ಬಿಪಿಎಲ್ ಕಾರ್ಡ್‌ದಾರರೇ ಕಾರು ಇದೆಯಾ..? ಹಾಗಾದ್ರೆ ನಿಮ್ಮ BPL Card ಉಳಿಯೋದು ಡೌಟು | ಚಿಂತನೆ ನಡೆಯುತ್ತಿದೆ.. ! |

August 4, 2023
8:26 PM
ಕಾರು ಇರುವವರಿಗೆ ಬಿಪಿಎಲ್ ಕಾರ್ಡ್‍ನಲ್ಲಿ ಉಚಿತ ಅಕ್ಕಿ ಬೇಕಾ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನ ಆಹಾರ ಸಚಿವ ಮುನಿಯಪ್ಪ ಕೊಟ್ಟಿದ್ದಾರೆ.

ಈ ಬಿಪಿಎಲ್‌ ಕಾರ್ಡ್‌ದಾರರಿಗೆ ಒಂದಲ್ಲ ಒಂದು ಸುದ್ದಿಗಳನ್ನು ಸರ್ಕಾರ ನೀಡುತ್ತಲೇ ಇರುತ್ತದೆ. ಹೆಚ್ಚಿನ ಬಾರಿ ಸಿಹಿ ಸುದ್ದಿ ನೀಡಿದ್ರೆ ಈ ಬಾರಿ ಕಹಿ ಸುದ್ದಿಯನ್ನು ನೀಡಿದೆ. ಇದೀಗ ಸರ್ಕಾರ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಚಿಂತನೆ ಮಾಡ್ತಿದ್ದು, ಸ್ವಂತ ಕಾರು ಇರುವವರಿಗೆ ಉಚಿತ ಅಕ್ಕಿ ಬೇಕಾ ಅಂತ ಸಚಿವರು ಪ್ರಶ್ನೆ ಕೇಳಿ ಅನುಮಾನ ಹುಟ್ಟು ಹಾಕಿದ್ದಾರೆ.

ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಸ್ ಸರ್ಕಾರ ಮತ್ತೊಂದು ವಿವಾದ ಸೃಷ್ಟಿ ಮಾಡಿದೆ. ಕಾರು ಇರುವವರಿಗೆ ಬಿಪಿಎಲ್ ಕಾರ್ಡ್‍ನಲ್ಲಿ ಉಚಿತ ಅಕ್ಕಿ ಬೇಕಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಈ ಮೂಲಕ ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನ ಆಹಾರ ಸಚಿವ ಮುನಿಯಪ್ಪ ಕೊಟ್ಟಿದ್ದಾರೆ.

ಕಾರು ಇರುವವರ ಕಾರ್ಡ್ ರದ್ದು ಮಾಡುವಂತೆ ಹಿಂದಿನ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ವಿವಾದ ಆದ ಬಳಿಕ ಅ ಆದೇಶಕ್ಕೆ ತಡೆ ಕೊಟ್ಟಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯೆಲ್ಲೋ ಬೋರ್ಡ್ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಅವರು ಜೀವನಕ್ಕಾಗಿ ಅದನ್ನ ಬಳಕೆ ಮಾಡುತ್ತಾರೆ. ಆದರೆ ಸ್ವಂತ ಕಾರು, ವೈಟ್ ಬೋರ್ಡ್ ಇರೋರಿಗೆ ಉಚಿತ ಅಕ್ಕಿ ಅವಶ್ಯಕತೆ ಇದೆಯಾ ಅಂತ ಚರ್ಚೆ ಮಾಡಬೇಕು ಅಂದರು.

ಈ ಮೂಲಕ ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡೋ ಸುಳಿವು ಕೊಟ್ಟರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಕುರಿತು ತನಿಖೆ ಮಾಡೋದಾಗಿ ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾ ಇದ್ದಾಗ ಇದೇ ನಿಯಮ ಜಾರಿಗೆ ತರಲು ಹೊರಟಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಈ ನಿಯಮ ಜಾರಿಗೆ ಮುಂದಾಗಿದೆ….!

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ
ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ
January 10, 2026
10:28 PM
by: ರೂರಲ್‌ ಮಿರರ್ ಸುದ್ದಿಜಾಲ
ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror