Advertisement
Opinion

#Rassia-Ukrain| ವಿಶ್ವ ಒಂದು ಬಹುದೊಡ್ಡ ಅನಾಹುತಕ್ಕೆ ಕಾಯುತ್ತಿದೆಯೇ.!? | ಮಿತಿ ಮೀರುತ್ತಿದೆ ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ..! |

Share

ರಷ್ಯಾ ಉಕ್ರೇನಿನ ಗಡಿ ಭಾಗದಲ್ಲಿ ಅತ್ಯಂತ ಅಪಾಯಕಾರಿ ಅಣ್ವಸ್ತ್ರಗಳನ್ನು ಉಪಯೋಗಿಸಲು ಸಿದ್ದವಾಗಿ ನಿಯೋಜಿಸಿದೆ. ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ ಮಿತಿ ಮೀರುತ್ತಿದೆ ತನ್ನ ದೇಶದಲ್ಲಿ ಬಂಡಾಯವೆದ್ದ ಎಲ್ಲರನ್ನೂ ಕೊಲ್ಲುತ್ತಿದ್ದಾರೆ. ಆಡಳಿತ ವಿರುದ್ಧದ ಧ್ವನಿ ಎತ್ತುವವರನ್ನು ಬಂಧಿಸುವ ಮೂಲಕ ಸದ್ದು ಅಡಗಿಸುತ್ತಿದ್ದಾರೆ. ಹುಚ್ಚತನದ ಪರಮಾವಧಿ ತಲುಪುತ್ತಿರುವಂತಿದೆ….

Advertisement
Advertisement

ಇತ್ತ ಕಡೆ ಉಕ್ರೇನ್ ಅಧ್ಯಕ್ಷ ವೊಲೋಡ್ಮಿರ್ ಯೆಲೆನ್ಸ್ಕಿ ಮತ್ತಷ್ಟು ಹಠಮಾರಿಯಾಗುತ್ತಿದ್ದಾರೆ. ತನ್ನ ದೇಶದ ಎಷ್ಟು ಜನ ಸತ್ತರು ಚಿಂತೆ ಇಲ್ಲ, ತಾನು ಮಾತ್ರ ವಿಶ್ವದ ಪ್ರತಿರೋಧದ ಹೀರೋ ಆಗಬೇಕು ಎಂಬ ಹುಚ್ಚಿಗೆ ಬಿದ್ದು ತನ್ನದೇ ಜನರ ಮಾರಣಹೋಮಕ್ಕೆ ಕಾರಣವಾಗುತ್ತಿದ್ದಾರೆ….

Advertisement

ಅಮೆರಿಕದ ಬೈಡೆನ್ ನೇತೃತ್ವದ ನ್ಯಾಟೋ ತಮ್ಮ ಬತ್ತಳಿಕೆಯಲ್ಲಿರುವ ಕೆಲವು ಅನಾಹುತಕಾರಿ ಆಯುಧಗಳನ್ನು ಉಕ್ರೇನಿಗೆ ನೀಡಿ ಝಲೆನ್ಸ್ಕಿಯನ್ನು ಪ್ರಚೋದಿಸುತ್ತಾ ಹೊಡೆದಾಡಿ ಸಾಯಿರಿ ಎಂದು ಯುದ್ದಾಟ ಆಡಿಸುತ್ತಿದ್ದಾರೆ. ಯುದ್ಧ ವಿರಾಮದ ಮಾತುಕತೆಯ ಸೊಲ್ಲೆತ್ತುತ್ತಲೇ ಇಲ್ಲ…..

ವಿಶ್ವದ ಜನ ಸಾಮಾನ್ಯರು ಎಂದಿನಂತೆ ಕಾರ್ಪೊರೇಟ್ ಜಗತ್ತಿನ ಬಲೆಯೊಳಗೆ ಸಿಲುಕಿ ಕುಟುಂಬ ನಿರ್ವಹಣೆಗಾಗಿಯೇ ಇಡೀ ಬದುಕನ್ನು ಸವೆಸುತ್ತಾ ಜೀವನೋತ್ಸಾಹವನ್ನೇ ಕಳೆದುಕೊಂಡಂತೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ತಮಗೂ ಇದಕ್ಕೂ ಸಂಬಂಧವಿಲ್ಲ. ಒಂದು ವೇಳೆ ಜಗತ್ತು ಹಾಳಾಗಿ ಹೋಗುವುದಾದರೆ ಹೋಗಲಿ ಬಿಡಿ ಎನ್ನುವ ನಕಾರಾತ್ಮಕ ಪ್ರತಿಕ್ರಿಯೆಗೆ ಬಂದಿದ್ದಾರೆ…..

Advertisement

ಜಗತ್ತಿನ ಎಲ್ಲಾ ಧರ್ಮಗಳ ಶಾಂತಿ ಬೋಧಕ ಧರ್ಮಗುರುಗಳು ಲಕ್ಷಾಂತರ ಜನರ ಮಾರಣಹೋಮವಾಗಿ ತದನಂತರ ಅಳಿದುಳಿದವರ ಸೇವಾ ಕಾರ್ಯ ಮಾಡಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆಯಲು ಹವಣಿಸುತ್ತಿದ್ದಾರೆ…..

18 ತಿಂಗಳ ದೀರ್ಘ ಅವಧಿಯ ಎರಡು ದೇಶಗಳ ಯುದ್ಧದಲ್ಲಿ ಅನೇಕ ಸಾವು ನೋವು ವಲಸೆ ಎಲ್ಲವನ್ನೂ ನೋಡಿದ ನಂತರವೂ ವಿಶ್ವದ ಪ್ರತಿಕ್ರಿಯೆ ಮಾತ್ರ ಅನಾಗರಿಕವಾಗಿದೆ ಎಂದೇ ಹೇಳಬೇಕಾಗುತ್ತದೆ. ಕನಿಷ್ಠ ಯುದ್ಧ ವಿರಾಮ ಘೋಷಿಸಿ ಮಾತುಕತೆಯ ಹಂತಕ್ಕೂ ಇನ್ನೂ ಹೋಗಿಲ್ಲ ಎಂದಾದರೆ ಖಂಡಿತ ವಿಶ್ವ ಮತ್ತೊಂದು ಬೃಹತ್ ನರಮೇದಕ್ಕೆ ಸಾಕ್ಷಿಯಾಗಲು ಕಾಯುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ……

Advertisement

ಬೆಂಕಿಯ ಕಿಡಿ ಹೊತ್ತಿಸಲು, ಅದನ್ನು ಹಬ್ಬಿಸಲು, ಅದರ ಜ್ವಾಲೆಯಲ್ಲಿ ಸುಡಲು ಹಾತೊರೆಯುವ ಮನಸ್ಸುಗಳ ನಡುವೆ ಬೆಳಕಿನ ದೀಪ ಹಚ್ಚುವ ಹೃದಯಗಳ ಸಂಖ್ಯೆ ಕ್ಷೀಣಿಸುತ್ತಿದೆ. ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಯಬಹುದು. ಪುಟಿನ್ ಹತಾಶನಾಗುತ್ತಿದ್ದಾನೆ. ಲಕ್ಷಾಂತರ ಉಕ್ರೇನ್ ನಾಗರಿಕರು ಯಾವುದೇ ಕ್ಷಣದಲ್ಲಿ ಆಪತ್ತಿಗೆ ಸಿಲುಕಬಹುದು….

” ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ ” ಎಂದು ಈ ಮೂರ್ಖರಿಗೆ ಹೇಳುವವರು ಯಾರು, ಅಮಾಯಕ ಜನರ ನೋವು ಸಂಕಷ್ಟಗಳನ್ನು ಪರಿಹರಿಸುವವರು ಯಾರು, ಯುದ್ಧದ ಪರಿಣಾಮ ಉಂಟುಮಾಡುವ ಭೀಕರ ಪರಿಸ್ಥಿತಿ ನಿಭಾಯಿಸುವವರು ಯಾರು, ಎಲ್ಲಿ ಅಡಗಿ ಕುಳಿತಿದ್ದಾರೆ ವಿಶ್ವದ ಆ ಸೃಷ್ಟಿಕರ್ತ ದಿವ್ಯ ಶಕ್ತಿಗಳು…..

Advertisement

ಶತಮಾನಗಳ ಹಿಂದಿನ ಕೆಲವೇ ಕೆಲವು ಬಲಿಷ್ಠ ಶಾಂತಿ ದೂತ ನಾಯಕರು ನೆನಪಾಗುತ್ತಿದ್ದಾರೆ. ಬಹುಶಃ ಅವರು ಇದ್ದಿದ್ದರೆ ಒಂದಷ್ಟು ಶಾಂತಿಯ ಧ್ವನಿ ವಿಶ್ವಮಟ್ಟದಲ್ಲಿ ಮೊಳಗುತ್ತಿತ್ತು. ಈಗ ಒಣ ಪ್ರತಿಷ್ಟೆಯ ವಿನಾಶಕಾರಿ ನಾಯಕರೇ ಹೆಚ್ಚಾಗಿದ್ದಾರೆ. ಆದರೂ ಯಾವುದೇ ಸಾಮೂಹಿಕ ಹತ್ಯಾಕಾಂಡ ಆಗದಿರಲಿ ಎಲ್ಲವೂ ಸುಖಾಂತ್ಯವಾಗಲಿ, ಸದ್ಯದ ವಿಶ್ವದ ಪ್ರಭಾವಿ ರಾಜಕೀಯ ಮತ್ತು ಧಾರ್ಮಿಕ ನಾಯಕರು ಆದಷ್ಟು ಬೇಗ ಆಸಕ್ತಿ ತೆಗೆದುಕೊಂಡು ಯುದ್ಧ ನಿಲ್ಲಿಸಲು ಪ್ರಯತ್ನಿಸಲಿ, ಆರ್ಥಿಕ ಶೃಂಗಸಭೆಯ ರೀತಿ ಜಾಗತಿಕ ಮಟ್ಟದ ಯುದ್ಧ ವಿರೋಧಿ ಶಾಂತಿ ಶೃಂಗಸಭೆ ನಡೆಯಲಿ, ಸಾಧ್ಯವಾದರೆ ಅಲಿಪ್ತ ನೀತಿಯ ಭಾರತವೇ ಅದರ ನೇತೃತ್ವ ವಹಿಸಿಲಿ ಎಂದು ಆಶಿಸುತ್ತಾ………

ಬರಹ :
ವಿವೇಕಾನಂದ ಎಚ್.ಕೆ., 9844013068..
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |

ರಬ್ಬರ್‌ ಆಮದು ತಡೆಯಾದರೆ ಟಯರ್‌ ಉದ್ಯಮ ಹಾಗೂ ರಬ್ಬರ್‌ ಬೆಳೆಗಾರರ ರಕ್ಷಣೆ ಸಾಧ್ಯವಿದೆ…

15 mins ago

Karnataka Weather | 21-05-2024 | ರಾಜ್ಯದ ಹಲವು ಕಡೆ ಮುಂದುವರಿದ ಮಳೆ | ಮೇ.23 ನಂತರ ಮಳೆ ಕಡಿಮೆ |

ಮೇ 22 ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 26ರಂದು ಮ್ಯಾನ್ಮಾರ್,…

52 mins ago

ಬೆವರುವುದು ಕಿರಿಕಿರಿ ಎನಿಸಿದರೂ ಬೆವರಿನಿಂದಾಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿಪಡುತ್ತೀರಿ..!

ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…

17 hours ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…

23 hours ago

ಚುನಾವಣಾ ಕಣ | ಇಂದು 5 ನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ

ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…

24 hours ago