ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಹಮಾಸ್ ಹಿಡಿತದಲ್ಲಿರುವ ಗಾಜಾದಲ್ಲಿನ ಭಾರತೀಯರ ರಕ್ಷಣೆಗೆ ಸತತ ಪ್ರಯತ್ನ ಮುಂದುವರಿದಿದೆ.
ಇಸ್ರೇಲ್-ಹಮಾಸ್ ಸಂಘರ್ಷವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಎರಡೂ ಕಡೆಗಳಲ್ಲಿ ಕನಿಷ್ಠ 1,600 ಜೀವಗಳು ಬಲಿಯಾಗಿದೆ. ಇದರಲ್ಲಿ ಗಾಜಾ ಭಾಗದಲ್ಲಿ 788 ಮಂದಿ ಸಾವನ್ನಪ್ಪಿದ್ದಾರೆ ಮತ್ತು 4,100 ಮಂದಿ ಗಾಯಗೊಂಡಿದ್ದಾರೆ.
ಈ ನಡುವೆ ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯ ನಡುವೆ ಜೀವ ಭಯದಿಂದ, ಮಂಗಳವಾರ ತನ್ನ ಕುಟುಂಬದೊಂದಿಗೆ ಗಾಜಾದಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯು ಯುದ್ಧ ಪೀಡಿತ ಹಮಾಸ್ ಆಳ್ವಿಕೆಯಲ್ಲಿರುವ ಪ್ರದೇಶದಿಂದ ತಕ್ಷಣ ಸ್ಥಳಾಂತರಿಸುವಂತೆ ಕೋರಿದ್ದರು. ನಾವು ಇಲ್ಲಿ ಘೋರವಾದ ಯುದ್ಧವನ್ನು ಎದುರಿಸುತ್ತಿದ್ದೇವೆ. ಕೆಲವೇ ಸೆಕೆಂಡುಗಳಲ್ಲಿ ಬಾಂಬ್ ಸ್ಫೋಟದಲ್ಲಿ ಎಲ್ಲವೂ ನಾಶವಾಗುತ್ತಿದೆ ಎಂದು ಗಾಜಾದಲ್ಲಿ ನೆಲೆಸಿರುವ ಜಮ್ಮು ಮತ್ತು ಕಾಶ್ಮೀರದ ಭಾರತೀಯರಾದ ಲುಬ್ನಾ ನಜೀರ್ ಶಾಬೂ ಅವರು ದೂರವಾಣಿಯಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದರು.
ಹಮಾಸ್ ದಾಳಿಯ ನಂತರ ಕನಿಷ್ಠ ಒಂಬತ್ತು ಅಮೆರಿಕನ್ನರು ಮೃತಪಟ್ಟಿದ್ದಾರೆ ಹಾಗೂ 25 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಪೆರುವಿನ ವಿದೇಶಾಂಗ ಸಚಿವಾಲಯ ಮಂಗಳವಾರ ಬೆಳಿಗ್ಗೆ ಪೆರುವಿಯನ್ ಪ್ರಜೆ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಘೋಷಿಸಿದೆ. ಬ್ರೆಜಿಲಿಯನ್ ಅಧಿಕಾರಿಗಳು ಬ್ರೆಜಿಲ್ ಪ್ರಜೆ ಮೃತಪಟ್ಟಿರುವ ಬಗ್ಗೆ ಹೇಳಿದೆ. ಹಮಾಸ್ ದಾಳಿ ಮಾಡಿದಾಗ ಅವರು ಶನಿವಾರ ನೋವಾ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು ಎಂದು ಹೇಳಿದೆ. ಅರ್ಜೆಂಟೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಸಂಜೆಯ ಪ್ರಕಾರ ಏಳು ಅರ್ಜೆಂಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಹದಿನೈದು ಮಂದಿ ಕಾಣೆಯಾಗಿದ್ದಾರೆ. ಕೊಲಂಬಿಯಾದ ವಿದೇಶಾಂಗ ಸಚಿವಾಲಯ ಸೋಮವಾರ ಸಂಜೆ ತನ್ನ ಇಬ್ಬರು ಪ್ರಜೆಗಳು ಕಾಣೆಯಾಗಿದೆ ಎಂದು ವರದಿ ಮಾಡಿದೆ.
ಇಸ್ರೇಲ್ ಗಾಜಾವನ್ನು ಹೊಡೆದುರುಳಿಸುತ್ತಿದ್ದಂತೆ, ಜನರು ಇದೀಗ ಸುರಕ್ಷತೆಗಾಗಿ ಹರಸಾಹಸ ಪಡುತ್ತಿದ್ದಾರೆ. ಆಯಾ ದೇಶದ ರಾಯಭಾರಿ ಕಚೇರಿ ಹಾಗೂ ವಿವಿಧ ಮಾಧ್ಯಮಗಳ ಮೂಲಕ ರಕ್ಷಣೆಗೆ ಕೇಳುತ್ತಿದ್ದಾರೆ. ಇಸ್ರೇಲಿ ಯುದ್ಧವಿಮಾನಗಳು ಮಂಗಳವಾರ ನೆರೆಹೊರೆಯಿಂದ ಗಾಜಾ ಪಟ್ಟಿಯನ್ನು ಹೊಡೆದವು, ಕಟ್ಟಡಗಳನ್ನು ನಾಶ ಮಾಡಿತು. ಇದೀಗ ಗಾಜಾಕ್ಕೆ ನೆರವು ಪಡೆಯಲು ಮಾನವೀಯ ಕಾರಿಡಾರ್‌ಗಳನ್ನು ರಚಿಸುವಂತೆ ಸಹಾಯ ಸಂಸ್ಥೆಗಳು ಮನವಿ ಮಾಡಿದವು. ಗಾಯಾಳುಗಳಿಂದ ತುಂಬಿರುವ ಆಸ್ಪತ್ರೆಗಳಿಗೆ ಸಲಕರಣೆಗಳ ಸರಬರಾಜಿಗೆ ಬಾಕಿ ಇದೆ.ಇಸ್ರೇಲ್ ಗಾಜಾಕ್ಕೆ ಆಹಾರ, ಇಂಧನ ಮತ್ತು ಔಷಧಿಗಳ ಎಲ್ಲಾ ಪ್ರವೇಶವನ್ನು ನಿಲ್ಲಿಸಿದೆ ಮತ್ತು ಗಡಿ ದಾಟುವಿಕೆಯ ಬಳಿ ವೈಮಾನಿಕ ದಾಳಿಯ ನಂತರ ಈಜಿಪ್ಟ್‌ನಿಂದ ಉಳಿದಿರುವ ಏಕೈಕ ಪ್ರವೇಶವನ್ನು ಮಂಗಳವಾರ ಸ್ಥಗಿತಗೊಳಿಸಿದೆ.
ಶನಿವಾರ ಹಮಾಸ್ ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದರು, ಕನಿಷ್ಠ 1,700 ಜನರು ಇದರಿಂದಾಗಿ ಮೃತಪಟ್ಟರು.ನಂತರ ಭಾರೀ ಹೋರಾಟ ನಡೆಯಿತು. ಇಸ್ರೇಲ್ ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಎಲ್ಲದರ ನಡುವೆ ಈಗ, ಹಮಾಸ್ ಗುಂಪು ಇಸ್ರೇಲ್‌ನೊಂದಿಗೆ ಕದನ ವಿರಾಮ ಮಾತುಕತೆಗೆ ಸಿದ್ಧವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…