ಹಿಂದೂ ಧರ್ಮ, ಸಂಸ್ಕೃತಿ, ಆಚರಣೆಗೆ ಅದರದೇ ಆದ ಮಹೋನ್ನತ ಸ್ಥಾನವಿದೆ. ನಮ್ಮ ಹಿರಿಯರು, ಋಷಿಮುನಿಗಳು ಹಿಂದೂ ಧರ್ಮಕ್ಕೆ ಸರ್ವ ಧರ್ಮಗಳ ಸಂಯೋಜನೆಯಲ್ಲಿ ಭದ್ರ ಬುನಾದಿಯನ್ನು ಹಾಕಿದ್ದಾರೆ. ಹಿಂದೂ ಧರ್ಮವನ್ನು ಯಾರೂ ಬೇಕಾದರು ಆಚರಿಸಬಹುದು. ಅದರಲ್ಲಿ ಸಿಗುವ ನೆಮ್ಮದಿ, ಸಾರ್ಥಕತೆಯನ್ನು ನೆಚ್ಚಿಕೊಂಡು ಅದೆಷ್ಟೋ ವಿದೇಶಿಗರು ಹಿಂದೂ ಧರ್ಮಕ್ಕೆ ಮನಸೋತಿದ್ದಿದೆ. ಅಲ್ಲದೆ ಹಿಂದೂ ಧರ್ಮಕ್ಕೆ ಮತಾಂತರಗೊಂಡದ್ದು ಇದೆ. ಇದೀಗ ರಷ್ಯಾದ 8 ವರ್ಷದ ಬಾಲಕ ಕಾಶಿ ಪೀಠದ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದಾನೆ. ಈ ಮೂಲಕ ಮಾಸ್ಕೋ ನಿವಾಸಿ ಪಾರ್ವತಿ ಎನ್ನುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಈಗ ಗಣೇಶನಾಗಿ ಬದಲಾಗಿದ್ದಾನೆ.
ಈ ಹಿಂದೆ ಉತ್ತರ ಕನ್ನಡ ಗೋಕರ್ಣದಲ್ಲಿ ಸಾವಿರಾರು ಜನರು ಕಾಶಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು. ಈ ವೇಳೆ ರಷ್ಯಾದ ಮಹಿಳೆಯಾದ ಬಾಲಕನ ತಾಯಿ ಸಹ ವೀರಶೈವ ಧರ್ಮ ಸ್ವೀಕರಿಸಿದ್ದರು. ಬಳಿಕ ಪಾರ್ವತಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಅವರು ಚಾಚು ತಪ್ಪದೆ ವೀರಶೈವ ಧರ್ಮವನ್ನುಪಾಲಿಸುತ್ತಿದ್ದರು. ಅಲ್ಲದೇ ಇಷ್ಟಲಿಂಗ ಪೂಜೆಯನ್ನು ಸಹ ನಿತ್ಯವೂ ನಡೆಸುತ್ತಿದ್ದರು. ಇದರಿಂದ ಮಗ ಕೂಡ ಪ್ರಭಾವಿತನಾಗಿದ್ದು, ಅವರಂತೆ ಇಷ್ಟಲಿಂಗ ಧರಿಸಲು ಬಯಸಿದ್ದ. ಅವನ ಇಷ್ಟದಂತೆ ಪಾಲಕರು ಆತನಿಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. ಬಳಿಕ ಆತನಿಗೆ ಮರು ನಾಮಕರಣಮಾಡಿ ಶುಭ ಹಾರೈಸಿದ್ದಾರೆ.
– ಅಂತರ್ಜಾಲ ಮಾಹಿತಿ