ಅಡಿಕೆಯ ಭವಿಷ್ಯದ ಬಗ್ಗೆ ಪ್ರಬಂಧ ಅಂಬುತೀರ್ಥ ಅವರು ಜಾಗೃತಿಯ ಉದ್ದೇಶದಿಂದ ಬರಹವೊಂದನ್ನು ಬರೆದಿದ್ದಾರೆ. ಕೆಲವು ಸಮಯದವರೆಗೆ ಮಲೆನಾಡು-ಕರಾವಳಿ ಭಾಗದಲ್ಲಿ ಮಾತ್ರವೇ ಇದ್ದ ಅಡಿಕೆ ಬೆಳೆ ಇಂದು ದೇಶದ ವಿವಿದೆಡೆಗೆ ವ್ಯಾಪಿಸಿದೆ. ಈಚೆಗೆ ಮೇಘಾಲಯದಲ್ಲಿಯೂ 1.2 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಇರುವ ಬಗ್ಗೆಯೂ ವರದಿಯಾಗಿತ್ತು. ಕೇವಲ ತಿಂದು ಉಗುಳುವ ಅಡಿಕೆ ವ್ಯಾಪಕವಾಗಿ ವ್ಯಾಪಿಸಿಕೊಂಡರೆ ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಚಿಂತನೆ ಅಗತ್ಯ ಇದೆ. ಹೀಗಾಗಿ ಪ್ರಬಂಧ ಅಂಬುತೀರ್ಥ ಅವರ ಜಾಗೃತಿ ಹೀಗಿದೆ… ಹೀಗಾದರೆ ಏನು ಎಂಬುದರ ಬಗ್ಗೆ ತಾವುಗಳೇ ನಿರ್ಧರಿಸಿ……..ಮುಂದೆ ಓದಿ….
ಸರ್ಕಾರ ಸಾವಿರಾರು ಕೋಟಿ ಬಂಡವಾಳ ಹೂಡಿ ಅದರಲ್ಲಿ ಅರ್ಧ ಕಂಟ್ರಾಕ್ಟರ್ ಗಳಿಗೆ ಅಧಿಕಾರಿಗಳಿಗೆ ರಾಜಕೀಯ ಉದ್ಯಮಿ ಗಳಿಗೆ ಕಮಿಷನ್ ಕೊಟ್ಟು ಬಯಲು ಸೀಮೆಯ ಕೃಷಿ ಭೂಮಿಗಾಗಿ ಮಲೆನಾಡಿನ ನದಿಗಳಿಗೆ ಆಣೆಕಟ್ಟು ಕಟ್ಟಿ ನೀರು ಹರಿಸಿದರೆ ಆ ನೀರಾವರಿ ಬಳಸಿಕೊಂಡು ಆಹಾರ ಧಾನ್ಯ ಬೆಳೆಯದೇ ಅಡಿಕೆ ಬೆಳೆದದ್ದು ಕೃಷಿಕರ ತಪ್ಪು… ಅಡಿಕೆಗೆ ಉತ್ತಮ ಬೆಲೆ ಇದ್ದಾಗ ರೈತರಿಗೆ ಸರ್ಕಾರ ಜ್ಞಾಪಕ ಆಗಲಿಲ್ಲ… ಹೀಗೆ ಅಡಿಕೆ ಬೆಳೆ ವಿಸ್ತರಣೆ ಆಗುತ್ತಾ ಹೋದರೆ ಮುಂದೊಂದು ದಿನ ಅಡಿಕೆ ಬೆಲೆ ಬಿದ್ದು ಹೋಗಬಹುದು ಎಂಬ ಜಾಗೃತೆ ರೈತರಿಗೆ ಬರಲಿಲ್ಲ.. ಅಡಿಕೆಗೆ ಈಗ ಬೆಲೆ ಬಿದ್ದು ಹೋಗಿದೆ… ಅಡಿಕೆ ಬೆಳೆಗಾರರು ಈಗ ಸರ್ಕಾರದ ಬಗ್ಗೆ ಉಗ್ರವಾಗಿ ಮಾತನಾಡುತ್ತಿದ್ದಾರೆ.
ಆದರೆ ಲಗಾಯ್ತಿನಿಂದಲೂ ಕಬ್ಬು,ಭತ್ತ, ರಾಗಿ ,ಮೆಕ್ಕೆಜೋಳ, ಟೊಮ್ಯಾಟೊ ಸೇರಿದಂತೆ ತರಕಾರಿ ಬೆಳೆಗಳು ಬಹುತೇಕ ಸರ್ತಿ ಹಾಕಿದ ಮೂಲ ಬಂಡವಾಳ ಕೂಡ ಬರದಷ್ಟು ಬೆಲೆ ನೆಲಕಚ್ಚಿದಾಗ ಸರ್ಕಾರ ಹೇಗೆ ಸುಮ್ಮನಿತ್ತೋ ಹಾಗೆಯೇ ಈಗಲೂ ಸುಮ್ಮನೆ ಇರುತ್ತದೆ.. “ರೈತ ಬಂಧವರೇ ನಿಮ್ಮ ಬೆಳೆಗೆ ನೀವೇ ಜವಾಬ್ದಾರರು…”ಎಂದು ಸರ್ಕಾರ ಸುಮ್ಮನಾಯಿತು.
ರೈತ ಅಡಿಕೆ ಬೆಳೆಗಾರರು ಎಂದಿನಂತೆ ಮದುವೆಮನೆ ಊಟದ ಮನೆ ದೆಯ್ಯದ ಹರಕೆ ಯಂತಹ ಸಂಧರ್ಭದಲ್ಲಿ ಉಗ್ರವಾಗಿ ಸರ್ಕಾರ ಮತ್ತು ಗುಟ್ಕಾ ಲಾಭಿಯನ್ನ ಬೈದು ಖಂಡಿಸಿದರು….
ಬುದ್ದಿಜೀವಿಗಳು ಮಾರಾಟ ತಜ್ಞರು ಮುಂದಿನ ವರ್ಷ ಆಂದ್ರಕ್ಕೆ “ಹೊಂಡಯಿ” ಚಂಡಮಾರುತ ಬರುತ್ತದೆ ಆಗ ಆಂದ್ರದ ಅಡಿಕೆ ಬೆಳೆ ನಷ್ಟ ವಾಗುತ್ತದೆ. ಆಗ ಕರ್ನಾಟಕದ ಅಡಿಕೆ ಖರೀದಿ ಗೆ ಉತ್ತರ ದ ಅಡಿಕೆ ಖರೀದಿದಾರರು ಬರುತ್ತಾರೆ… ” ಎಂದು ಊಹಾತ್ಮಕ ತರ್ಕ ಮಾಡತೊಡಗಿದರು. ರೈತ ಅಡಿಕೆ ಬೆಳೆಗಾರರು ಈಗ ಅಡಿಕೆ ಬೆಳೆಗೆ ಪರ್ಯಾಯ ಏನು ಎಂದು ಹುಡುಕ ತೊಡಗಿದರು.
ಕೃಷಿ ಇಲಾಖೆ ಇದ್ಯಾವುದೂ ನಮಗೆ ಸಂಬಂಧಿಸಿದ ವಿಚಾರ ಅಲ್ಲವೆಂಬಂತೆ ನಿರುಮ್ಮಲವಾಗಿ ಅಡಿಕೆ ತೋಟಕ್ಕೆ ಬೇರು ಹುಳಗಳ ಭಾದೆ ಮತ್ತು ಆ ಭಾದೆಗೆ ಎಕರೆಗೆ ಎಷ್ಟು ಕ್ಲೋರೋಫರಿಫಾಸ್ ಹಾಕಬೇಕು… ಎಂಬ ಕಾರ್ಯಕ್ರಮ ಮಾಡಿ ಟಿವಿಯಲ್ಲಿ ಕೃಷಿ ರಂಗ ಕಾರ್ಯಕ್ರಮ ದಲ್ಲಿ ಬಿತ್ತರಿಸಿತು..
ಜೀವನ ನೆಡೆಸಲು ಅಡಿಕೆ ಉತ್ಪತ್ತಿ ನಂಬಿಕೊಂಡ , ಅಡಿಕೆ ತೋಟ ವಿಸ್ತರಣೆ ಮಾಡಲು ಲಕ್ಷ ಲಕ್ಷ ಸಾಲ ಮಾಡಿಕೊಂಡ ಅಡಿಕೆ ಬೆಳೆಗಾರ “ಕ್ಲೋರೋಫರಿಪಾಸ್” ಎಲ್ಲಿ ಸಿಗುತ್ತದೆ ಎಂದು ಹುಡುಕತೊಡಗಿದ……
(ಇದು ನಕಾರಾತ್ಮಕ ಲೇಖನವಲ್ಲ – ಭವಿಷ್ಯದ ಅಡಿಕೆ ಉತ್ಪತ್ತಿ ಯ ಬಗ್ಗೆ ಜಾಗೃತಿ , ಹೀಗಾದರೆ ಏನು ಮಾಡಬೇಕೆಂದು ತಾವುಗಳೇ ನಿರ್ಧರಿಸಿ)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…