ನಿಮ್ಮ ಆಧಾರ್‌ ಕಾರ್ಡ್‌ಗೆ ಹತ್ತು ವರ್ಷ ತುಂಬಿದೆಯಾ…? | ಹಾಗಿದ್ದರೆ ಗಮನಿಸಿ..

January 8, 2024
1:07 PM

ಆಧಾರು ಕಾರ್ಡು(Aadhaar Card) ನವೀಕರಣ(Renewal) ಮಾಡಿಸಿ…. ನಿಮ್ಮ ಆಧಾರಿಗೆ ಹತ್ತು ವರ್ಷ ತುಂಬಿದೆಯಾ…? ತುಂಬಿದರೆ ತಕ್ಷಣ ಸಮೀಪದ ಗ್ರಾಮ ಒನ್ ಗೆ ಹೋಗಿ ರಿನೀವಲ್ ಮಾಡಿಸಿಕೊಂಡು ‘ಆಧಾರ ಪುನೀತವಾಗಿ” ‌ ‌ ನಮ್ಮ ಜೀವನ.. ನಮ್ಮ ಗ್ರಾಮೀಣ ಕೃಷಿ ಬದುಕು.. ಈ ಆಧಾರು, ಫ್ರೂಫ್(Proof) , ಬಿಪಿಎಲ್(BPL), ಬೆಳೆ ವಿಮೆ(crop insurance), ಅಕ್ರಮ‌ಸಕ್ರಮ‌ ಅರ್ಜಿ, ಎಲೆಚುಕ್ಕಿ ಶಿಲೀಂಧ್ರ, ಗೃಹಲಕ್ಷ್ಮಿ , ಕಿಸಾನ್ ಸಮ್ಮಾನ್( leaf fungus, Grilahakshmi, Kisan Samman).. ಆ ಲಿಂಕ್ ಈ ಲಿಂಕ್ ಮಾಡಿಸುವುದರೊಳಗೇ ಪಾವನವಾಗುತ್ತದೆ.

Advertisement
Advertisement

ಬೆಳಿಗ್ಗೆ ಹುಲ್ಲು ಬೀಜ ಕೇಳಿ ಪಶುವೈದ್ಯ ಇಲಾಖೆಯ ಸಿಬ್ಬಂದಿ ಗೆ ಕರೆ ಮಾಡಿದ್ದೆ.. ಅವರು ಉಚಿತ ಮೇವಿನ ಬೀಜ ಕ್ಕೆ ಆಧಾರು, ಫ್ರೂಟ್ ಐಡಿ , ಆ ಜರಾಕ್ಸು, ಈ ಓಟಿಪಿ ಕೇಳಿದರು. ನಾನು ಈ ಅಡಕೆ ಕೊಯ್ಲು ಸಮಯದಲ್ಲಿ ಇದನ್ನೆಲ್ಲ ಮಾಡುತ್ತಾ ಕೂರಲು ಪುರುಸೋತ್ತು ಇಲ್ಲ ಬೀಜ ಬೇಡ ಬಿಡಿ ಎಂದು ಕೈಬಿಟ್ಟೆ.. ಊರು ಮನೆ ಪಂಚಾಯತಿ, ಆರೋಗ್ಯ ಕೇಂದ್ರಗಳು, ಪಶುವೈದ್ಯ ಇಲಾಖೆ ಇವರಿಗೆಲ್ಲ ಯಾಕ್ರೀ, ಹಿಡುದು ಮುಟ್ಟಿದ್ದಕ್ಕೆಲ್ಲಾ ಆದಾರು, ಫ್ರೂಫ್ ಮತ್ತೊಂದು…?‌ ಯಾರಿಗೆ ಇದನ್ನೇ ಮಾಡ್ತಾ ಕೂರಕ್ಕೆ ಆಗುತ್ತದೆ…?

Advertisement

ನಮ್ಮ ಆಧಾರಿಗೆ ವಯಸ್ಸು ಎಷ್ಟು ಆಗಿದೆ ಎಂದು ನೋಡಿಕೊಂಡು ಅದನ್ನು ರಿನಿವಲ್ ಮಾಡಿಸಬೇಕು.. ಅದಕ್ಕೆ ಮತ್ತೆ ನೂರೆಂಟು ತೊಡಕು.. ಸರ್ವರೂ ಬ್ಯಿಸಿ… ಒಟ್ಟಿನಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ನಲ್ಲೇ ಹಾಸಿಗೆ ಹಾಕಿಕೊಂಡು ಒಂದು ಸ್ಟೌವ್ ಪಾತ್ರೆ ಪಡಗ ಇಟ್ಟುಕೊಂಡು ಅಲ್ಲೇ ವಾಸ್ತವ್ಯ ಹೂಡಿ ಒಂದಾದ ಮೇಲೆ ಒಂದು ಲಿಂಕ್ ಮಾಡಿಸುತ್ತಾ ಕಾಲ ದೂಡಬೇಕು ಅಷ್ಟೇ.. ಅಂದಹಾಗೆ ಇದಾದ ಮೇಲೆ ರೇಷನ್ ಕಾರ್ಡ್ ಗೆ ವಯಸ್ಸಾಗುತ್ತದೆ.. ನಂತರ ಓಟರ್ ಐಡಿಗೂ ದಶಮಾನೋತ್ಸವ ಮುಗಿತದೆ…!!

ಅನಂತರ ಮೇಲೆ ಪಾನ್ ಕಾರ್ಡ್ ಗೆ ವಯಸ್ಸು ಆಗುತ್ತದೆ.. ಮತ್ತೆ ಹೊಸ ಆದಾರ್ ಗೆ ಮತ್ತೆ ಹಳೆ ಆರ್ ಟಿ ಸಿ ಲಿಂಕು.. ಇದು ಗ್ರಾಮ ಒನ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಸಾಕುವ ಯೋಜನೆ ಯಾ….?, ಯಾಕೆ ಸರ್ಕಾರ ವೇ ಜನರಿಗೆ ತೊಂದರೆ ಕೊಡದೇ ರಿನಿವಲ್ ಮಾಡಿಕೊಡಬಾರದು….?, ಜನರನ್ನು ಮತ್ತಷ್ಟು ಗೊಂದಲ ಅವ್ಯವಸ್ಥೆ ಚಿಂತೆಗೆ ಯಾಕೆ ದೂಡಬೇಕು…?
ಬಲ್ಲವರು ಪೇಳಿ…..

Advertisement

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

Karnataka Weather | 08-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |
May 8, 2024
11:07 AM
by: ಸಾಯಿಶೇಖರ್ ಕರಿಕಳ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror