ಇರಾನ್‌ ನಲ್ಲಿ ಜನಾಕ್ರೋಶ ಭುಗಿಲು | ಭಾರತೀಯರು ಸುರಕ್ಷಿತವಾಗಿ ವಾಪಾಸ್

January 19, 2026
7:23 AM

ಇರಾನ್ ನಲ್ಲಿ  ಆರ್ಥಿಕ ಕುಸಿತ, ತೀವ್ರ ಹಣದುಬ್ಬರ ಮತ್ತು ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆಗಳ ಮೇಲೆ ನಡೆದ ದಮನಕಾರಿ ಕ್ರಮದಿಂದ ಮೃತಪಟ್ಟವರ ಸಂಖ್ಯೆ 5000 ಕ್ಕೆ ಏರಿಕೆಯಾಗಿದೆ. ದೇಶದ ಹಲವು ಭಾಗಗಳಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರ್ಕಾರ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಡಿಸೆಂಬರ್ 28 ರಿಂದ ಆರಂಭವಾದ ಪ್ರತಿಭಟನೆಗಳು ದೇಶಾದ್ಯಂತ ವ್ಯಾಪಕ ಹಾನಿಗೆ ಕಾರಣವಾಗಿವೆ. ಪ್ರತಿಭಟನೆಗಳ ಹಿನ್ನಲೆಯಲ್ಲಿ 350 ಮಸೀದಿಗಳು, 400 ಆಸ್ಪತ್ರೆಗಳು ಹಾಗೂ ನೂರಾರು ತುರ್ತು ಸೇವಾ ವಾಹನಗಳು ಧ್ವಂಸಗೊಂಡಿವೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಅಸ್ಥಿರತೆ ಇರಾನಿನ ಸ್ಥಿತಿಗತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ನಡುವೆ, ಇರಾನ್ ನಲ್ಲಿ ವಾಸವಾಗಿದ್ದ ಭಾರತೀಯ ಪ್ರಜೆಗಳ ಮೊದಲ ತಂಡ  ರಾಷ್ಟ್ರ ರಾಜಧಾನಿ ದೆಹಲಿಗೆ ಸುರಕ್ಷಿತವಾಗಿ ಆಗಮಿಸಿದೆ. ಇರಾನ್ನಲ್ಲಿನ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ವಾಪಾಸ್ ಬರುವಂತೆ ನೀಡಿದ ಸೂಚನೆಯ ಮೇರೆಗೆ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ.

ಇರಾನ್ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ. ಇರಾನ್ನಲ್ಲಿರುವ ಭಾರತೀಯರು ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಹಾಗೂ ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?
September 6, 2026
12:28 PM
by: ದ ರೂರಲ್ ಮಿರರ್.ಕಾಂ
ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ
ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror