದುವರೆಗೆ ಭೂಮಿಯ ಮೇಲ್ಮೈ ಹಾಗೂ ಸಮುದ್ರದ ಮೇಲ್ಮೈಯ ಹೀಟ್‌ ವೇವ್‌ ಬಗ್ಗೆ ಅಧ್ಯಯನ ನಡಸಲಾಗುತ್ತಿತ್ತು. ಇದೀಗ ಸಮುದ್ರದ ತಳಭಾಗದಲ್ಲಿಯೂ ಈ ಅಲೆಗಳು ಹೆಚ್ಚುತ್ತಿರುವುದನ್ನು  ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.  ಈ  ಅಲೆಗಳು ಜಗತ್ತಿನಾದ್ಯಂತ ಸಾಗರ ಪರಿಸರ ವ್ಯವಸ್ಥೆಗಳ  ಮೇಲೆ ಪ್ರಭಾವ ಬೀರುತ್ತಿವೆ. ಇದರ ಸಾಧಕ-ಬಾಧಕಗಳ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದಾರೆ.

Advertisement
Advertisement
Advertisement

ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಸಂಶೋಧಕರ ನೇತೃತ್ವದ ತಂಡದ ಅಧ್ಯಯನವು ಹೊಸ ಸಂಗತಿಗಳನ್ನು  ತಿಳಿಸಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಈ  ಅಲೆಗಳ ಗುಣಲಕ್ಷಣಗಳನ್ನು ಮತ್ತು ಸಮುದ್ರ ಹಾಗೂ ಪ್ರಪಂಚದ ಮೇಲೆ ಬೀರುವ ಪ್ರಭಾವವನ್ನು ಮತ್ತಷ್ಟು ಅಧ್ಯಯನ ಮಾಡಲು ಪ್ರಯತ್ನ ಮಾಡುತ್ತಿದೆ.

Advertisement

ಸಮುದ್ರದ ಈ ಹೀಟ್‌ ವೇವ್‌ ಹೆಚ್ಚಿನ ತೀವ್ರತೆಯನ್ನು ಹೊಂದಿವೆ ಎಂದು ಅಧ್ಯಯನ ವರದಿ ಹೇಳಿದೆ. ಸಾಗರಗಳ ಆಳದಲ್ಲಿ 0.5 ಡಿಗ್ರಿಗಳಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣತೆ ಬದಲಾಗುತ್ತದೆ. ಕಳೆದ 100 ವರ್ಷಗಳಲ್ಲಿ ಸಾಗರವು ಸುಮಾರು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಜಾಗತಿಕ ತಾಪಮಾನದಿಂದಲೇ 90% ಹೆಚ್ಚುವರಿ ಉಷ್ಣತೆ ಸಾಗರವು ಸೆಳೆದುಕೊಂಡಿದೆ  ಎಂದು ಅಧ್ಯಯನವು ಹೇಳುತ್ತದೆ. ಹೀಗಾಗಿ ಕಳೆದ ಹತ್ತು ವರ್ಷಗಳಲ್ಲಿ ಸಮುದ್ರದ ಶಾಖದ ಅಲೆಗಳ ಆವರ್ತನವು ಸುಮಾರು 50% ರಷ್ಟು ಹೆಚ್ಚಾಗಿದೆ. ಈ  ಅಲೆಗಳು ಪ್ರಪಂಚದಾದ್ಯಂತದ ಸಾಗರ ಪರಿಸರ ವ್ಯವಸ್ಥೆಗಳ ಆರೋಗ್ಯದ ಮೇಲೆ  ಪ್ರಭಾವ ಬೀರಿವೆ. ಮೀನುಗಳು ಹಾಗೂ ಸಮುದ್ರ ಜೀವಿಗಳ ಮೇಲೆಯೂ ಪರಿಣಾಮ ಬೀರಲು ಆರಂಭವಾಗಿದೆ.

ಈ ಎಲ್ಲದರ ನಡುವೆಯೇ ಈಚೆಗೆ ವಾಯುಭಾರ ಕುಸಿತ, ವಿಪರೀತ ಮಳೆ, ಹವಾಮಾನ ಬದಲಾವಣೆಗಳು ಹೆಚ್ಚಾಗಲು ಆರಂಭವಾಗಿದೆ. ಈ ಎಲ್ಲದರ ಬಗ್ಗೆಯೂ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ನಡೆಸಲು ಆರಂಭಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ-ಹಿಮಪಾತ | ಹಿಮಾಚಲ ಪ್ರದೇಶದ 104 ರಸ್ತೆಗಳಲ್ಲಿ ಸಂಚಾರ ನಿರ್ಬಂಧ |
April 21, 2024
11:06 PM
by: ದ ರೂರಲ್ ಮಿರರ್.ಕಾಂ
ಭವಿಷ್ಯದಲ್ಲಿ ಭಾರತದ ಕೃಷಿ ಬೆಳವಣಿಗೆ ಹವಾಮಾನದ ಆಧಾರದಲ್ಲಿ | ಈ ಚುನಾವಣೆಯಲ್ಲಿ ಹವಾಮಾನ ಸ್ಥಿರತೆಯ ಬಗ್ಗೆ ಪಕ್ಷಗಳ ನಿಲುವು ಏನು ?
April 21, 2024
10:27 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಬುದ್ದಿವಂತರ ಜಿಲ್ಲೆ ಯಾಕಾಯ್ತು..? ಯಾಕಾಗಿತ್ತು…? ಈಗ ಹೇಗಿದೆ..? | ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರ ಜೊತೆ ಮಾತುಕತೆ |
April 21, 2024
5:13 PM
by: ಮಿರರ್‌ ಸಮನ್ವಯ
Karnataka Weather | 21-04-2024 | ರಾಜ್ಯದ ಕೆಲವು ಕಡೆ ಮಳೆಯ ಲಕ್ಷಣ ಇದೆ |
April 21, 2024
11:56 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror