ಸಂವಿಧಾನ ಪರಿಚ್ಛೇದ 370 ಮತ್ತು 35A ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಆಗಸ್ಟ್ 5, 2019ರಂದು ಘೋಷಣೆ ಮಾಡಿತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಹಲವು ಪರ-ವಿರೋಧ ಅಭಿಪ್ರಾಯಗಳು ಕೇಳಿಬಂದವು.
ಈ ಪ್ರಕ್ರಿಯೆ ಬಳಿಕ 185 ಸ್ಥಳೀಯೇತರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ 1,559 ಕಂಪನಿಗಳು ಹೂಡಿಕೆ ಮಾಡಿವೆ ಎಂಬ ವಿಚಾರ ತಿಳಿದುಬಂದಿದೆ.
ಆದರೆ ಸ್ಥಳೀಯ ಜನರ ಹಕ್ಕುಗಳು, ಉದ್ಯೋಗ ಸುರಕ್ಷತೆಯನ್ನು ನೀಡುವ ಸಂವಿಧಾನ ವಿಧಿ 6ನೇ ಶೆಡ್ಯೂಲ್ ಜಾರಿಗೆ ತರುವಂತೆ ಅನೇಕ ರಾಜಕೀಯ ಪಕ್ಷಗಳು, ವ್ಯಾಪಾರಸ್ಥರು ಮತ್ತು ನಾಗರಿಕ ಸೊಸೈಟಿಗಳು ಒತ್ತಾಯಿಸುತ್ತಿರುವ ಲಡಾಕ್ ನಲ್ಲಿ ಸ್ಥಳೀಯೇತರರು ಯಾರೂ ಭೂಮಿ ಖರೀದಿಸಿಲ್ಲ.
ಈ ವಿಷಯವನ್ನು ನಿನ್ನೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ 185 ಮಂದಿ ಹೊರಗಿನವರು ಆಸ್ತಿ ಖರೀದಿಸಿಕೊಂಡಿದ್ದಾರೆ.
ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನ ಒಬ್ಬ ವ್ಯಕ್ತಿ ಮಾತ್ರ ಭೂಮಿಯನ್ನು ಖರೀದಿಸಿದ್ದಾರೆ, ನಂತರ 2021 ರಲ್ಲಿ 57 ಮತ್ತು 2022 ರಲ್ಲಿ 127 ಮಂದಿ ಆಸ್ತಿ ಖರೀದಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35A ನ್ನು ರದ್ದುಗೊಳಿಸಿತು.
ಜಮ್ಮು-ಕಾಶ್ಮೀರದಲ್ಲಿ ಭೂಮಿ ಮತ್ತು ಆಸ್ತಿಯನ್ನು ಖರೀದಿಸುವುದನ್ನು ಹೊರಗಿನವರಿಗೆ 2019ರ ಮೊದಲು ನಿರ್ಬಂಧಿಸಲಾಗಿತ್ತು. ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಹೊರಗಿವರೂ ಆಸ್ತಿ ಖರೀದಿಸಬಹುದೆಂದು ನಿಯಮ ತರಲಾಯಿತು. ಲಡಾಕ್ ಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ.
ಜಮ್ಮು-ಕಾಶ್ಮೀರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 1,559 ಕಂಪೆನಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಹೂಡಿಕೆ ಮಾಡಿವೆ. ಅಂಕಿಅಂಶ ಪ್ರಕಾರ, 310 ಕಂಪೆನಿಗಳು 2020-21ರಲ್ಲಿ ಹೂಡಿಕೆ ಮಾಡಿದ್ದು, 2021-22ರಲ್ಲಿ 175 ಕಂಪೆನಿಗಳು, 2022-23ರಲ್ಲಿ 1,074 ಕಂಪೆನಿಗಳು ಹೂಡಿಕೆ ಮಾಡಿವೆ. ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಇತ್ತೀಚೆಗೆ 66,000 ಕೋಟಿ ರೂಪಾಯಿ ಖಾಸಗಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ ಎಂದು ಜಮ್ಮು-ಕಾಶ್ಮೀರ ಗವರ್ನರ್ ಮನೋಜ್ ಸಿನ್ಹ ತಿಳಿಸಿದ್ದಾರೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…