ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಒಂದೂವರೆ ವರ್ಷ ದಾಟಿದರೂ ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ಈ ನಡುವೆ ಇನ್ನೊಂದು ಸಂಘರ್ಷ ಆರಂಭವಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ಈಗ ಸಂಘರ್ಷ ಆರಂಭವಾಗಿದೆ.ಪ್ಯಾಲೆಸ್ತೇನ್ ಹಮಾಸ್ ಉಗ್ರಗಾಮಿಗಳು ಶನಿವಾರ ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ 5,000 ಕ್ಕೂ ಹೆಚ್ಚು ರಾಕೆಟ್ ದಾಳಿ ಮಾಡಿದರು. ಇದಕ್ಕೆ ಇಸ್ರೇಲ್ ಪ್ರತೀಕಾರಕ್ಕೆ ಸಜ್ಜಾಗಿದೆ.ಉಗ್ರರ ದಾಳಿಗೆ 100ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಸಾವು ಕಂಡಿದ್ದಾರೆ.740 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಲ್ಲದೇ ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 200 ಜನರ ಹತ್ಯೆಯಾಗಿದ್ದು, 1620 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಗಡಿಗೆ ನುಗ್ಗಿ ಸೈನಿಕರನ್ನ ಹಮಾಸ್ ಉಗ್ರರು ಅಪಹರಿಸಿದ್ದಾರೆ. 35ಕ್ಕೂ ಹೆಚ್ಚು ಸೈನಿಕರನ್ನ ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಹಮಾಸ್ ಉಗ್ರರಿಂದ ಮಹಿಳಾ ಸೇನಾಧಿಕಾರಿ ಹತ್ಯೆ ಮಾಡಿದ್ದಲ್ಲದೆ, ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಹೀಗಾಗಿ ಇಸ್ರೇಲ್ ಸಿಟ್ಟಾಗಿದೆ.
ಸಂಘರ್ಷದಲ್ಲಿ ಸಾವಿನ ಸಂಖ್ಯೆ 300 ಕ್ಕಿಂತ ಹೆಚ್ಚುತ್ತಲೇ ಇರುವುದರಿಂದ ಇಸ್ರೇಲ್ ಗಾಜಾದ ಮೇಲೆ ಗಮನಾರ್ಹ ಪ್ರತೀಕಾರದ ದಾಳಿಗಳನ್ನು ಮಾಡಿದೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ನಾವು ಯುದ್ಧದಲ್ಲಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ” ಎಂದು ಎದುರಿಸಲಿ ಸಜ್ಜಾಗಿದ್ದು ಹಮಾಸ್ ಉಗ್ರಗಾಮಿಗಳು ಶನಿವಾರ ಬೆಳಿಗ್ಗೆ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳಿಗೆ ಸೈನ್ಯ ಕಳುಹಿಸಿದ್ದಾರೆ.
ಇದೀಗ ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಇಸ್ರೇಲ್‌ನ ಪ್ರತೀಕಾರದಲ್ಲಿ 232 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 1,610 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾತ್ರಿಯ ನಂತರ, ವಾಯುದಾಳಿಗಳು ತೀವ್ರಗೊಂಡವು, ಸ್ಫೋಟಗಳಲ್ಲಿ ಹಲವಾರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು, ಇದರಲ್ಲಿ 14-ಅಂತಸ್ತಿನ ಗೋಪುರವು ಡಜನ್ ಗಟ್ಟಲೆ ಅಪಾರ್ಟ್‌ಮೆಂಟ್‌ಗಳು ಮತ್ತು ಮಧ್ಯ ಗಾಜಾ ನಗರದಲ್ಲಿ ಹಮಾಸ್ ಕಚೇರಿಗಳನ್ನು ಹೊಂದಿದೆ.