ಕೃಷಿಗೆ, ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋ ಸಂರಕ್ಷಣೆಯ ಕೆಲಸ ಹಲವು ಕಡೆ ಸದ್ದಿಲ್ಲದೆ ನಡೆಯುತ್ತಿದೆ. ಇಂದು ಗೋವನ್ನು ಹಾಲಿಗಿಂತಲೂ ಇತರ ಉತ್ಪನ್ನಗಳ ಕಾರಣದಿಂದ ಸಾಕಬೇಕಾಗಿದೆ. ಹಾಲು ಉತ್ಪಾದನೆಗಿಂತಲೂ ಮಣ್ಣಿನ ಸಂರಕ್ಷಣೆಯ ಕಾರಣದಿಂದ ಸೆಗಣಿ, ಗೋಮೂತ್ರ ಬಳಕೆ ಬಗ್ಗೆ ಜಾಗೃತಿ ಆಗಬೇಕಿದೆ. ಇದಕ್ಕಾಗಿ ಗೋವಿನ ಉತ್ಪನ್ನ ತಯಾರಕ ಕೃಷಿಕರ ಹಾಗೂ ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ “ಗೋಸುರಭಿ” ಯನ್ನು ರೂರಲ್ ಮಿರರ್ ಡಿಜಿಟಲ್ ಮಿಡಿಯಾ ನಡೆಸುತ್ತಿದೆ. ಸದ್ಯದಲ್ಲೇ ನಿರೀಕ್ಷಿಸಿ….
ಗೋವನ್ನು ಹಾಲಿಗಾಗಿ ಮಾತ್ರಾ ಸಾಕುತ್ತಿಲ್ಲ ಎನ್ನುವ ಹಲವು ಕೃಷಿಕರು ಇದ್ದಾರೆ. ಹಾಲು ಹಾಗೂ ಅದರ ಉತ್ಪನ್ನಗಳ ಹೊರತಾಗಿ ಅನೇಕ ಉತ್ಪನ್ನಗಳು ತಯಾರಾಗುತ್ತಿದೆ. ಇದರಿಂದ ಗೋಸಾಕಾಣಿಕೆ ಲಾಭದಾಯಕ ಮಾಡುವವರು ಇದ್ದಾರೆ. ಇಂತಹ ಕೃಷಿಕರ ಪರಿಚಯ ಮಾಡುವ ಅಭಿಯಾನ ನಡೆಸಲು ನಮ್ಮ ಡಿಜಿಟಲ್ ಮೀಡಿಯಾ ಮುಂದಾಗಿದೆ.ಇದಕ್ಕೆ “ಗೋಸುರಭಿ” ಎಂದು ಕರೆದಿದ್ದೇವೆ. ಕನಿಷ್ಠ 15 ದಿನಗಳಲ್ಲಿ ನಮಗೆ ಸಾಧ್ಯವಾಗುವ ಪ್ರಯತ್ನ ಮಾಡಬೇಕು. ಭಾರತೀಯ ಗೋವಿನ ಉಳಿಸುವ ಹಾಗೂ ಅದರ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡುತ್ತೇವೆ. ಇಷ್ಟು ಮಾತ್ರ ಅಲ್ಲ, ಮಣ್ಣಿನ ಸಂರಕ್ಷಣೆಯಲ್ಲೂ ಗೋವಿನ ಪಾತ್ರ ಬಹುಮುಖ್ಯವಾಗಿದೆ. ಈ ಮಣ್ಣು ಹಾಗೂ ಪರಿಸರದ ಸಂರಕ್ಷಣೆಯೂ ಅಗತ್ಯವಾಗಿದೆ.
ಹಾಲಿನ ಹೊರತಾಗಿ ಗೋವಿನ ಉತ್ಪನ್ನಗಳನ್ನು ತಯಾರಿಸುವ ಕೃಷಿಕರು,ಉದ್ಯಮಿಗಳು ಇದ್ದರೆ ನಮಗೆ ಮಾಹಿತಿ ನೀಡಿ. ನಮ್ಮ ಸಂಪರ್ಕ : 9449125447