ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ವತಿಯಿಂದ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾದ ಅಧ್ಯಕ್ಷ ಸಹದೇವ್ ಬಾಲಕೃಷ್ಣ, ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಲ್ಮಾನ್ ಬಷೀರ್ ಸೇರಿದಂತೆ ಕಾಫಿ ಕ್ಷೇತ್ರದ ಪ್ರಮುಖರು ಜಾಥಾದಲ್ಲಿ ಭಾಗವಹಿಸಿದ್ದರು.
ಭಾರತೀಯ ಕಾಫಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ದೇಶದಲ್ಲಿ ಬೆಳೆಯಲಾಗುವ ಪ್ರಮುಖ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾ ಉತ್ಪಾದನೆಯ ಪೈಕಿ ಸುಮಾರು ಶೇ.70ರಷ್ಟು ಕಾಫಿಯನ್ನು ಜಪಾನ್ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಎಂದು ಸಹದೇವ್ ಬಾಲಕೃಷ್ಣ ತಿಳಿಸಿದರು.
ಕಾಫಿ ಪೇಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದರ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಸೈಕಲ್ ಫಾರ್ ಕಾಫಿ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಲ್ಮಾನ್ ಬಷೀರ್ ಹೇಳಿದರು.
ಹವ್ಯಾಸಿ ಸೈಕಲ್ ಸವಾರ ಜಾವೇದ್ ಅಖ್ತರ್ ಮಾತನಾಡಿ, ಚಿಕ್ಕಮಗಳೂರಿನ ಜನರು ಹಾಗೂ ಪ್ರವಾಸಿಗರಲ್ಲಿ ಕಾಫಿಯ ಕುರಿತು ಅರಿವು ಮೂಡಿಸುವ ಸೈಕಲ್ ಜಾಥಾದಲ್ಲಿ 30 ಕಿಲೋಮೀಟರ್ ಕ್ರಮಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾಫಿ ಉತ್ಪಾದನೆ, ಬಳಕೆ ಮತ್ತು ಭಾರತದ ಕಾಫಿಗೆ ಇರುವ ಜಾಗತಿಕ ಬೇಡಿಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂದೇಶವನ್ನು ಜಾಥಾ ಸಾರಿತು.
A cycle rally was organised in Chikkamagaluru by the Union Ministry of Commerce and Industry and coffee growers’ associations to mark International Coffee Day. The ‘Cycle for Coffee’ initiative aimed to create public awareness about coffee consumption and India’s coffee industry. Industry representatives highlighted the strong global demand for Indian coffee, with around 70% of Arabica and Robusta production reportedly exported to Japan and European countries.


