Advertisement
Opinion

ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ | ಧನ್ವಂತರಿ ಜಯಂತಿ | ಆರೋಗ್ಯಕ್ಕಾಗಿ ಆಯುರ್ವೇದ

Share

ಎಲ್ಲರಿಗೂ 8 ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ( International Ayurveda Day) ಹಾಗೂ ಧನ್ವಂತರಿ ಜಯಂತಿಯ(dhanvantari jayanti) ಹಾರ್ದಿಕ ಶುಭಾಶಯಗಳು. ಆಯುರ್ವೇದವು(Aayurveda) 3,000 ವರ್ಷಗಳಿಗೂ ಹಳೆಯದಾದ ಭಾರತದಲ್ಲಿ(Bharat) ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿ(Medicine and therapy)ಯಾಗಿದೆ. ನೈಸರ್ಗಿಕ ಚಿಕಿತ್ಸಾ ಪದ್ಧತಿ ಆಗಿದ್ದು ಯಾವುದೇ ಅಡ್ಡ ಪರಿಣಾಮಗಳಿಂದ ಮುಕ್ತವಾಗಿರುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್(Health)ಯ ಹಾಗೂ ದೀರ್ಘ ಆಯಸ್ಸು(Long life) ಪಡೆಯುವುದು ಹೇಗೆ ಎಂಬುದನ್ನು ಹೇಳುವುದೇ ಆಯುರ್ವೇದದ ಮೂಲ ಉದ್ದೇಶ.

ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಆಯುರ್ವೇದ ಚಿಕಿತ್ಸೆ ಪ್ರಾಚೀನ ಭಾರತದಿಂದ ಬೆಳೆದು ಬಂದಿದೆ. ಆಯುರ್ವೇದ ಎಂಬುವುದು ಜೀವ ವಿಜ್ಞಾನ ನಮ್ಮ ಹಿರಿಯರ, ಋಷಿಮುನಿಗಳ ಸಾವಿರಾರು ವರ್ಷಗಳ ಅನ್ವೇಷಣೆಯ ಫಲ ಇದಾಗಿದೆ. ಮಾನವನ ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮ ಈ ನಾಲ್ಕು ಭಾಗಗಳು ಸಮತೋಲನದಲ್ಲಿರುವುದೇ ಸ್ವಾಸ್ಥ್ಯ /ಆರೋಗ್ಯ ಎಂಬುದಾಗಿ ಹೇಳಲಾಗುತ್ತದೆ.

ಸ್ವಸ್ಥಸ್ಯ ಸ್ವಾಸ್ತ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮನo  ರೋಗಬಾರದ ಹಾಗೆ ಮುನ್ನೆಚ್ಚರಿಕೆಯಿಂದ ಇರಲು ಬೇಕಾದ ಸುಲಭೋಪಾಯಗಳನ್ನು ತಿಳಿಸುವುದು ಹಾಗೂ ರೋಗ ಬಂದಾಗ ಅದರ ಮೂಲ ಕಾರಣವನ್ನು ತಿಳಿದು ನಿವಾರಣೋಪಾಯವನ್ನು ತಿಳಿಸುವುದೇ ಆಯುರ್ವೇದದ ಮೂಲ ಉದ್ದೇಶ.

ಚತುರ್ವೇದಗಳಲ್ಲಿ ಒಂದಾದ ಅಥರ್ವ ವೇದದಲ್ಲಿ ಆಯುರ್ವೇದದ ಬಗ್ಗೆ ಅತ್ಯದ್ಭುತ ಹಾಗೂ ವಿಚಾರಪೂರಿತ ವಿವರಗಳನ್ನು ವರ್ಣಿಸಲಾಗಿದೆ. ಮೊಟ್ಟಮೊದಲಾಗಿ ಆಯುರ್ವೇದವನ್ನು ಜಗತ್ತಿಗೆ ಕೊಟ್ಟವರು ಶ್ರೀ ಧನ್ವಂತರಿ ಎಂಬ ದಿವ್ಯತೇಜಸ್ವಿ ಹಾಗೂ ದೇವಪುರುಷ ಎಂಬುದಾಗಿ ತಿಳಿದು ಬಂದಿದೆ.. ಆಯುರ್ವೇದದ ಆದಿದೇವತೆ ಎಂದು ಪೂಜಿಸಲ್ಪಡುವ ಶ್ರೀ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆ,. ದಿನಾಚರ್ಯ,ಪಥ್ಯ ಆಹಾರ ವಿಹಾರ, ಯೋಗಾಸನ, ವ್ಯಾಯಾಮ, ನೈಸರ್ಗಿಕ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿಗಳ ಬಳಕೆ ಇವುಗಳನ್ನು ವಿವರವಾಗಿ ತಿಳಿಸಲಾಗಿದೆ.

ಪ್ರಾಚೀನ ಭಾರತದಿಂದ ಬೆಳೆದು ಬಂದ ಈ ಆಯುರ್ವೇದ ವೈದ್ಯ ಪದ್ಧತಿಯನ್ನು ತಾವೆಲ್ಲರೂ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲಿ. ಭಗವಾನ್ ಶ್ರೀ ಧನ್ವಂತರಿಯು ಎಲ್ಲರಿಗೂ ಉತ್ತಮವಾದ ಆರೋಗ್ಯವನ್ನು ನೀಡಲಿ ಎಂದು ಶುಭ ಹಾರೈಸುವ…

ಬರಹ :
ಡಾ. ಜ್ಯೋತಿ ಕೆ BAMS MD, ಲಕ್ಷ್ಮೀ ಕ್ಲಿನಿಕ್ ಮಂಗಳೂರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

9 hours ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

10 hours ago

ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…

10 hours ago

ಗದಗ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭ – ರಿಯಾಯಿತಿ ದರದಲ್ಲಿ ಕಡಲೆ, ಜೋಳ, ಶೇಂಗಾ ಬೀಜ ಲಭ್ಯ

ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…

10 hours ago

ಬೆಳಗಾವಿ ರೈತರಿಗೆ ಸಾಲ ಮರುಪಾವತಿಯಲ್ಲಿ ಪರಿಹಾರ ಸಿಗುತ್ತಾ?

ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…

10 hours ago

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

1 day ago