ಉಪಹಾರಕ್ಕೆ ಚಹಾ – ಚಪಾತಿ ತಿನ್ನುವುದು ಹಾನಿಕಾರಕವೆ? | ಟೀ-ಚಪಾತಿ ತಿಂದರೆ ಏನೆನ್ನುತ್ತಾರೆ ತಜ್ಞರು?

February 23, 2024
1:45 PM

ಬೆಳಿಗ್ಗೆ, ನನ್ನ ತಾಯಿ ತಿಂಡಿಯಾಗಿ ಚಹಾ ಮತ್ತು ಚಪಾತಿ(Tea- Chapathi) ನೀಡುತ್ತಾರೆ. ಬೆಳಿಗ್ಗೆ ಅವಲಕ್ಕಿ, ಉಪ್ಪಿಟ್ಟು ಅಥವಾ ಇತರ ಉಪಹಾರ(Beakfast) ಸಿದ್ಧವಾಗಿಲ್ಲದಿದ್ದರೆ, ನಾವು ಚಾಯ್-ಚಪಾತಿ ತಿನ್ನುತ್ತೇವೆ. ಅನೇಕ ಜನರು ಚಪಾತಿಯನ್ನು ಚಹಾದೊಂದಿಗೆ ತಿನ್ನುತ್ತಾರೆ. ಬಿಸಿ ಚಹಾದೊಂದಿಗೆ ಚಪಾತಿ ರುಚಿ ಅದ್ಭುತವಾಗಿದೆ. ಮೇಲಾಗಿ, ಮಧ್ಯಾಹ್ನದ ಊಟದ(Meal) ತನಕ ನಮಗೆ ಹಸಿವಾಗುವುದಿಲ್ಲ. ಆರೋಗ್ಯದ(Health) ದೃಷ್ಟಿಯಿಂದ ಚಪಾತಿ, ಟೀ ತಿನ್ನುವುದು ಸರಿಯೇ? ಚಾಯ್-ಚಪಾತಿ ಆಹಾರ ಸಂಯೋಜನೆಯು ಅನಾರೋಗ್ಯಕರವಾಗಿದೆಯೇ? ಇದರಿಂದ ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ಬೊಜ್ಜಿನ(Fat) ಸಮಸ್ಯೆ ಹೆಚ್ಚುತ್ತದೆಯೇ…?!

Advertisement
Advertisement
Advertisement

ಈ ನಿಟ್ಟಿನಲ್ಲಿ ಬಿಎಲ್‌ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಸುನೀತಾ ರೈ ಅವರು, ‘ತಿಂಡಿಗೆ ಚಹಾದೊಂದಿಗೆ ಚಪಾತಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುವುದಿಲ್ಲ. ಬೆಳಿಗ್ಗೆ ನೀವು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇದರಿಂದ ದಿನವಿಡೀ ಕೆಲಸ ಮಾಡಲು ದೇಹಕ್ಕೆ ಶಕ್ತಿ ದೊರೆಯುತ್ತದೆ. ಜೊತೆಗೆ, ಆಹಾರವು ಸಾಕಷ್ಟು ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಹೊಂದಿರಬೇಕು. ಆದರೆ ಚಹಾ ಮತ್ತು ಚಪಾತಿ ತಿನ್ನುವುದರಿಂದ ಆರೋಗ್ಯಕ್ಕೆ ಈ ಪೋಷಕಾಂಶ ಸಿಗುವುದಿಲ್ಲ’ ಎಂದು ಹೇಳುತ್ತಾರೆ.

Advertisement

‘ಅಲ್ಲದೆ, ಟ್ಯಾನಿನ್ ಕೆಫೀನ್ ಯುಕ್ತ ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಯಾವುದೇ ಒಳ್ಳೆಯದಲ್ಲ. ಚಹಾವನ್ನು ಕುಡಿಯಲು ಇದು ಸೂಕ್ತ ಸಂದರ್ಭವಲ್ಲ. ಏಕೆಂದರೆ, ಚಹಾದೊಂದಿಗೆ ಚಪಾತಿ ತಿನ್ನುವಾಗ ದೇಹವು ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ, ಈ ಉಪಹಾರದಿಂದ ಆರೋಗ್ಯವು ವಿಶೇಷ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಇದಲ್ಲದೆ, ಚಹಾದಲ್ಲಿನ ಸಕ್ಕರೆಯು ಅನೇಕ ಗಂಭೀರ ಕಾಯಿಲೆಗಳ ಸಮಸ್ಯೆಯನ್ನು ಉಂಟುಮಾಡುತ್ತದೆ. ಚಹಾ ಮತ್ತು ಚಪಾತಿಯಲ್ಲಿ ಅಗತ್ಯದ ಪೋಷಕಾಂಶಗಳು ಮತ್ತು ನಾರಿನಂಶ ಇರುವುದಿಲ್ಲ. ಅಲ್ಲದೇ, ಗೋಧಿ ಹಿಟ್ಟಿನಲ್ಲಿರುವ “ಗ್ಲುಟೆನ್” ಎಂಬ ಜಿಗುಟು ಪದಾರ್ಥ ಕರುಳುಗಳಿಗೆ ಅಂಟಿಕೊಂಡು ಅಪಾಯವನ್ನುಂಟು ಮಾಡುತ್ತದೆ. ಮಲಬದ್ಧತೆ ಮತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಆರೋಗ್ಯಕರ ಉಪಹಾರ ಎಂದರೇನು…?: ನೀವು ತ್ವರಿತ ಆದರೆ ಆರೋಗ್ಯಕರ ಉಪಹಾರವನ್ನು ಹೊಂದಲು ಬಯಸಿದರೆ, ಪಲ್ಯ-ಚಪಾತಿ, ಮೊಸರು-ಚಪಾತಿ, ಹಾಲು ಅಥವಾ ನೀವು ಬೆಣ್ಣಿಯೊಂದಿಗೆ ತಿನ್ನಬಹುದು. ಅಥವಾ ನೀವು ಕಾರ್ಬೋಹೈಡ್ರೇಟ್ ಭರಿತ ಉಪಹಾರಕ್ಕಾಗಿ ದಲಿಯಾ (ನುಚ್ಚು), ಉಪ್ಪಿಟ್ಟು, ದೋಸೆ, ಇಡ್ಲಿ ಅಥವಾ ಅಪ್ಪಮ್ ಅನ್ನು ಸೇವಿಸಬಹುದು.

Advertisement

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

'Eating chapati with tea for breakfast is harmful to health. Eating both together will not provide enough nutrition to the body. You should eat nutritious food in the morning. This gives the body energy to work throughout the day. In addition, the diet should contain adequate amounts of protein, carbohydrates, calcium and iron. But eating tea and chapati does not provide this nutrient for health.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror