Advertisement
ಸುದ್ದಿಗಳು

ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಚೆಸ್‌ ಪಂದ್ಯಾಟ | ಕರಾವಳಿ ಜಿಲ್ಲೆಯಲ್ಲಿ ವಿದೇಶದ ಚೆಸ್ ಆಟಗಾರರು

Share

ಮಂಗಳೂರಿನ ಶಾರದಾ ವಿದ್ಯಾಲಯದ ಆವರಣದಲ್ಲಿ ರಾವ್ಸ್‌ ಚೆಸ್‌ ಕಾರ್ನರ್‌  ಆಯೋಜಿಸಿದ ಅಂತರಾಷ್ಟ್ರೀಯ ಚೆಸ್‌ ಪಂದ್ಯಾಟವು ಅದ್ದೂರಿಯಾಗಿ ನಡೆಯುತ್ತಿದೆ. ಆರು ದಿನಗಳ ಚೆಸ್‌ ಪಂದ್ಯಾಟಕ್ಕೆ ಗುರುವಾರ ಚಾಲನೆ ದೊರೆತಿತ್ತು. ಕ್ಲಾಸಿಕಲ್‌, ರಾಪಿಡ್‌ ಹಾಗೂ ಬ್ಲಿಟ್ಸ್‌ ಮೂರು ವಿಭಾಗದಲ್ಲೂ ಪಂದ್ಯಾಟ ಆಯೋಜನೆಯಾಗಿತ್ತು. ಅಮೇರಿಕಾ, ಕೆನಡಾ, ಶ್ರೀಲಂಕಾ, ಕಿನ್ಯಾ, ಸಿಂಗಾಪುರ ಸೇರಿದಂತೆ ದೇಶದ ವಿವಿದೆಡೆಯಿಂದ ಚೆಸ್‌ ಕ್ರೀಡಾಪಟುಗಳು ಆಗಮಿಸಿದ್ದರು.  ಸುಮಾರು 459 ಚೆಸ್‌ ಆಟಗಾರರು ಭಾಗವಹಿಸಿದ್ದಾರೆ. ಕ್ಲಾಸಿಕಲ್‌ ಪಂದ್ಯಾಟವು 9 ಸುತ್ತುಗಳಿಂದ ನಡೆಯುತ್ತಿದ್ದು ಸೆ.30 ರಂದು ಕೊನೆಗೊಳ್ಳಲಿದೆ. ಈಗಾಗಲೇ ರಾಪಿಡ್‌ ಹಾಗೂ ಬ್ಲಿಟ್ಸ್‌ ಪಂದ್ಯಗಳು ಮುಗಿದಿವೆ.

ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಭೂಮರೆಡ್ಡಿ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್, ಕರ್ನಾಟಕ ಚೆಸ್‌ ಸಂಸ್ಥೆಯ ಅಧ್ಯಕ್ಷ ಟಿ.ಎನ್ ಮಧುಕರ, ದಕ್ಷಿಣ ಕನ್ನಡ ಚೆಸ್ ಸಂಸ್ಥೆಯ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಹಿಂದಿನ ಅಧ್ಯಕ್ಷ ರಮೇಶ್ ಕೋಟೆ ಅತಿಥಿಗಳಾಗಿದ್ದರು.  ರಾವ್ ಚೆಸ್ ಕಾರ್ನರ್ ಸ್ಥಾಪಕ, ಚೆಸ್‌ ಆಟಗಾರ (ಐಎಂ) ಶರಣ್ ರಾವ್, ಚೆಸ್‌ ಆಟಗಾರ್ತಿ (ಡಬ್ಯುಐಎಂ) ಇಶಾ ಶರ್ಮಾ, ಸಂಘಟಕ ಶುಭಾನಂದ ರಾವ್ ಮೊದಲಾದವರಿದ್ದರು.

ಮಂಗಳೂರಿನಲ್ಲಿ ಈಚೆಗಿನ ವರ್ಷಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿರುವ ಹಾಗೂ ವಿದೇಶಗಳಿಂದ ಮತ್ತು ದೇಶದ ವಿವಿದೆಡೆಯಿಂದ ರೇಟೆಡ್‌ ಆಟಗಾರರು ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವುದು ಮೊದಲ ಬಾರಿಯಾಗಿದೆ. ಚೆಸ್‌ ಆಟಕ್ಕೆ ಈಗಾಗಲೇ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದಲ್ಲೂ, ರಾಜ್ಯದಿಂದಲೂ ಸಹಕಾರಗಳು ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌, ರಾಜ್ಯ ಚೆಸ್‌ ಎಸೋಸಿಯೇಶನ್‌ ಈ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದೆ. ಚೆಸ್‌ ತರಬೇತು ಸಂಸ್ಥೆ ರಾವ್ಸ್‌ ಚೆಸ್‌ ಕಾರ್ನರ್‌   ಕೂಡಾ ವಿಶೇಷವಾಗಿ ಚೆಸ್‌ ತರಬೇತಿಯನ್ನು ನೀಡುವುದರ ಜೊತೆಗೆ ಕ್ರೀಡಾಲೋಕಕ್ಕೆ ಕೊಡುಗೆ ನೀಡುತ್ತಿದೆ.

ಕರಾವಳಿ ಜಿಲ್ಲೆಯಲ್ಲಿ ಸೆ.25 ರಿಂದ ವಿದೇಶದ ಹಾಗೂ ದೇಶದ ವಿವಿದೆಡೆಯ ಚೆಸ್‌ ಆಟಗಾರರು ಕೂಡಾ ಇದ್ದು ಇಲ್ಲಿನ ಸಂಸ್ಕೃತಿ, ನವರಾತ್ರಿ ಆರಾಧನಾ ಉತ್ಸವ ಇತ್ಯಾದಿಗಳು ಕೂಡಾ ಗಮನ ಸೆಳೆದಿವೆ.  ಹೀಗಾಗಿ ಕರಾವಳಿ ಜಿಲ್ಲೆಯ ಸಂಸ್ಕೃತಿಯನ್ನು ಕೂಡಾ ಚೆಸ್‌ ಆಟದ ಹಿನ್ನೆಲೆಯಲ್ಲಿ ರಾವ್ಸ್‌ ಚೆಸ್‌ ಕಾರ್ನರ್‌ ಹಾಗೂ ಶಾರದಾ ವಿದ್ಯಾಲಯ  ವಿದೇಶದ ಕೆಲವು ಮಂದಿಗೆ ಪರಿಚಯಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ಸಮಯಗಳಿಂದ ಚೆಸ್‌ ಆಟಕ್ಕೆ ವಿಶೇಷವಾದ ಆದ್ಯತೆ ನೀಡಿ ಆಗಾಗ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಆಟಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರಾವ್ಸ್‌ ಚೆಸ್‌ ಕಾರ್ನರ್‌   ಈ ಬಾರಿ ಉತ್ತಮವಾಗಿ ಪಂದ್ಯಾಟವನ್ನು ಸಂಯೋಜಿಸಿದೆ ಎಂದು ಹೇಳುತ್ತಾರೆ ರಾಜ್ಯ ಚೆಸ್‌ ಎಸೋಸಿಯೇಶನ್‌ ಉಪಾಧ್ಯಕ್ಷ ರಮೇಶ್‌ ಕೋಟೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…

3 hours ago

ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ

ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…

3 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

6 hours ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

10 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

10 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

21 hours ago