ಈ ಬಿಪಿಎಲ್ ಕಾರ್ಡ್‌ದಾರರಿಗೆ ಒಂದಲ್ಲ ಒಂದು ಸುದ್ದಿಗಳನ್ನು ಸರ್ಕಾರ ನೀಡುತ್ತಲೇ ಇರುತ್ತದೆ. ಹೆಚ್ಚಿನ ಬಾರಿ ಸಿಹಿ ಸುದ್ದಿ ನೀಡಿದ್ರೆ ಈ ಬಾರಿ ಕಹಿ ಸುದ್ದಿಯನ್ನು ನೀಡಿದೆ. ಇದೀಗ ಸರ್ಕಾರ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಚಿಂತನೆ ಮಾಡ್ತಿದ್ದು, ಸ್ವಂತ ಕಾರು ಇರುವವರಿಗೆ ಉಚಿತ ಅಕ್ಕಿ ಬೇಕಾ ಅಂತ ಸಚಿವರು ಪ್ರಶ್ನೆ ಕೇಳಿ ಅನುಮಾನ ಹುಟ್ಟು ಹಾಕಿದ್ದಾರೆ.
ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಸ್ ಸರ್ಕಾರ ಮತ್ತೊಂದು ವಿವಾದ ಸೃಷ್ಟಿ ಮಾಡಿದೆ. ಕಾರು ಇರುವವರಿಗೆ ಬಿಪಿಎಲ್ ಕಾರ್ಡ್‍ನಲ್ಲಿ ಉಚಿತ ಅಕ್ಕಿ ಬೇಕಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಈ ಮೂಲಕ ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನ ಆಹಾರ ಸಚಿವ ಮುನಿಯಪ್ಪ ಕೊಟ್ಟಿದ್ದಾರೆ.
ಕಾರು ಇರುವವರ ಕಾರ್ಡ್ ರದ್ದು ಮಾಡುವಂತೆ ಹಿಂದಿನ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ವಿವಾದ ಆದ ಬಳಿಕ ಅ ಆದೇಶಕ್ಕೆ ತಡೆ ಕೊಟ್ಟಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯೆಲ್ಲೋ ಬೋರ್ಡ್ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಅವರು ಜೀವನಕ್ಕಾಗಿ ಅದನ್ನ ಬಳಕೆ ಮಾಡುತ್ತಾರೆ. ಆದರೆ ಸ್ವಂತ ಕಾರು, ವೈಟ್ ಬೋರ್ಡ್ ಇರೋರಿಗೆ ಉಚಿತ ಅಕ್ಕಿ ಅವಶ್ಯಕತೆ ಇದೆಯಾ ಅಂತ ಚರ್ಚೆ ಮಾಡಬೇಕು ಅಂದರು.
ಈ ಮೂಲಕ ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡೋ ಸುಳಿವು ಕೊಟ್ಟರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಕುರಿತು ತನಿಖೆ ಮಾಡೋದಾಗಿ ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾ ಇದ್ದಾಗ ಇದೇ ನಿಯಮ ಜಾರಿಗೆ ತರಲು ಹೊರಟಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಈ ನಿಯಮ ಜಾರಿಗೆ ಮುಂದಾಗಿದೆ….!
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…