ಆರ್ಟಿಕಲ್ 370 ರದ್ದು ಹಿನ್ನೆಲೆ | ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಿದವರ ಸಂಖ್ಯೆ ಹೆಚ್ಚಳ, ಹೂಡಿಕೆಗೆ ಉತ್ತೇಜನ |

April 6, 2023
5:59 PM

ಸಂವಿಧಾನ ಪರಿಚ್ಛೇದ 370 ಮತ್ತು 35A ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ  ರಾಜ್ಯವನ್ನು ಕೇಂದ್ರವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ  ವಿಭಜಿಸಿ ಆಗಸ್ಟ್ 5, 2019ರಂದು ಘೋಷಣೆ ಮಾಡಿತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಹಲವು ಪರ-ವಿರೋಧ ಅಭಿಪ್ರಾಯಗಳು ಕೇಳಿಬಂದವು.

Advertisement
Advertisement
Advertisement

ಈ ಪ್ರಕ್ರಿಯೆ ಬಳಿಕ 185 ಸ್ಥಳೀಯೇತರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ 1,559 ಕಂಪನಿಗಳು ಹೂಡಿಕೆ ಮಾಡಿವೆ ಎಂಬ ವಿಚಾರ ತಿಳಿದುಬಂದಿದೆ.

Advertisement

ಆದರೆ ಸ್ಥಳೀಯ ಜನರ ಹಕ್ಕುಗಳು, ಉದ್ಯೋಗ ಸುರಕ್ಷತೆಯನ್ನು ನೀಡುವ ಸಂವಿಧಾನ ವಿಧಿ 6ನೇ ಶೆಡ್ಯೂಲ್ ಜಾರಿಗೆ ತರುವಂತೆ ಅನೇಕ ರಾಜಕೀಯ ಪಕ್ಷಗಳು, ವ್ಯಾಪಾರಸ್ಥರು ಮತ್ತು ನಾಗರಿಕ ಸೊಸೈಟಿಗಳು ಒತ್ತಾಯಿಸುತ್ತಿರುವ ಲಡಾಕ್ ನಲ್ಲಿ ಸ್ಥಳೀಯೇತರರು ಯಾರೂ ಭೂಮಿ ಖರೀದಿಸಿಲ್ಲ.

ಈ ವಿಷಯವನ್ನು ನಿನ್ನೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ 185 ಮಂದಿ ಹೊರಗಿನವರು ಆಸ್ತಿ ಖರೀದಿಸಿಕೊಂಡಿದ್ದಾರೆ.

Advertisement

ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ  ಹೊರಗಿನ ಒಬ್ಬ ವ್ಯಕ್ತಿ ಮಾತ್ರ ಭೂಮಿಯನ್ನು ಖರೀದಿಸಿದ್ದಾರೆ, ನಂತರ 2021 ರಲ್ಲಿ 57 ಮತ್ತು 2022 ರಲ್ಲಿ 127 ಮಂದಿ ಆಸ್ತಿ ಖರೀದಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35A ನ್ನು ರದ್ದುಗೊಳಿಸಿತು.

ಜಮ್ಮು-ಕಾಶ್ಮೀರದಲ್ಲಿ ಭೂಮಿ ಮತ್ತು ಆಸ್ತಿಯನ್ನು ಖರೀದಿಸುವುದನ್ನು ಹೊರಗಿನವರಿಗೆ 2019ರ ಮೊದಲು ನಿರ್ಬಂಧಿಸಲಾಗಿತ್ತು. ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಹೊರಗಿವರೂ ಆಸ್ತಿ ಖರೀದಿಸಬಹುದೆಂದು ನಿಯಮ ತರಲಾಯಿತು. ಲಡಾಕ್ ಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ.

Advertisement

ಜಮ್ಮು-ಕಾಶ್ಮೀರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 1,559 ಕಂಪೆನಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಹೂಡಿಕೆ ಮಾಡಿವೆ. ಅಂಕಿಅಂಶ ಪ್ರಕಾರ, 310 ಕಂಪೆನಿಗಳು 2020-21ರಲ್ಲಿ ಹೂಡಿಕೆ ಮಾಡಿದ್ದು, 2021-22ರಲ್ಲಿ 175 ಕಂಪೆನಿಗಳು, 2022-23ರಲ್ಲಿ 1,074 ಕಂಪೆನಿಗಳು ಹೂಡಿಕೆ ಮಾಡಿವೆ. ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಇತ್ತೀಚೆಗೆ 66,000 ಕೋಟಿ ರೂಪಾಯಿ ಖಾಸಗಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ ಎಂದು ಜಮ್ಮು-ಕಾಶ್ಮೀರ ಗವರ್ನರ್ ಮನೋಜ್ ಸಿನ್ಹ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror