ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ(Health) ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಜೀವನ ಶೈಲಿ( Life style), ಆಹಾರ ಪದ್ಧತಿ(food habit), ವಿಷಕಾರಿ ತರಕಾರಿ(poisoned vegetables), ಕಲಬೆರಕೆ ಆಹಾರಗಳು.. ಯಾವುದನ್ನು ತಿಂದರು ಆರೋಗದ ಮೇಲೆ ಪರಿಣಾಮ ಬೀರೋದು ಗ್ಯಾರಂಟಿ. ಇವುಗಳಿಂದ ಹೊರಬರಲು ಖ್ಯಾತ ವಿಜ್ಞಾನಿ(scientist), ಕೃಷಿಕ(agriculturist), ವೈದ್ಯರೂ(doctor) ಆದ ಡಾ. ಖಾದರ್(Dr Khadar) ಅವರು ಒಂದಷ್ಟು ಸಲಹೆ ಹಾಗೂ ಕಷಾಯಗಳನ್ನು ಹೇಳಿದ್ದಾರೆ. ಈ ಕಷಾಯಗಳನ್ನು ಒಂದು ತಿಂಗಳು ಕುಡಿದರೆ 12 ತಿಂಗಳು ನಿಮಗೆ ಯಾವ ಕಾಯಿಲೆಯು ಬರುವುದಿಲ್ಲ..!
ಇದು ಸತ್ಯ… ಬನ್ನಿ, ಹಾಗಾದರೆ ಅದು ಯಾವುದರ ಕಷಾಯ ಎನ್ನುವುದನ್ನು ತಿಳಿಯೋಣ:
1. ಗರಿಕೆ ಹುಲ್ಲು ಕಷಾಯ.
2. ತುಳಸಿ ಎಲೆಕಷಾಯ.
3. ಅಮೃತ ಬಳ್ಳಿ ಕಷಾಯ.
4. ಬಿಲ್ವ ಪತ್ರೆ ಕಷಾಯ.
5. ಹೊಂಗೆ ಎಲೆ ಕಷಾಯ.
6. ಬೇವಿನ ಎಲೆ ಕಷಾಯ.
7. ಅರಳಿ ಎಲೆ ಕಷಾಯ. ಈ ಏಳು ಕಷಾಯಗಳನ್ನು ಮಾಡಲು, ಅರ್ಧ ಹಿಡಿ ಯಾವುದೇ ಎಲೆಗಳನ್ನು ತೆಗೆದುಕೊಳ್ಳಿ, ಚೆನ್ನಾಗಿ ತೊಳೆಯಿರಿ. ನಂತರ ಒಂದು ಲೋಟ (ಕಾಲು ಲೀಟರ್) ನೀರನ್ನು, ತೊಳೆದ ಎಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ (4 ನಿಮಿಷ) ನಂತರ ಉರಿ ನಿಲ್ಲಿಸಿ. ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿಕೊಂಡು, ಬಿಸಿ ಇರುವಾಗ ಸ್ವಲ್ಪ ಸ್ವಲ್ಪ ವಾಗಿ ಕುಡಿಯಿರಿ. ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿದರೆ ಉತ್ತಮ. ಚಹಾ, ಕಾಫಿ, ಹಾಲು ಕುಡಿಯುವುದನ್ನು ಬಿಟ್ಟುಬಿಡಲು ಪ್ರಯತ್ನಪಡಿ. ಒಂದೊಂದು ಕಷಾಯವನ್ನು ನಾಲ್ಕು ದಿನದಂತೆ ಒಂದು ತಿಂಗಳು ಕುಡಿಯಿರಿ. (ಪ್ರತಿದಿನ ಕುಡಿದರೆ ಒಳ್ಳೆಯದು)
ಇದರ ಜೊತೆಗೆ ಸಿರಿಧಾನ್ಯಗಳನ್ನು ತಿನ್ನಿರಿ. ಅವುಗಳೆಂದರೆ, “ಸಾಮೆ / ಸಾವೆ, ನವಣೆ, ಕೊರಲೆ, ಹಾರಕ / ಆರ್ಕ, ಉದಲು, ರಾಗಿ, ಜೋಳ, ಕಮ್ಮು / ಸಜ್ಜೆ”
ಈ ಸಿರಿಧಾನ್ಯಗಳಲ್ಲಿ ನೀವು ಅಕ್ಕಿಯಲ್ಲಿ ಏನೆಲ್ಲ ತಿಂಡಿ ಮಾಡುತ್ತಿರೋ ಅವೆಲ್ಲ ತಿಂಡಿಗಳನ್ನು ಮಾಡಬಹುದು. ಇಂತಹ ಆರೋಗ್ಯಕರವಾದ ತಿಂಡಿಗಳನ್ನು ನಿಮ್ಮ ಮನೆಯವರಿಗೆ ಮಾಡಿ ಕೊಡಿ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿ.
ಇದಕ್ಕಿಂತ ಮುಖ್ಯವಾಗಿ ನೀವು ಬಿಡಬೇಕಾಗಿರುವುದು:
1. ಮೊಟ್ಟೆ ಮತ್ತು ದಾಲ್ಡ ತುಪ್ಪ
2. ಗೋದಿ / ಮೈದಾ ಹಿಟ್ಟು
3. ಹಾಲು
4. ಸಕ್ಕರೆ
5. ರಿಫೈನ್ಡ್ ಎಣ್ಣೆ
6. ಪಾಲಿಷ್ ಅಕ್ಕಿ
7. ಬ್ಲೀಚ್ ಮಾಡಿದ ಉಪ್ಪು
ಇದನ್ನು 25 ವರ್ಷದಿಂದ ಸಂಶೋಧನೆ ಮಾಡಿರುವ, ಕೃಷಿಕರು, ವಿಜ್ಞಾನಿಗಳು ಮತ್ತು ಸ್ವಯಂ ಹೋಮಿಯೋಪತಿ ವೈದ್ಯರು ಆದ ಖಾದರ್ ಅವರು ಹೇಳುತ್ತಲೇ ಬಂದಿದ್ದಾರೆ.
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…