ಮನುಷ್ಯನಿಗೆ ಬದುಕಲು ನೀರು(Water) ಅತಿ ಮುಖ್ಯ. ವಿಶ್ವದಾದ್ಯಂತ ನೀರಿನ ಬವಣೆ(Water scarcity) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕುಡಿಯುವ ನೀರಿನ(Drinking water) ಸಮಸ್ಯೆ ತಾರಕಕ್ಕೇರುತ್ತಿದೆ. ನೀರು ಇದ್ದರು ಅದು ಎಷ್ಟು ಶುದ್ದವಾಗಿದೆ. ಕುಡಿಯಲು ಯೋಗ್ಯವಾಗಿದೆಯೇ..? ಅನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇದೀಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(Karnataka State Pollution Control Board) ಪ್ರಕಾರ, ರಾಜ್ಯದ 10 ಪ್ರಮುಖ ನದಿಗಳು ಕಲುಷಿತಗೊಂಡಿವೆ. ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯಗಳು(Industrial waste) ನೇರವಾಗಿ ನದಿಗಳಿಗೆ(River) ಸೇರುತ್ತಿರುವುದರಿಂದ ನದಿಗಳು ಕಲುಷಿತಗೊಂಡಿವೆ ಎಂದು ಮಾಹಿತಿ ನೀಡಿದೆ.
ನದಿಗಳ ಮಾಲಿನ್ಯ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ರಾಜ್ಯದ ನದಿಗಳ ಮಾಲಿನ್ಯದ ಪ್ರಮಾಣದ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ. ಅದರ ಪ್ರಕಾರ ರಾಜ್ಯದ 10 ಪ್ರಮುಖ ನದಿಗಳು ಕಲುಷಿತಗೊಂಡಿವೆ ಎನ್ನುವ ಅಧಿಕೃತ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲೇ ದಕ್ಷಿಣ ಪಿನಾಕಿನಿ ಹೆಚ್ಚು ಮಲೀನ: ಸಿಪಿಸಿಬಿ (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ವರದಿ ಪ್ರಕಾರ, ಬೆಂಗಳೂರಿನ ನಂದಿ ಬೆಟ್ಟದಲ್ಲಿ ಹುಟ್ಟಿ ಬಂಗಾಳ ಕೊಲ್ಲಿ ಸೇರುವ ದಕ್ಷಿಣ ಪಿನಾಕಿನಿ ನದಿ ರಾಜ್ಯದ ಅತೀ ಕಲುಷಿತವಾಗಿದೆ. ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಎಂಜಿ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಪಿನಾಕಿನಿ ನೀರಿನಲ್ಲಿ 111.0 ರಷ್ಟಿತ್ತು. ಅಘನಾಶಿನಿಯಲ್ಲಿ 3.3, ಅರ್ಕಾವತಿ 39.0, ಭದ್ರಾ 7, ಭೀಮಾ 4, ಕಾವೇರಿ 6, ಗಂಗಾವಳಿ 3.4, ಕಬಿನಿ 3.8, ಕಾಗಿಣ 3.1, ಕೃಷ್ಣ 4.7, ಲಕ್ಷ್ಮಣತೀರ್ಥ 5.6, ನೇತ್ರಾವತಿ 6.0, ಶರಾವತಿ 3.3, ಶಿಂಶಾ 9.5, ತುಂಗಾ 6.0, ತುಂಗಾಭದ್ರಾ 6.2ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟಾರೆ ರಾಜ್ಯದ 16 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ, ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣಾ, ಕಾಗಿನ ಹಾಗೂ ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದೆ. ಹಾಗಾಗಿ ಈ ನದಿಗಳನ್ನು ಬಿಟ್ಟು 10 ನದಿಗಳ ಹೆಸರನ್ನು ಪ್ರಸ್ತಾಪಿಸಿ ಮಲಿನಗೊಂಡ ನದಿಗಳ ಕುರಿತ ಪ್ರಮಾಣಪತ್ರವನ್ನು ರಾಷ್ಟ್ರೀಯ ಹಸಿರು ಪೀಠಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಕೆ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ ರಾಜ್ಯದ ಆರು ನದಿಗಳು ಸೇಫ್ ಆಗಿದ್ದು, ಮಾಲಿನ್ಯ ಮಟ್ಟದ ಮಿತಿಯ ಒಳಗಡೆ ಇದೆ. ಅಘನಾಶಿನಿಯಲ್ಲಿ 3.3, ಗಂಗಾವಳಿ 3.4, ಕಾಗಿಣ 3.1, ಕೃಷ್ಣಾ 4.7, ನೇತ್ರಾವತಿ 6.0, ಶರಾವತಿ 3.3 ಬಿಒಡಿ ಪ್ರಮಾಣ ಇದ್ದದ್ದು ಈಗ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ ಎಂದು ತಿಳಿಸಿದೆ. ಹಾಗಾಗಿ ಈ ನದಿಗಳ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ ಮಲಿನತೆಯ ಮಿತಿಯ ಒಳಗಡೆ ಇದೆ ಎಂದು ಪರಿಗಣಿಸಬಹುದಾಗಿದೆ.
Source : ಈಟಿವಿ ಭಾರತ್
ಭಾರತದ ಮೇಲೆ ನೈಋತ್ಯ ಮಾನ್ಸೂನ್ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490