ಅಡಿಕೆ ಬೆಳೆಗಾರರಿಗೆ ಮುಂದೊಂದು ದಿನ ಹೀಗಾಗಬಹುದೇ…!?

September 8, 2024
9:24 PM

ಅಡಿಕೆಯ  ಭವಿಷ್ಯದ ಬಗ್ಗೆ ಪ್ರಬಂಧ ಅಂಬುತೀರ್ಥ ಅವರು ಜಾಗೃತಿಯ ಉದ್ದೇಶದಿಂದ ಬರಹವೊಂದನ್ನು ಬರೆದಿದ್ದಾರೆ. ಕೆಲವು ಸಮಯದವರೆಗೆ ಮಲೆನಾಡು-ಕರಾವಳಿ ಭಾಗದಲ್ಲಿ ಮಾತ್ರವೇ ಇದ್ದ ಅಡಿಕೆ ಬೆಳೆ ಇಂದು ದೇಶದ ವಿವಿದೆಡೆಗೆ ವ್ಯಾಪಿಸಿದೆ. ಈಚೆಗೆ ಮೇಘಾಲಯದಲ್ಲಿಯೂ 1.2 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಇರುವ ಬಗ್ಗೆಯೂ ವರದಿಯಾಗಿತ್ತು. ಕೇವಲ ತಿಂದು ಉಗುಳುವ ಅಡಿಕೆ ವ್ಯಾಪಕವಾಗಿ ವ್ಯಾಪಿಸಿಕೊಂಡರೆ ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಚಿಂತನೆ ಅಗತ್ಯ ಇದೆ. ಹೀಗಾಗಿ ಪ್ರಬಂಧ ಅಂಬುತೀರ್ಥ ಅವರ ಜಾಗೃತಿ ಹೀಗಿದೆ… ಹೀಗಾದರೆ ಏನು ಎಂಬುದರ ಬಗ್ಗೆ ತಾವುಗಳೇ ನಿರ್ಧರಿಸಿ……..ಮುಂದೆ ಓದಿ….

Advertisement
  • ಆಂಧ್ರದ ಅಡಿಕೆ ಬೆಳೆಗಾರರ ಅಡಿಕೆ ಉತ್ಪನ್ನ ಖರೀದಿಸಿ ತೃಪ್ತ ರಾದ ಉತ್ತರ ಭಾರತದ ಗುಟ್ಕೋದ್ಯಮಿ…!.
  • ಈ ವರ್ಷಕ್ಕೆ ನಮ್ಮ ಗುಟ್ಕಾ ಉತ್ಪನ್ನ ತಯಾರಿಕೆಗೆ ಆಂದ್ರದ ಅಡಿಕೆಯೊಂದೇ ಸಾಕು ” ಎಂದ ಉತ್ತರ ಭಾರತದ ಅಡಿಕೆ ಖರೀದಿದಾರ…!, ಈ ಬೆಳವಣಿಗೆಯಿಂದ ಕಂಗಾಲಾದ ಕರ್ನಾಟಕದ ಅಡಿಕೆ ಬೆಳೆಗಾರರು…!
  • ಕರ್ನಾಟಕದ ಅಡಿಕೆ ಮಂಡಿಯ ಕಡೆಯೇ ಅಡಿಕೆ ಖರೀದಿಗೆ ಬಾರದ ಉತ್ತರ ಭಾರತದ ಅಡಿಕೆ ಖರೀದಿದಾರರು…!
  • ಬೇಡಿಕೆಯೇ ಇಲ್ಲದೇ ಪಾತಾಳಕ್ಕೆ ಕುಸಿದ ಅಡಿಕೆ ಬೆಲೆ…!
  • ಅಸಹಾಯಕತೆಯಿಂದ ಕೈ ಚಲ್ಲಿದ ಆಡಿಕೆ ಮಾರಾಟ ಸಹಕಾರಿ ಸಂಘಗಳು….!
  • ಅಡಿಕೆಯನ್ನ ಉಚಿತವಾಗಿ ನೀಡುತ್ತೇವೆಂದರೂ ಕೊಂಡೊಯ್ಯೊಲೊಲ್ಲದ ಉತ್ತರ ಭಾರತದ ಅಡಿಕೆ ಖರೀದಿದಾರರು…!
  • ಎರಡು ಮೂರು ವರ್ಷಗಳಿಂದ ಮುಂದೆ ಈಗಿಗಿಂತ ಉತ್ತಮ ಬೆಲೆ ಅಥವಾ ಹೈ ರೇಟು ಬಂದಾಗ ಮಾರಾಟ ಮಾಡುತ್ತೇವೆಂದು ಕಾಯ್ದಿರಿಸಿ ಗೋಡನ್ ನಲ್ಲಿರಿಸಿದ ಅಡಿಕೆ ಉತ್ಪನ್ನ ಗಳು ಕಾಲನ ದಾಳಿಗೆ ಕುಂಬಾಗುತ್ತಿದೆ.. !
  • ಕೋಟ್ಯಂತರ ಮೌಲ್ಯದ ಅಡಿಕೆ ದೂಳಾಗಿ ಹೋಗುವ ಸಾಧ್ಯತೆ….!
  • ಸರ್ಕಾರ ಅಡಿಕೆ ಖರೀದಿಸಿ ಅಡಿಕೆ ಬೆಲೆ ಉಳಿಸಬೇಕು ಎನ್ನುವ ಅಡಿಕೆ ಬೆಳೆಗಾರರಿಗೆ ‌ಸರ್ಕಾರ ಸ್ಪಷ್ಟಪಡಿಸಿದ್ದು….‌
  • ಅಡಿಕೆ ಬೆಳೆ ಸಿಕ್ಕ ಪಟ್ಟೆ ಮಿತಿಯಿಲ್ಲದೇ ವಿಸ್ತರಣೆಯಾಗಿದೆ…!!
  • ಸರ್ಕಾರ ಬೆಂಬಲ ಬೆಲೆ ಕೊಟ್ಟು ಅಡಿಕೆ ಖರೀದಿಸಿ ಆ ಅಡಿಕೆ ಉತ್ಪನ್ನ ಸರ್ಕಾರ ಏನು‌ ಮಾಡಬೇಕು…?
  • ಸರ್ಕಾರನೇ ಗುಟ್ಕಾ ತಯಾರಿಸಿ ಅನ್ನಭಾಗ್ಯ ಯೋಜನೆಯ ಜೊತೆಗೆ ಪಡಿತರದಾರರಿಗೆ ಉಚಿತವಾಗಿ ಗುಟ್ಕಾ ನೀಡಬೇಕಾ…?
  • ಅಡಿಕೆ ಏನು ಆಹಾರ ಬೆಳೆಯ…?,ಅಡಿಕೆ ಯನ್ನು ಹಿಟ್ಟು ಮಾಡಿ ರೊಟ್ಟಿ ಮಾಡಿ ತಿನ್ನಲು ಆಗುತ್ತದಾ…?, ಸರ್ಕಾರ‌ ಅಡಿಕೆ ಖರೀದಿ ಮಾಡೋಲ್ಲ..!!

ಸರ್ಕಾರ ಸಾವಿರಾರು ಕೋಟಿ ಬಂಡವಾಳ ಹೂಡಿ ಅದರಲ್ಲಿ ಅರ್ಧ ಕಂಟ್ರಾಕ್ಟರ್ ಗಳಿಗೆ ಅಧಿಕಾರಿಗಳಿಗೆ ರಾಜಕೀಯ ಉದ್ಯಮಿ ಗಳಿಗೆ ಕಮಿಷನ್ ಕೊಟ್ಟು ಬಯಲು ಸೀಮೆಯ ಕೃಷಿ ಭೂಮಿಗಾಗಿ‌ ಮಲೆನಾಡಿನ ನದಿಗಳಿಗೆ ಆಣೆಕಟ್ಟು ಕಟ್ಟಿ ನೀರು ಹರಿಸಿದರೆ ಆ ನೀರಾವರಿ ಬಳಸಿಕೊಂಡು ಆಹಾರ ಧಾನ್ಯ ಬೆಳೆಯದೇ ಅಡಿಕೆ ಬೆಳೆದದ್ದು ಕೃಷಿಕರ ತಪ್ಪು… ಅಡಿಕೆಗೆ ಉತ್ತಮ ಬೆಲೆ ಇದ್ದಾಗ ರೈತರಿಗೆ ಸರ್ಕಾರ ಜ್ಞಾಪಕ ಆಗಲಿಲ್ಲ… ಹೀಗೆ ಅಡಿಕೆ ಬೆಳೆ ವಿಸ್ತರಣೆ ಆಗುತ್ತಾ ಹೋದರೆ ಮುಂದೊಂದು ದಿನ ಅಡಿಕೆ ಬೆಲೆ ಬಿದ್ದು ಹೋಗಬಹುದು ಎಂಬ ಜಾಗೃತೆ ರೈತರಿಗೆ ಬರಲಿಲ್ಲ.. ‌ಅಡಿಕೆಗೆ ಈಗ ಬೆಲೆ ಬಿದ್ದು ಹೋಗಿದೆ… ಅಡಿಕೆ ಬೆಳೆಗಾರರು ಈಗ ಸರ್ಕಾರದ ಬಗ್ಗೆ ಉಗ್ರವಾಗಿ ಮಾತನಾಡುತ್ತಿದ್ದಾರೆ.

ಆದರೆ ಲಗಾಯ್ತಿನಿಂದಲೂ ಕಬ್ಬು,ಭತ್ತ, ರಾಗಿ ,ಮೆಕ್ಕೆಜೋಳ, ಟೊಮ್ಯಾಟೊ ಸೇರಿದಂತೆ ತರಕಾರಿ ಬೆಳೆಗಳು ಬಹುತೇಕ ಸರ್ತಿ ಹಾಕಿದ ಮೂಲ ಬಂಡವಾಳ ಕೂಡ ಬರದಷ್ಟು ಬೆಲೆ ನೆಲಕಚ್ಚಿದಾಗ ಸರ್ಕಾರ ಹೇಗೆ ಸುಮ್ಮನಿತ್ತೋ ಹಾಗೆಯೇ ಈಗಲೂ ಸುಮ್ಮನೆ ಇರುತ್ತದೆ.. “ರೈತ ಬಂಧವರೇ ನಿಮ್ಮ ಬೆಳೆಗೆ ನೀವೇ ಜವಾಬ್ದಾರರು…”ಎಂದು ಸರ್ಕಾರ ಸುಮ್ಮನಾಯಿತು.

ರೈತ ಅಡಿಕೆ ಬೆಳೆಗಾರರು ಎಂದಿನಂತೆ ಮದುವೆಮನೆ ಊಟದ ಮನೆ ದೆಯ್ಯದ ಹರಕೆ ಯಂತಹ ಸಂಧರ್ಭದಲ್ಲಿ ಉಗ್ರವಾಗಿ ಸರ್ಕಾರ ಮತ್ತು ಗುಟ್ಕಾ ಲಾಭಿಯನ್ನ ಬೈದು ಖಂಡಿಸಿದರು….

ಬುದ್ದಿಜೀವಿಗಳು ಮಾರಾಟ ತಜ್ಞರು ಮುಂದಿನ ವರ್ಷ ಆಂದ್ರಕ್ಕೆ “ಹೊಂಡಯಿ” ಚಂಡಮಾರುತ ಬರುತ್ತದೆ ಆಗ ಆಂದ್ರದ ಅಡಿಕೆ ಬೆಳೆ ನಷ್ಟ ವಾಗುತ್ತದೆ. ಆಗ ಕರ್ನಾಟಕದ ಅಡಿಕೆ ಖರೀದಿ ಗೆ ಉತ್ತರ ದ ಅಡಿಕೆ ಖರೀದಿದಾರರು ಬರುತ್ತಾರೆ… ‌ ” ಎಂದು ಊಹಾತ್ಮಕ ತರ್ಕ ಮಾಡತೊಡಗಿದರು. ರೈತ ಅಡಿಕೆ ಬೆಳೆಗಾರರು ಈಗ ಅಡಿಕೆ ಬೆಳೆಗೆ ಪರ್ಯಾಯ ಏನು ಎಂದು ಹುಡುಕ ತೊಡಗಿದರು.

ಕೃಷಿ ಇಲಾಖೆ ಇದ್ಯಾವುದೂ ನಮಗೆ ಸಂಬಂಧಿಸಿದ ವಿಚಾರ ಅಲ್ಲವೆಂಬಂತೆ ನಿರುಮ್ಮಲವಾಗಿ ಅಡಿಕೆ ತೋಟಕ್ಕೆ ಬೇರು ಹುಳಗಳ ಭಾದೆ ಮತ್ತು ಆ ಭಾದೆಗೆ ಎಕರೆಗೆ ಎಷ್ಟು ಕ್ಲೋರೋಫರಿಫಾಸ್ ಹಾಕಬೇಕು… ಎಂಬ ಕಾರ್ಯಕ್ರಮ ಮಾಡಿ‌ ಟಿವಿಯಲ್ಲಿ ಕೃಷಿ ರಂಗ ಕಾರ್ಯಕ್ರಮ ದಲ್ಲಿ ಬಿತ್ತರಿಸಿತು..

ಜೀವನ ನೆಡೆಸಲು ಅಡಿಕೆ ಉತ್ಪತ್ತಿ ನಂಬಿಕೊಂಡ , ಅಡಿಕೆ ತೋಟ ವಿಸ್ತರಣೆ ಮಾಡಲು ಲಕ್ಷ ಲಕ್ಷ ಸಾಲ ಮಾಡಿಕೊಂಡ ಅಡಿಕೆ ಬೆಳೆಗಾರ “ಕ್ಲೋರೋಫರಿಪಾಸ್” ಎಲ್ಲಿ ಸಿಗುತ್ತದೆ ಎಂದು ಹುಡುಕತೊಡಗಿದ……

(ಇದು ನಕಾರಾತ್ಮಕ ಲೇಖನವಲ್ಲ – ಭವಿಷ್ಯದ ಅಡಿಕೆ ಉತ್ಪತ್ತಿ ಯ ಬಗ್ಗೆ ಜಾಗೃತಿ , ಹೀಗಾದರೆ ಏನು ಮಾಡಬೇಕೆಂದು ತಾವುಗಳೇ ನಿರ್ಧರಿಸಿ)

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ
ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ
April 12, 2025
12:31 PM
by: ದ ರೂರಲ್ ಮಿರರ್.ಕಾಂ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group