ಅಂತರಾಷ್ಟ್ರೀಯ ಪ್ರಖ್ಯಾತ ವಿಜ್ಞಾನಿಗಳು, ಕೃಷಿಕರು, ವೈದ್ಯರು ಡಾ.ಖಾದರ್ ಅವರಿಂದ ಆರೋಗ್ಯ ಮಾಹಿತಿ |

March 27, 2024
12:05 AM

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ(Health) ಬಗ್ಗೆ ಹೆಚ್ಚಿನ ಕಾಳಜಿಯನ್ನು‌ ವಹಿಸಬೇಕಾಗಿದೆ. ಜೀವನ ಶೈಲಿ( Life style), ಆಹಾರ ಪದ್ಧತಿ(food habit), ವಿಷಕಾರಿ ತರಕಾರಿ(poisoned vegetables), ಕಲಬೆರಕೆ ಆಹಾರಗಳು.. ಯಾವುದನ್ನು ತಿಂದರು ಆರೋಗದ  ಮೇಲೆ ಪರಿಣಾಮ ಬೀರೋದು ಗ್ಯಾರಂಟಿ. ಇವುಗಳಿಂದ ಹೊರಬರಲು ಖ್ಯಾತ ವಿಜ್ಞಾನಿ(scientist), ಕೃಷಿಕ(agriculturist), ವೈದ್ಯರೂ(doctor) ಆದ ಡಾ. ಖಾದರ್(Dr Khadar) ಅವರು ಒಂದಷ್ಟು ಸಲಹೆ ಹಾಗೂ ಕಷಾಯಗಳನ್ನು ಹೇಳಿದ್ದಾರೆ. ಈ ಕಷಾಯಗಳನ್ನು ಒಂದು ತಿಂಗಳು ಕುಡಿದರೆ 12 ತಿಂಗಳು ನಿಮಗೆ ಯಾವ ಕಾಯಿಲೆಯು ಬರುವುದಿಲ್ಲ..!

Advertisement
Advertisement
Advertisement

ಇದು ಸತ್ಯ… ಬನ್ನಿ, ಹಾಗಾದರೆ ಅದು ಯಾವುದರ ಕಷಾಯ ಎನ್ನುವುದನ್ನು ತಿಳಿಯೋಣ:

Advertisement

1. ಗರಿಕೆ ಹುಲ್ಲು ಕಷಾಯ.

2. ತುಳಸಿ ಎಲೆಕಷಾಯ.

Advertisement

3. ಅಮೃತ ಬಳ್ಳಿ ಕಷಾಯ.

4. ಬಿಲ್ವ ಪತ್ರೆ ಕಷಾಯ.

Advertisement

5. ಹೊಂಗೆ ಎಲೆ ಕಷಾಯ.

6. ಬೇವಿನ ಎಲೆ ಕಷಾಯ.

Advertisement

7. ಅರಳಿ ಎಲೆ ಕಷಾಯ. ಈ ಏಳು ಕಷಾಯಗಳನ್ನು ಮಾಡಲು, ಅರ್ಧ ಹಿಡಿ ಯಾವುದೇ ಎಲೆಗಳನ್ನು ತೆಗೆದುಕೊಳ್ಳಿ, ಚೆನ್ನಾಗಿ ತೊಳೆಯಿರಿ. ನಂತರ ಒಂದು ಲೋಟ (ಕಾಲು ಲೀಟರ್) ನೀರನ್ನು, ತೊಳೆದ ಎಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ (4 ನಿಮಿಷ) ನಂತರ ಉರಿ ನಿಲ್ಲಿಸಿ. ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿಕೊಂಡು, ಬಿಸಿ ಇರುವಾಗ ಸ್ವಲ್ಪ ಸ್ವಲ್ಪ ವಾಗಿ ಕುಡಿಯಿರಿ. ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿದರೆ ಉತ್ತಮ. ಚಹಾ, ಕಾಫಿ, ಹಾಲು ಕುಡಿಯುವುದನ್ನು ಬಿಟ್ಟುಬಿಡಲು ಪ್ರಯತ್ನಪಡಿ. ಒಂದೊಂದು ಕಷಾಯವನ್ನು ನಾಲ್ಕು ದಿನದಂತೆ ಒಂದು ತಿಂಗಳು ಕುಡಿಯಿರಿ. (ಪ್ರತಿದಿನ ಕುಡಿದರೆ ಒಳ್ಳೆಯದು)

ಇದರ ಜೊತೆಗೆ ಸಿರಿಧಾನ್ಯಗಳನ್ನು ತಿನ್ನಿರಿ. ಅವುಗಳೆಂದರೆ, “ಸಾಮೆ / ಸಾವೆ, ನವಣೆ, ಕೊರಲೆ, ಹಾರಕ / ಆರ್ಕ, ಉದಲು, ರಾಗಿ, ಜೋಳ, ಕಮ್ಮು / ಸಜ್ಜೆ”

Advertisement

ಈ ಸಿರಿಧಾನ್ಯಗಳಲ್ಲಿ ನೀವು ಅಕ್ಕಿಯಲ್ಲಿ ಏನೆಲ್ಲ ತಿಂಡಿ ಮಾಡುತ್ತಿರೋ ಅವೆಲ್ಲ ತಿಂಡಿಗಳನ್ನು ಮಾಡಬಹುದು. ಇಂತಹ ಆರೋಗ್ಯಕರವಾದ ತಿಂಡಿಗಳನ್ನು ನಿಮ್ಮ ಮನೆಯವರಿಗೆ ಮಾಡಿ ಕೊಡಿ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿ.

ಇದಕ್ಕಿಂತ ಮುಖ್ಯವಾಗಿ ನೀವು ಬಿಡಬೇಕಾಗಿರುವುದು:

Advertisement

1. ಮೊಟ್ಟೆ ಮತ್ತು ದಾಲ್ಡ ತುಪ್ಪ

2. ಗೋದಿ / ಮೈದಾ ಹಿಟ್ಟು

Advertisement

3. ಹಾಲು

4. ಸಕ್ಕರೆ

Advertisement

5. ರಿಫೈನ್ಡ್ ಎಣ್ಣೆ

6. ಪಾಲಿಷ್ ಅಕ್ಕಿ

Advertisement

7. ಬ್ಲೀಚ್ ಮಾಡಿದ ಉಪ್ಪು

  • ಗಾಣದಿಂದ ತೆಗೆದ ಎಣ್ಣೆಯನ್ನು ಬಳಸಿ. (ಕಡಲೆಕಾಯಿ, ಕುಸುಬೆ, ಎಳ್ಳು, ಹುಚ್ಚೆಳ್ಳು ಮುಂತಾದ ಸ್ಥಳೀಯವಾಗಿ ದೊರೆಯುವ ಕಾಳುಗಳಿಂದ ಎಣ್ಣೆ ಮಾಡಿಸಿಕೊಳ್ಳಿ).
  • ಹಾಲಿನ ಬದಲಿಗೆ ಅದರ ಉತ್ಪನ್ನಗಳನ್ನು ಬಳಸಿ. ಅಂದರೆ, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಬಳಸಿ.
  • ಸಕ್ಕರೆ ಬದಲು ಸಾವಯವ ಬೆಲ್ಲ / ತಾಟಿ ಬೆಲ್ಲ ಬಳಸಿ.
  • ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಬೇಡವೇ ಬೇಡ.
  • ಸಾಧ್ಯವಾದರೆ, ಅಡುಗೆ ಮಾಡೋದಕ್ಕೆ ಮಣ್ಣಿನ ಮಡಿಕೆ ಬಳಸಿ. ಇಲ್ಲ, ಸ್ಟೀಲ್ ಪಾತ್ರೆ ಬಳಸಿ. ಅಲ್ಯೂಮಿನಿಯಂ ಪಾತ್ರೆ ಬಳಕೆ ಬೇಡವೇ ಬೇಡ. ಅಲ್ಯೂಮಿನಿಯಂ ಬಳಸುವುದರಿಂದ ತುಂಬಾ ಕಾಯಿಲೆಗಳು ಬರುತ್ತವೆ.
  • ಸ್ಟಿಲ್ ಪಾತ್ರೆಯಲ್ಲಿಯೇ ನೀರನ್ನು ತುಂಬಿ ಇಟ್ಟುಕೊಂಡು ಕುಡಿಯಿರಿ. ಅದರಲ್ಲಿ, ಒಂದು ತಾಮ್ರದ ರೇಖನ್ನು / ಪಟ್ಟಿಯನ್ನು ಹಾಕಿ.
  • ಪಾತ್ರೆ ತೊಳೆಯುವ ಸಾಬೂನು / ಪೌಡರ್ ಬಳಸಬೇಡಿ. ಬದಲಿಗೆ ಹುಣಸೆಹಣ್ಣು / ನಿಂಬೆಹಣ್ಣು ಬಳಸಿ.
  • ಹಲ್ಲು ಉಜ್ಜಲು ಪೇಸ್ಟ್, ಪ್ಲಾಸ್ಟಿಕ್ ಬ್ರಷ್ ಬಳಕೆ ಬೇಡ. ಬದಲಿಗೆ ನಮ್ಮ ಹಿಂದಿನವರ ವಿಧಾನ ಅನುಸರಿಸಿ. ಅಂದರೆ, ಇದ್ದಿಲು, ಉಪ್ಪು, ಬೇವಿನ ಕಡ್ಡಿ ಬಳಸಿ. ಇವೆಲ್ಲದರ ಜೊತೆಗೆ ಬೆಳಿಗ್ಗೆ ಒಂದು ಗಂಟೆ & ಸಂಜೆ ಒಂದು ಗಂಟೆ ನಡೆಗೆ / ವಾಕಿಂಗ್ ಮಾಡಿ. (ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬಿಸಿಲಿಗೆ ಮೈಯೊಡ್ಡಿ) ಸಿರಿಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಬಳಸಿ, ಜೊತೆಗೆ ಕಷಾಯವನ್ನು ಕುಡಿಯಲು ಮರಿಬೇಡಿ. ಹೀಗೆ ಮಾಡುವುದರಿಂದ ಖಂಡಿತ ನಿಮಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ. ಬಂದರು ಅದನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ದೇಹಕ್ಕೆ ಇರುತ್ತದೆ.

ಇದನ್ನು 25 ವರ್ಷದಿಂದ ಸಂಶೋಧನೆ ಮಾಡಿರುವ, ಕೃಷಿಕರು, ವಿಜ್ಞಾನಿಗಳು ಮತ್ತು ಸ್ವಯಂ ಹೋಮಿಯೋಪತಿ ವೈದ್ಯರು ಆದ  ಖಾದರ್ ಅವರು ಹೇಳುತ್ತಲೇ ಬಂದಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror