ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷ ವಿಪರೀತವಾಗುತ್ತಿದೆ. ಸಂಘರ್ಷದಿಂದ ಉಭಯ ದೇಶಗಳಲ್ಲಿ ಸಾವನ್ನಪ್ಪಿದ ಯೋಧರು ಮತ್ತು ನಾಗರಿಕ ಸಂಖ್ಯೆ 5000 ದಾಟಿದೆ. ಈ ನಡುವೆ ತಮ್ಮ ಯುದ್ಧ ಪ್ಯಾಲೇಸ್ತೀನ್ ನಾಗರಿಕರ ವಿರುದ್ಧ ಅಲ್ಲ, ಕೇವಲ ಹಮಾಸ್ ಉಗ್ರರ ವಿರುದ್ಧ ಮಾತ್ರವೇ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಇಸ್ರೇಲ್ (Isrel) ಹೇಳಿದೆ.ಹೀಗಾಗಿ ಹಮಾಸ್(Hamas) ವಿರುದ್ಧದ ಸಮರವನ್ನು ಮುಂದುವರಿಸುವ ಸೂಚನೆಯನ್ನು ಇಸ್ರೇಲ್ ನೀಡಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್‌ನ 1600 ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಪ್ರದೇಶದಲ್ಲಿ 724 ಮಕ್ಕಳು ಸೇರಿದಂತೆ 2215 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗಾಜಾ ಗಡಿಯಲ್ಲಿ 1300 ಹಮಾಸ್ ಉಗ್ರರ ಶವ ಪತ್ತೆಯಾಗಿದೆ ಎಂಬ ಇಸ್ರೇಲ್ ಸರ್ಕಾರದ ಹೇಳಿದೆ. ಹೀಗಾಗಿ ಒಟ್ಟಾರೆ ಸಾವಿನ ಸಂಖ್ಯೆ 5100 ದಾಟಿದಂತಾಗಿದೆ.
ಇಸ್ರೇಲ್ ದಾಳಿಗೆ ಹೆದರಿ ದೇಶ ಬಿಡುತ್ತಿರುವ ತನ್ನದೇ ನಾಗರಿಕರನ್ನು ಹಮಾಸ್ ಉಗ್ರರು ತಡೆಯುತ್ತಿದ್ದಾರೆ. ತಮ್ಮ ಸ್ವ ಹಿತಾಸಕ್ತಿಗಾಗಿ ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಹಮಾಸ್ ಉಗ್ರರು ತಮ್ಮದೇ ನಾಗರಿಕರನ್ನು ತಡೆಯುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ.
ಇಸ್ರೇಲಿ ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಅವರು ಹಮಾಸ್‌ನ ನಾಯಕತ್ವ ಇರುವ ಉತ್ತರ ಗಾಜಾದಲ್ಲಿ ನಾಗರಿಕರು ದೂರ ಹೋಗಲು ವಿಳಂಬ ಮಾಡಬೇಡಿ. ನಾವು ಗಾಜಾದ ಮೇಲೆ ಸಮುದ್ರ, ಭೂಮಿ ಮತ್ತು ವಾಯುಮಾರ್ಗದ ಮೂಲಕ ದಾಳಿ ಮಾಡಲು ತಯಾರಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇತ್ತ 24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ. ಆದರೆ ಕೆಲವು ಪ್ರದೇಶಗಳಲ್ಲಿ ಹೀಗೆ ಜೀವ ಉಳಿಯಲು ಹೊರಟು ಹೋಗುತ್ತಿರುವ ತನ್ನ ನಾಗರಿಕರನ್ನೇ ಹಮಾಸ್ ಉಗ್ರರು ತಡೆದು ಅವರನ್ನೇ ಮಾನವ ಗುರಾಣಿಯಾಗಿ ಇರಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ.
ಇಸ್ರೇಲ್ ದಾಳಿಯಿಂದ ಗಾಯಗೊಂಡಿರುವ ಗಾಜಾಪಟ್ಟಿ ಪ್ರದೇಶದ ಸಾವಿರಾರು ಜನರು ಗಾಜಾದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಗಳ ಸೌಲಭ್ಯ ಹಾಗೂ ವ್ಯವಸ್ಥೆಗಳು ಶಿಥಿಲಾವಸ್ಥೆಗೆ ತಲಪಿದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬೇಕಾದ ಸೌಕರ್ಯಗಳು ಸಿಗದೇ ಹೋದರೆ ಸಾವಿರಾರು ಜನರು ಸಾವನ್ನಪ್ಪಲಿದ್ದಾರೆ ಎಂದು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್‌ನಿಂದ ವಾಯುದಾಳಿ ಎದುರಿಸುತ್ತಿರುವ ಗಾಜಾಪಟ್ಟಿಯಲ್ಲಿ ಜನರು ಈಗ ಆಹಾರ ಹಾಗೂ ನೀರಿಗಾಗಿ ತೀವ್ರ ಪರದಾಡುತ್ತಿದ್ದಾರೆ. ಸುರಕ್ಷಿತ ಜಾಗ ಮತ್ತು ಅನ್ನಾಹಾರಗಳನ್ನು ಅರಸಿಕೊಂಡು ಜನಸಾಮಾನ್ಯರು ಬೀದಿ ಬೀದಿ ಅಲೆಯುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…