ನಾಳೆ ಐಪಿಎಲ್ 2023ಕ್ಕೆ ತೆರೆ: ಅದ್ಧೂರಿಯಾಗಿ ನಡೆಯಲಿದೆ ಸಮಾರೋಪ ಸಮಾರಂಭ

May 27, 2023
10:56 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ ಹಂತದಲ್ಲಿದೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಶುಕ್ರವಾರ ನಡೆದ ಕ್ವಾಲಿಫೈಯರ್-2 (Qualifier 2) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಗುಜರಾತ್ ಟೈಟಾನ್ಸ್ ಫೈನಲ್​ಗೆ ಪ್ರವೇಶ ಪಡೆದಿದೆ. ಈ ಮೂಲಕ ಮೇ 28 ಭಾನುವಾರದಂದು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ (CSK vs GT) ಐಪಿಎಲ್ 2023 ಫೈನಲ್​ನಲ್ಲಿ ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ನರ್ ಕಾದಾಟಕ್ಕೆ ಇಡೀ ವಿಶ್ವವೇ ಕಾದುಕುಳಿತಿದೆ.

Advertisement
Advertisement
Advertisement
Advertisement

ಈ ರೋಚಕ ಕಾದಾಟ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ. ಇದರಲ್ಲಿ ಖ್ಯಾತ ರ‍್ಯಾಪರ್​​ಗಳು ಪ್ರದರ್ಶನ ನೀಡಲಿದ್ದಾರೆ. ರ‍್ಯಾಪರ್​​ಗಳಾದ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ, ಡಿವೈನ್ ಮತ್ತು ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಪಂದ್ಯಕ್ಕೂ ಮುನ್ನ ಕಿಂಗ್​ ಮತ್ತು ನ್ಯೂಕ್ಲಿಯಾ ಅಭಿಮಾನಿಗಳನ್ನು ರಂಜಿಸಿದರೆ, ಪಂದ್ಯದ ಮೊದಲ ಇನ್ನಿಂಗ್ಸ್ ನಂತರ, ಜೋನಿತಾ ಗಾಂಧಿ ಮತ್ತು ಡಿವೈನ್ ತಮ್ಮ ಪ್ರದರ್ಶನ ನೀಡಲಿದ್ದಾರೆ.

Advertisement

ಹಾಗಾದರೆ ಐಪಿಎಲ್ 2023 ಕ್ಲೋಸಿಂಗ್ ಸೆರಮನಿ ಯಾವಾಗ?, ಎಷ್ಟು ಗಂಟೆಗೆ?, ಯಾರೆಲ್ಲ ಸಾಕ್ಷಿಯಾಗಲಿದ್ದಾರೆ ಎಂಬುದನ್ನು ನೋಡೋಣ.

ಐಪಿಎಲ್ 2023 ರ ಸಮಾರೋಪ ಸಮಾರಂಭ ಎಲ್ಲಿ ನಡೆಯಲಿದೆ?

Advertisement

ಐಪಿಎಲ್ 2023 ಸಮಾರೋಪ ಸಮಾರಂಭ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಐಪಿಎಲ್ 2023 ರ ಸಮಾರೋಪ ಸಮಾರಂಭ ಯಾವಾಗ ನಡೆಯಲಿದೆ?

Advertisement

ಐಪಿಎಲ್ 2023 ರ ಸಮಾರೋಪ ಸಮಾರಂಭ ಭಾನುವಾರ (ಮೇ 28) ನಡೆಯಲಿದೆ. ಅದ್ಧೂರಿ ಕಾರ್ಯಕ್ರಮ ಸಂಜೆ ಸುಮಾರು 6 ಗಂಟೆಯಿಂದ ಶುರುವಾಗುವ ನಿರೀಕ್ಷೆಯಿದೆ.

ಐಪಿಎಲ್ 2023 ರ ಸಮಾರೋಪ ಸಮಾರಂಭದಲ್ಲಿ ಯಾರು ಭಾಗವಹಿಸಲಿದ್ದಾರೆ?

Advertisement

ರ‍್ಯಾಪರ್​​ಗಳಾದ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ, ಡಿವೈನ್ ಮತ್ತು ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ರಂಜಿಸಲಿದ್ದಾರೆ.

ಐಪಿಎಲ್ 2023 ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

Advertisement

ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಐಪಿಎಲ್ 2023 ರ ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಲೈವ್ ಸ್ಟ್ರೀಮ್ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror