ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..

April 24, 2024
2:32 PM

ಇಂದಿನ ನಗರಗಳಲ್ಲಿ ವಾಸಿಸುವ ಜನರು ಪ್ಯಾಕೆಟ್ ಹಿಟ್ಟನ್ನು(Packet flour) ಬಳಸುತ್ತಾರೆ. ಆದರೆ ನಿಮ್ಮ ಮಾಹಿತಿಗಾಗಿ, ಪ್ಯಾಕೆಟ್ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನು(Chapathi) ತಿನ್ನುವುದು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ(health) ಹಾನಿಕಾರಕವಾಗಿದೆ(Effect). ಅಷ್ಟೇ ಅಲ್ಲ ಬೊಜ್ಜು(Cholesterol), ಮಧುಮೇಹದಂತಹ ಹಲವು ಗಂಭೀರ ಕಾಯಿಲೆಗಳು(Disease) ಬರುತ್ತವೆ. ಹೀಗಿರುವಾಗ ಯಾವ ಹಿಟ್ಟು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಯೋಚಿಸುತ್ತಿರಬಹುದು.

Advertisement
Advertisement

ಮೆಟ್ರೋ ನಗರಗಳಲ್ಲಿ ವಾಸಿಸುತ್ತಿರುವ ಜನರು ಪ್ಯಾಕೆಟ್ ಹಿಟ್ಟನ್ನು ಬಳಸುತ್ತಾರೆ. ಏಕೆಂದರೆ, ಅವರ ಜೀವನಶೈಲಿಯು ಹಳ್ಳಿಯಲ್ಲಿ ವಾಸಿಸುವ ಜನರಿಗಿಂತ ತುಂಬಾ ಭಿನ್ನವಾಗಿದೆ ಅಥವಾ ಅವರಿಗೆ ಬೇರೆ ಆಯ್ಕೆಗಳಿಲ್ಲ. ಆದರೆ, ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ನೀವು ಒಳ್ಳೆಯದೆಂದುಕೊಂಡು ತಿನ್ನುವ ಹಿಟ್ಟು ನಿಧಾನವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ವಾಸ್ತವವಾಗಿ, ನೀವು ತಿನ್ನುವ ಧಾನ್ಯಗಳ ಪ್ರಕಾರವು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಹಿಟ್ಟಿಗೆ ಹಲವು ಬಗೆಯ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಇವು ಧಾನ್ಯಗಳಲ್ಲಿ ಕಂಡುಬರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ.

ಈ ಹಿಟ್ಟು ಆರೋಗ್ಯಕ್ಕೆ ಹಾನಿಕರ : ಮಾರುಕಟ್ಟೆಯಲ್ಲಿ ಸಿಗುವ ಹಿಟ್ಟನ್ನು ಅತಿ ನುಣ್ಣಗೆ ಇರುತ್ತದೆ. ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ನಷ್ಟವಾಗಿರುತ್ತವೆ. ಈ ಹಿಟ್ಟಿನಲ್ಲಿ ಯಾವುದೇ ಫೈಬರ್ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪ್ಯಾಕ್ ಮಾಡಿದ ಹಿಟ್ಟಿನ ಚಪಾತಿಗಳನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ. ಹಿಟ್ಟನ್ನು ಬೆಳ್ಳಗಾಗಿಸಲು ಮತ್ತು ಉತ್ತಮವಾಗಿ ಕಾಣಲು ಕಡಿಮೆ ಗುಣಮಟ್ಟದ ಅಕ್ಕಿ ಹಿಟ್ಟನ್ನು ಸೇರಿಸಲಾಗುತ್ತದೆ. ಹಿಟ್ಟು ಬೇಗನೆ ಕೆಡುವುದನ್ನು ತಡೆಯಲು ಅದಕ್ಕೆ ರಾಸಾಯನಿಕಗಳನ್ನು ಕೂಡ ಸೇರಿಸಲಾಗುತ್ತದೆ. ಪ್ಯಾಕ್ ಮಾಡಿದ ಹಿಟ್ಟನ್ನು ತಿನ್ನುವುದು ಮಧುಮೇಹ, ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಆರೋಗ್ಯಕ್ಕಾಗಿ ಹಿಟ್ಟು ‘ಹೀಗೆ’ ಇರಬೇಕು: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ನೀವು ಹೆಚ್ಚು ಜಾಗರೂಕರಾಗಿರಲು ಬಯಸಿದರೆ, ನೀವೇ ಧಾನ್ಯಗಳನ್ನು ಗಿರಣಿಯಿಂದ ಬೀಸಿಕೊಂಡು ಬರಬೇಕು. ಆರ್ಥಿಕವಾಗಿ ಸ್ಥಿತಿವಂತರಿದ್ದರೆ ಮನೆಯಲ್ಲಿ ಸ್ವಂತ ಗಿರಣಿ ಹೊಂದಿರುವುದು ಹೆಚ್ಚು ಲಾಭದಾಯಕ. ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿ ಮತ್ತು ಪ್ಯಾಕೆಟ್ ಹಿಟ್ಟನ್ನು ಬಳಸಬೇಡಿ. ಗಿರಣಿಯಲ್ಲಿ ನಿಮ್ಮ ನಿರೀಕ್ಷಣೆ ಅಡಿಯಲ್ಲಿ ಬೀಸಿದ ಹಿಟ್ಟು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಆರೋಗ್ಯ ಎರಡಕ್ಕೂ ತುಂಬಾ ಒಳ್ಳೆಯದು. ಆದರೆ, ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ ಬೀಸಿ ತಂದ ಹಿಟ್ಟನ್ನು ಜರಡಿ ಹಿಡಿಯಬಾರದು! ಹಿಟ್ಟನ್ನು ಜರಡಿ ಹಿಡಿದು ತೆಗೆದ ಹೊಟ್ಟು ನಿಮ್ಮ ಹಿಟ್ಟಿನ ಪ್ರಮುಖ ಭಾಗವಾಗಿದೆ. ಏಕೆಂದರೆ, ಅದು ನಾರಿನಂಶ ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಭರಿತ ಹಿಟ್ಟು ತಿನ್ನುವುದರಿಂದ ಬೊಜ್ಜು, ಮಲಬದ್ಧತೆ, ಮಧುಮೇಹ, ಹೃದ್ರೋಗ, ಥೈರಾಯ್ಡ್, ಕೊಲೆಸ್ಟ್ರಾಲ್, ಇತ್ಯಾದಿ ಕಾಯಿಲೆಗಳನ್ನು ತಡೆಯಲು ಸಹಾಯಕವಾಗುತ್ತದೆ. ಇದು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಾಧ್ಯವಾದಷ್ಟೂ ಗೋಧಿ ಹಿಟ್ಟಿನ ಬಳಕೆಯನ್ನು ತಪ್ಪಿಸಬೇಕು. ಏಕೆಂದರೆ, ಗೋಧಿಯಲ್ಲಿ ಕಡಿಮೆ ಫೈಬರ್ ಅಂಶವಿದೆ. ಗೋಧಿಯ ಬದಲು ಜೋಳ, ರಾಗಿ, ಸಜ್ಜೆ, ಸಿರಿಧಾನ್ಯಗಳು, ಇತ್ಯಾದಿ ಧಾನ್ಯಗಳ ಹಿಟ್ಟನ್ನು ಬಳಸಬಹುದು. ಈ ರೀತಿಯ ಹಿಟ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಇತ್ತೀಚಿಗೆ ಮಲ್ಟಿ ಗ್ರೇನ್ ಅಂದರೆ ಬಹುಧಾನ್ಯ ಹಿಟ್ಟನ್ನು ಬಳಸುವ ಗೀಳು ಸಾಮಾನ್ಯವಾಗಿದೆ. ಆದರೆ ನೆನಪಿಡಿ, ಈ ಮಲ್ಟಿ ಗ್ರೇನ್ ತಿನ್ನುವ ಅಭ್ಯಾಸವು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ! ಹೆಚ್ಚೆಂದರೆ, ಕೇವಲ ಮೂರು ಪ್ರಕಾರದ ಧಾನ್ಯಗಳನ್ನು ಬೆರೆಸುವುದು ಸೂಕ್ತ. 8-10 ಪ್ರಕಾರದ ಧಾನ್ಯಗಳೆಲ್ಲ ಒಟ್ಟಿಗೆ ಪ್ರತಿದಿನ ನಮ್ಮ ಶರೀರಕ್ಕೆ ಬೇಕಾಗುವುದಿಲ್ಲ. ಅವುಗಳನ್ನು ಬೆರೆಸಿ ಹಿಟ್ಟು ಮಾಡುವುದಕ್ಕಿಂತಲೂ ಪ್ರತ್ಯೇಕವಾಗಿ ಭಿನ್ನ ರೂಪದಲ್ಲಿ ಬಳಸುವುದು ಹೆಚ್ಚು ಸೂಕ್ತ. ಪ್ರತಿದಿನ ನೀವು ಬಳಸುವ ಧಾನ್ಯ ಹಾಗೂ ತರಕಾರಿಗಳಲ್ಲಿ ಬದಲಾವಣೆ ಮಾಡಿದರೆ ಸಾಕು. ಆಹಾರದಲ್ಲಿ ಪ್ರತಿನಿತ್ಯ ವೈವಿಧ್ಯತೆ ಇದ್ದರೆ ಹೆಚ್ಚು ಸೂಕ್ತ ಮತ್ತು ಆರೋಗ್ಯಕರವಾಗಿರುತ್ತದೆ.

Advertisement

ಸಂಕಲನ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group