ಇಸ್ರೇಲ್ ಆಹಾರ ಆಮದುಗಳಿಗೆ ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಕೆಲವು ದಿನಗಳ ಹಿಂದೆ ಕಳ್ಳಸಾಗಣೆಯ ಮೂಲಕ ಆಮದಾಗಿದ್ದ 58 ಟನ್ ಕಲ್ಲಂಗಡಿ ಹಣ್ಣನ್ನು ಇಸ್ರೇಲ್ ನಾಶಪಡಿಸಿದೆ. ಕೃಷಿ ಬೆಳವಣಿಗೆ ಹಾಗೂ ದೇಶದ ಕೃಷಿಕರ ಭದ್ರತೆ ಹಾಗೂ ದೇಶದ ಜನರ ಆರೋಗ್ಯ ಈ ಮೂರು ವಿಷಯಗಳ ಕಾರಣದಿಂದ ಅಲ್ಲಿನ ಸರ್ಕಾರ ಈ ಕ್ರಮ ಕೈಗೊಳ್ಳುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಆಹಾರ ಕಳ್ಳಸಾಗಣೆ ಗಂಭೀರ ಸಮಸ್ಯೆಯಾಗಿದೆ. ಹೀಗಾಗಿ ಗುಣಮಟ್ಟದ ಕೊರತೆ ಕಾಡುತ್ತದೆ, ಇದರಿಂದ ದೇಶದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಇಸ್ರೇಲ್ ಗಂಭೀರವಾಗಿ ಪರಿಗಣಿಸುತ್ತದೆ. ಈಚೆಗಿನ ವರದಿಗಳ ಪ್ರಕಾರ ಅಕ್ರಮವಾದ ಆಮದಾದ 58 ಟನ್ ಕಲ್ಲಂಗಡಿಗಳನ್ನು ಇಸ್ರೇಲಿ ಅಧಿಕಾರಿಗಳು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
ಜೋರ್ಡಾನ್ ಕಣಿವೆಯ ಗಡಿ ಮೂಲಕ ಅಕ್ರಮವಾಗಿ ಸಾಗಣೆಯಾದ ಹಣ್ಣನ್ನು ವಶಪಡಿಸಿಕೊಂಡಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಜೋರ್ಡಾನ್ ಕಣಿವೆಯಲ್ಲಿ ಹಣ್ಣುಗಳನ್ನು ಬೆಳೆಯಲಾಗಿದೆ ಎಂದು ಹೇಳುವ ನಕಲಿ ಪ್ರಮಾಣಪತ್ರಗಳನ್ನು ತೋರಿಸಿ ಇಸ್ರೇಲ್ ಒಳಗೆ ಬರಲಾಗುತ್ತಿತ್ತು. ಆದರೆ ತಪಾಸಣೆ ವೇಳೆ ಅಕ್ರಮ ಪತ್ತೆಯಾಗಿದೆ ಹಾಗೂ ಎರಡು ಟ್ರಕ್ ವಶಕ್ಕೆ ಪಡೆಯಲಾಯಿತು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.ಇಸ್ರೇಲ್ ಕಟ್ಟಿನಿಟ್ಟು ನಿಯಮ ಕಲ್ಲಂಗಡಿ ಹಣ್ಣು ಮಾತ್ರವಲ್ಲ ದೇಶಕ್ಕೆ ಪ್ರವೇಶಿಸುವ ಎಲ್ಲಾ ವಿದೇಶಿ ಹಣ್ಣುಗಳು ಮತ್ತು ತರಕಾರಿಗಳನ್ನು ಉನ್ನತ ಗುಣಮಟ್ಟದ ತಪಾಸಣೆ ನಡೆಸಲು ಕೃಷಿ ಸಚಿವಾಲಯ ಸೂಚಿಸುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ, ಗಾಜಾದಲ್ಲಿ ಬೆಳೆದ 5 ಟನ್ ಟೊಮೆಟೊಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಇಸ್ರೇಲಿ ಅಧಿಕಾರಿಗಳು ವಿಫಲಗೊಳಿಸಿದ್ದರು.
ಮಾರ್ಚ್ 2022 ರಲ್ಲಿ, ಇಸ್ರೇಲ್‌ನಲ್ಲಿ ಮಾರಾಟ ಮಾಡಲು ಉದ್ದೇಶಿಸಲಾದ 6,000 ಕ್ಕೂ ಹೆಚ್ಚು ಮೊಟ್ಟೆಗಳನ್ನು, 10 ಟನ್‌ಗಳಿಗಿಂತ ಹೆಚ್ಚು ಕಳ್ಳಸಾಗಣೆ ತರಕಾರಿಗಳನ್ನು ನಾಶಪಡಿಸಲಾಗಿತ್ತು.