MIRROR FOCUS

ಹಣದ ಲಭ್ಯತೆ ಆಧಾರಿಸಿ ಎಲ್ಲಾ ರೈತರಿಗೆ 5 ಲಕ್ಷ ರೂಪಾಯಿ ಬಡ್ಡಿರಹಿತ ಸಾಲಸೌಲಭ್ಯ

Share

ಮುಂಬರುವ ದಿನಗಳಲ್ಲಿ ಹಣದ ಲಭ್ಯತೆ ಆಧಾರಿಸಿ ಎಲ್ಲಾ ರೈತರಿಗೆ ಮೂರು ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ, ಹೇಳಿದ್ದಾರೆ.………ಮುಂದೆ ಓದಿ……..

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಅರ್ಹ ರೈತರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ದೊರಕಿಸಲಾಗುವುದು ಎಂದು ತಿಳಿಸಿದರು.  ‌2023-24ನೇ ಸಾಲಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು 3  ಲಕ್ಷದಿಂದ 5.00 ಲಕ್ಷ ರೂಪಾಯಿಗೆ ಏರಿಸಲಾಗಿದ್ದು, ಈ ಮಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2023-24 ಸಾಲಿನಲ್ಲಿ 6,744 ರೈತರಿಗೆ 290.51 ಕೋಟಿ ರೂಪಾಯಿ ಹಾಗೂ  2024-25 ಸಾಲಿನಲ್ಲಿ ಫೆಬ್ರವರಿವರೆಗೆ 13,689 ರೈತರಿಗೆ 589.12 ಕೋಟಿ ರೂಪಾಯಿ ಮೊತ್ತದ ಸಾಲ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ 10 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಕೆಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಿದ್ದು ಇದರನ್ವಯ 1,73,449 ರೈತರು 5.00 ಲಕ್ಷಗಳವರೆಗಿನ ಸಾಲ ಪಡೆಯಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಇದರಲ್ಲಿ ಫೆಬ್ರವರಿವರೆಗೆ 13,689 ರೈತರಿಗೆ ರೂ.589.12 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ.ಕೆಲವು ಕಾರಣಗಳಿಂದ ಸಾಲ ವಿತರಣೆ ಮಾಡಲು ಸಮಸ್ಯೆಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ಮುಂದೆ ರೈತರ ಬೇಡಿಕೆ, ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕುಗಳ ಬಂಡವಾಳ ಆಧರಿಸಿ ಪ್ರತಿ ವರ್ಷ ಶೇ.10 ರಿಂದ ಶೇ.20 ರಷ್ಟು ಪ್ರಮಾಣದಲ್ಲಿ ಮಾತ್ರ ಹೆಚ್ಚುವರಿ ಸಾಲವನ್ನು ವಿತರಿಸಲು ಸಹಕಾರ ಸಂಘಗಳು ಸಶಕ್ತವಾಗಿರುತ್ತವೆ. ಇದರ ಆಧಾರದ ಮೇಲೆ 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25,000 ಕೋಟಿ ರೂಪಾಯಿ ವಿತರಿಸುವ ಗುರಿ ಹೊಂದಲಾಗಿದ್ದು, ಈ ಮಿತಿಯನ್ನು ವರ್ಷದಲ್ಲಿ ತಲುಪಲು ಕ್ರಮವಹಿಸಲಾಗಿದೆ ಎಂದು ಪ್ರತಾಪ್‌ ಸಿಂಹ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರ | ಮುಂದಿನ ವರ್ಷದ ವೇಳೆಗೆ ಆರಂಭ

ಮುಂದಿನ ವರ್ಷದ ವೇಳೆಗೆ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುವುದು…

6 minutes ago

ಭತ್ತದ ಬೆಳೆ ಸಂರಕ್ಷಣೆಗಾಗಿ ತುಂಗಭದ್ರ ಬಲದಂಡೆ ಕಾಲುವೆಯಿಂದ ನೀರು ಹರಿಸಲು ಮನವಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ, ಕುರುಗೋಡು, ಸಿರುಗುಪ್ಪ ಮತ್ತು ಬಳ್ಳಾರಿ ಗ್ರಾಮೀಣ ಭಾಗದಲ್ಲಿ ಬೆಳೆದು…

9 minutes ago

ರಾಜ್ಯದಲ್ಲಿ ನಕ್ಸಲ್ ನಿಗ್ರಹ ಘಟಕ ವಿಸರ್ಜನೆ | ನಕ್ಸಲರು ನುಸುಳುವ ಸಾಧ್ಯತೆಯ ಬಗ್ಗೆ ನಿಗಾ | ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ರಾಜ್ಯವನ್ನು ನಕ್ಸಲ್ ಮುಕ್ತವೆಂದು ಘೋಷಿಸಲಾಗಿದ್ದು, ಹೊರ ರಾಜ್ಯಗಳಿಂದ ನಕ್ಸಲರು ರಾಜ್ಯಕ್ಕೆ ನುಸುಳಬಹುದೇ ಎಂಬುದರ…

13 minutes ago

ಬೆಂಗಳೂರಿನಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಅಭಿಯಾನ

ಬೇಸಿಗೆ ಸಮಯದಲ್ಲಿ ನೀರಿನ ಸಂರಕ್ಷಣೆ ಅಭಿಯಾನದ ಜೊತೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ …

18 minutes ago

ವಿದ್ಯುತ್ ಬೆಲೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ | ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಬೆಲೆಯನ್ನು ಪ್ರತಿ ಯುನಿಟ್‌ಗೆ 36 ಪೈಸೆ…

21 minutes ago

ಸಾಂಬಾರ್ ಪದಾರ್ಥಗಳ ಮಂಡಳಿಯ ದರಪಟ್ಟಿಯಲ್ಲಿ ಶಿರಸಿ ಕಾಳುಮೆಣಸು ದರ

ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆ ದರವನ್ನು ಸಾಂಬಾರ್ ಪದಾರ್ಥಗಳ ಮಂಡಳಿಯ ದರಪಟ್ಟಿಯಲ್ಲಿ…

27 minutes ago